Viral : ಜ್ಯೂಸ್​​ನಲ್ಲಿ ಮೂತ್ರ ಬೆರೆಸಿ ಮಾರಾಟ: ಆರೋಪಿಯ ಬಂಧನ

ಜ್ಯೂಸ್ ಅಂಗಡಿಯ ವ್ಯಾಪಾರಿಯೊಬ್ಬನು ತನ್ನ ಗ್ರಾಹಕರಿಗೆ ಮೂತ್ರ ಬೆರೆಸಿದ ಜ್ಯೂಸ್‌ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಜ್ಯೂಸ್ ಗೆ ಮೂತ್ರ ಬೆರೆಸುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಷಯವು ಗ್ರಾಹಕರ ಗಮನಕ್ಕೆ ಬರುತ್ತಿದ್ದಂತೆ, ಅಕ್ರೋಶಗೊಂಡು ವ್ಯಾಪಾರಿಯನ್ನು ಮನಬಂದಂತೆ ಥಳಿಸಿ, ಅಂಗಡಿಯನ್ನು ದ್ವಂಸಗೊಳಿಸಿದ್ದಾರೆ.

Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 14, 2024 | 3:40 PM

ರಸ್ತೆ ಬದಿಯಲ್ಲಿರುವ ಸಣ್ಣ ಪುಟ್ಟ ಅಂಗಡಿಗಳಲ್ಲಿ ಜ್ಯೂಸ್ ಕುಡಿದು ಬಾಯಾರಿಕೆ ನೀಗಿಸಿಕೊಳ್ಳುವವರೇ ಹೆಚ್ಚು. ಆದರೆ ಇನ್ಮುಂದೆ ಜ್ಯೂಸ್ ಅಂಗಡಿಗೆ ತೆರಳಿ ಜ್ಯೂಸ್ ಕುಡಿಯುವ ಮುನ್ನ ಈ ಸ್ಟೋರಿಯನ್ನೊಮ್ಮೆ ಓದಲೇಬೇಕು. ಅಂಗಡಿಯ ವ್ಯಾಪಾರಿಯೊಬ್ಬನು ತನ್ನ ಗ್ರಾಹಕರಿಗೆ ಮೂತ್ರ ಬೆರೆಸಿದ ಜ್ಯೂಸ್‌ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಜನರಿಗೆ ತಿಳಿಯುತ್ತಿದ್ದಂತೆ ಅಕ್ರೋಶಗೊಂಡಡಿದ್ದು ವ್ಯಾಪಾರಿಯನ್ನು ಮನಬಂದಂತೆ ಥಳಿಸಿದ್ದು, ಅಂಗಡಿಯನ್ನು ದ್ವಂಸಗೊಳಿಸಿದ್ದಾರೆ.

ಈ ಹಣ್ಣಿನ ಜ್ಯೂಸ್ ನಲ್ಲಿ ಮೂತ್ರ ಬೆರೆಸುವ ವಿಡಿಯೋವೊಂದು ವೈರಲ್ ಆಗಿದೆ. ಇತ್ತ ಅಂಗಡಿ ಮಾಲೀಕನು ಮನುಷ್ಯನ ಮೂತ್ರದೊಂದಿಗೆ ಹಣ್ಣಿನ ರಸವನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ ಎಂದು ಜನರ ದೂರಿನ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಸಿಪಿ ಅಂಕುರ್ ವಿಹಾರ್ ಭಾಸ್ಕರ್ ವರ್ಮಾ ಮಾಹಿತಿ ನೀಡಿದ್ದು, ಜ್ಯೂಸ್ ಮಾರಾಟಗಾರನನ್ನು ಶುಕ್ರವಾರ ಬಂಧಿಸಲಾಗಿದೆ. ಆತನ 15 ವರ್ಷದ ಮಗನನ್ನೂ ವಶಕ್ಕೆ ಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಆರೋಪಿಯನ್ನು ಅಮೀರ್ ಎಂದು ಗುರುತಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಅನಾಥ ಕಂದಮ್ಮನ ಹಸಿವು ನೀಗಿಸಿದ ಮಹಿಳಾ ಪೊಲೀಸ್ ಪೇದೆ, ಇದೇ ನೋಡಿ ತಾಯಿ ಪ್ರೀತಿ

ಪೊಲೀಸರು ಸ್ಥಳಕ್ಕಾಗಮಿಸಿ ಜ್ಯೂಸ್ ಸ್ಟಾಲ್ ನಲ್ಲಿ ಪರಿಶೀಲನೆ ನಡೆಸಿದ್ದು, ಮೂತ್ರ ತುಂಬಿದ ಪ್ಲಾಸ್ಟಿಕ್ ಡಬ್ಬವೂ ಪತ್ತೆಯಾಗಿದೆ. ಮೂತ್ರವನ್ನು ಸಂಗ್ರಹಿಸಿ ಇಟ್ಟಿದ್ದ ಬಾಟಲಿಯೊಂದನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಯುತ್ತಿದೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ