Viral Video: ಗುಂಡಿಗಳಿಂದ ಬೇಸತ್ತು ರಸ್ತೆಯಲ್ಲಿ ಭತ್ತದ ಗಿಡ ನೆಟ್ಟ ಜನ

|

Updated on: Jul 22, 2024 | 3:51 PM

ರಸ್ತೆಯ ಗುಂಡಿಗಳಿಂದ ನಿರಾಶೆಗೊಂಡ ತೆಲಂಗಾಣದ ನಿವಾಸಿಗಳು ರಸ್ತೆಯ ಹೊಂಡದಲ್ಲಿ ಭತ್ತವನ್ನು ನೆಟ್ಟಿದ್ದಾರೆ. ತೆಲಂಗಾಣ ನಿವಾಸಿಗಳು ಮುನ್ಸಿಪಲ್ ಕಮಿಷನರ್ ಮತ್ತು ಸ್ಥಳೀಯ ಅಧಿಕಾರಿಗಳ ಕಳಪೆ ಪ್ರದರ್ಶನದ ಗಮನ ಸೆಳೆಯಲು ಗುಂಡಿಗಳಲ್ಲಿ ಭತ್ತದ ಗಿಡಗಳನ್ನು ನೆಟ್ಟಿದ್ದಾರೆ.

Viral Video: ಗುಂಡಿಗಳಿಂದ ಬೇಸತ್ತು ರಸ್ತೆಯಲ್ಲಿ ಭತ್ತದ ಗಿಡ ನೆಟ್ಟ ಜನ
ಭತ್ತದ ಸಸಿ
Follow us on

ತೆಲಂಗಾಣದ ಕುತ್ಬುಲ್ಲಾಪುರದ ಬೌರಂಪೇಟ್ ನಿವಾಸಿಗಳು ಕಳಪೆ ರಸ್ತೆ ಮತ್ತು ಬೃಹತ್ ಹೊಂಡಗಳ ಬಗ್ಗೆ ಬೇಸತ್ತು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಅದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದರು. ಇಲ್ಲಿನ ನಿವಾಸಿಗಳು ನೀರು ತುಂಬಿದ ರಸ್ತೆ ಗುಂಡಿಗಳ ಬಳಿ ಬಂದು ಭತ್ತದ ಸಸಿಗಳನ್ನು ನೆಡಲು ಆರಂಭಿಸಿದರು.

ವಿಭಿನ್ನ ರೀತಿಯ ಪ್ರತಿಭಟನೆಯಲ್ಲಿ ಜನರು ಪುರಸಭೆಯ ಆಯುಕ್ತರು ಮತ್ತು ಸ್ಥಳೀಯ ಅಧಿಕಾರಿಗಳ ಕಳಪೆ ಪ್ರದರ್ಶನದ ಗಮನ ಸೆಳೆಯಲು ಗುಂಡಿಗಳಲ್ಲಿ ಭತ್ತದ ಬೆಳೆಗಳನ್ನು ನೆಟ್ಟಿದ್ದಾರೆ. ಜಲಾವೃತಗೊಂಡಿರುವ ಮತ್ತು ಹಾಳಾದ ರಸ್ತೆಗಳು ಪ್ರತಿನಿತ್ಯದ ಪ್ರಯಾಣವನ್ನು ಕಷ್ಟಕರವಾಗಿಸಿದೆ. ಹೀಗಾಗಿ, ಈ ಬಗ್ಗೆ ಶೀಘ್ರ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.


ಇದನ್ನೂ ಓದಿ: Viral Video: ಹಾವನ್ನು ಇಡಿಯಾಗಿ ನುಂಗಿ ಮತ್ತೆ ಹೊರಹಾಕಿದ ಬೃಹತ್ ನಾಗರಹಾವು; ಮೈ ಜುಮ್ಮೆನಿಸುವ ವಿಡಿಯೋ ವೈರಲ್

ಪ್ರತಿಭಟನೆಯ ವಿಡಿಯೋವನ್ನು ಕೂಡ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಗುಂಡಿಯ ಬಳಿ ಜನರು ನಿಂತು ಭತ್ತದ ಸಸಿಗಳನ್ನು ಒಂದೊಂದಾಗಿ ನೆಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:49 pm, Mon, 22 July 24