Viral: ಬ್ರೇಕಪ್‌ನಿಂದ ಹೊರ ಬರಲು ಒಂದು ವಾರ ರಜೆ ಕೊಡಿ ಎಂದ ಉದ್ಯೋಗಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 08, 2024 | 4:38 PM

ಈ Gen Z (1995 ರಿಂದ 2010 ರ ನಡುವೆ ಜನಿಸಿದವರು) ಜನರೇಷನ್‌ನ ಯುವ ಮನಸ್ಸುಗಳು ಲವ್‌, ಬ್ರೇಕಪ್‌ ಅಂತೆಲ್ಲಾ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ. ಇದೀಗ ಇಲ್ಲೊಬ್ಬ Gen Z ಉದ್ಯೋಗಿ ಲವ್‌ ಬ್ರೇಕಪ್‌ ಆಯಿತೆಂದು ಆ ನೋವಿನಿಂದ ಹೊರಬರಲಾರದೆ 1 ವಾರಗಳ ಕಾಲ ರಜೆಯನ್ನು ಕೊಡಿ ಎಂದು ಮ್ಯಾನೇಜರ್‌ ಬಳಿ ಕೇಳಿಕೊಂಡಿದ್ದಾನೆ. ಕಂಪೆನಿ ಮ್ಯಾನೇಜರ್‌ Gen Z ಉದ್ಯೋಗಿಯ ಈ ಬ್ರೇಕಪ್‌ ಲೀವ್‌ ಸ್ಟೋರಿಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Viral: ಬ್ರೇಕಪ್‌ನಿಂದ ಹೊರ ಬರಲು ಒಂದು ವಾರ ರಜೆ ಕೊಡಿ ಎಂದ ಉದ್ಯೋಗಿ
ವೈರಲ್​​​ ಪೋಸ್ಟ್​​
Follow us on

ಬ್ರೇಕಪ್‌ ನೋವಿನಿಂದ ಹೊರ ಬರುವುದು ಅಷ್ಟು ಸುಲಭದ ವಿಷಯವೇ ಅಲ್ಲ. ಇದು ಹೃದಯದಲ್ಲಿ ಅಳಿಸಲಾಗದ ಗಾಯವನ್ನು ಮಾಡುತ್ತದೆ. ಈ ನೋವಿನಿಂದ ಹೊರ ಬರಲಾರದೆ ಖಿನ್ನತೆಗೆ ಜಾರಿದವರು, ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ. ಇನ್ನೂ ಅನೇಕರು ಬ್ರೇಕಪ್‌ ನೋವಿನಿಂದ ಹೊರ ಬರಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ Gen Z ಉದ್ಯೋಗಿ ಬ್ರೇಕಪ್‌ ನೋವಿನಿಂದ ಹೊರಬರಲು ಬರೋಬ್ಬರಿ 1 ವಾರದ ರಜೆಯನ್ನು ತೆಗೆದುಕೊಂಡಿದ್ದಾನೆ. ಕಂಪೆನಿ ಮ್ಯಾನೇಜರ್‌ Gen Z ಉದ್ಯೋಗಿಯ ಬ್ರೇಕಪ್‌ ಲೀವ್‌ ಸ್ಟೋರಿಯನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸೋಷಿಯಲ್‌ ಮೀಡಿಯಾದ ಬಳಕೆದಾರರು ಹಲವಾರು ಇಂಟರೆಸ್ಟಿಂಗ್‌ ಸ್ಟೋರಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬರು ಕಂಪೆನಿ ಮ್ಯಾನೇಜರ್‌ ತಮ್ಮ Gen Z ಉದ್ಯೋಗಿಯ ಬ್ರೇಕಪ್‌ ಲೀವ್‌ ಬಗೆಗಿನ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಕೃಷ್ಣ ಮೋಹನ್‌ (KiMoJiRa) ಎಂಬವರು ಈ ಪೋಸ್ಟ್‌ ಅನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ತಂಡದ Gen Z ಸದಸ್ಯರೊಬ್ಬರು ಇದ್ದಕ್ಕಿದ್ದಂತೆ 1 ವಾರಗಳ ಕಾಲ ರಜೆ ಬೇಕೆಂದು ಕೇಳಿದರು. ಇದು ಮೀಟಿಂಗ್‌ ಮತ್ತು ಪ್ಲಾನಿಂಗ್ಸ್‌ಗಳ ನಿರ್ಣಾಯಕ ಸಮಯ ಆಗಿದ್ದರಿಂದ ರಜೆ ತೆಗೆದುಕೊಳ್ಳಬೇಡಿ ಎಂದು ನಾನು ಹೇಳಿದೆ. ಆದ್ರೆ ಅವರು ಹಠ ಹಿಡಿದು ಬ್ರೇಕಪ್‌ ಆದ ಕಾರಣ ಬ್ರೇಕಪ್‌ ನೋವನ್ನು ಮರೆಯಲು ಬೆಟ್ಟ ಗುಡ್ಡ ಇರುವ ಸ್ಥಳಕ್ಕೆ ಪ್ರವಾಸ ಹೋಗಬೇಕೆಂದು ರಜೆ ತೆಗೆದುಕೊಂಡರು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಆ ಸಂಭಾಜಿ ಮಹರಾಜ ಯಾರು? ಈ ಭೂಮಿ ನಿಜಾಮರಿಗೆ ಸೇರಿದ್ದು; ಮುಸ್ಲಿಂ ಮಹಿಳೆಯ ವಿವಾದಾತ್ಮಕ ಹೇಳಿಕೆ

ನವೆಂಬರ್‌ 6 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 33 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹಾಗಾದ್ರೆ ನಿಮ್ಮ ಪ್ರಕಾರ ಆತ ತನ್ನ ಮಾನಸಿಕ ಆರೋಗ್ಯವನ್ನು ಸುಧಾರಿಸಲು ರಜೆ ತೆಗೆದುಕೊಂಡಿದ್ದು ತಪ್ಪಾ” ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಬ್ರೇಕಪ್‌ ಕಾರಣದಿಂದ ರಜೆ ತೆಗೆದುಕೊಳ್ಳುವುದು ಸಮಂಜಸವಲ್ಲʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅದು ಅವನ ಜೀವನ, ಅವನ ಆಯ್ಕೆ ಅವನು ಮಾಡಿದ್ದು ಸರಿಯಿದೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ