
ಗಾಜಿಯಾಬಾದ್ ಮೇ 2: ಇಂದಿನ ಕಾಲದಲ್ಲಿ ಸೇವಿಸುವ ಆಹಾರ (food) ದ ಬಗ್ಗೆ ಹೆಚ್ಚು ಗಮನಹರಿಸಬೇಕು. ಸ್ವಲ್ಪ ಯಾಮಾರಿದ್ರೂ ಆರೋಗ್ಯವು ಅಷ್ಟೇ ವೇಗವಾಗಿ ಹದಗೆಡುತ್ತದೆ. ಹೀಗಾಗಿ ಹೆಚ್ಚಿನವರು ರೆಸ್ಟೋರೆಂಟ್ ಹಾಗೂ ಹೋಟೆಲ್ ಆಹಾರದ ಸೇವನೆಯಿಂದ ದೂರವಿರುತ್ತಾರೆ. ಹೌದು ಆಹಾರ ತಯಾರಿಸುವ ವಿಧಾನ ಹಾಗೂ ನೈರ್ಮಲ್ಯದ ಕೊರತೆಯೂ ಕೆಲವು ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳಲ್ಲಿ ಕಾಣಸಿಗುತ್ತದೆ. ಇದಕ್ಕೆ ಉದಾಹರಣೆಯಂತೆ ಈ ವಿಡಿಯೋಯಿದ್ದು, ಉತ್ತರ ಪ್ರದೇಶದ ಗಾಜಿಯಾಬಾದ್ (Ghaziabad of Uttar Pradesh) ನ ರಾಜ್ ನಗರ್ (Raj nagar) ಬಳಿಯಿರುವ ಕಲೇವಾ ರೆಸ್ಟೋರೆಂಟ್ (Kaleva Restaurant) ನಲ್ಲಿನ ಕಳಪೆ ಮಟ್ಟದ ಶುಚಿತ್ವ ಹಾಗೂ ಪಾನಿಪುರಿಗಳ ಮೇಲೆ ಜಿರಳೆಗಳು ಓಡಾಡುತ್ತಿದ್ದು ನೋಡಿದರೇನೇ ವಾಕರಿಕೆ ತರಿಸುವಂತಿದೆ. ಈ ವಿಡಿಯೋವೊಂದು ಗ್ರಾಹಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
Lokesh Rai ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಈ ವಿಡಿಯೋದೊಂದಿಗೆ ಈ ರೆಸ್ಟೋರೆಂಟ್ ನ ಹೆಸರು ಹಾಗೂ ಇಲ್ಲಿ ಸಿಗುವ ಆಹಾರಗಳ ಬೆಲೆ ದುಬಾರಿ. ಈ ರಾಜನಗರದಲ್ಲಿರುವ ಕಲೇವಾ ರೆಸ್ಟೋರೆಂಟ್‌ನಲ್ಲಿ ನೈರ್ಮಲ್ಯದ ಮಟ್ಟವನ್ನು ಒಮ್ಮೆ ನೋಡಿ. ಪಾನಿಪುರಿಗಳ ನಡುವೆ ಜಿರಳೆಗಳು ಹೇಗೆ ಓಡಾಡುತ್ತವೆ ಎಂಬುದನ್ನು ನೋಡಿ, ಅದನ್ನು ತಿಂದ ನಂತರ ಅನಾರೋಗ್ಯಕ್ಕೆ ಒಳಗಾಗುವುದು ಸಹಜ. ಬೀದಿ ಬದಿ ವ್ಯಾಪಾರಿಗಳು ಇದಕ್ಕಿಂತ ಉತ್ತಮವಾದ ಶುಚಿತ್ವವನ್ನು ಹೊಂದಿದ್ದಾರೆ. ಆದರೆ ಹತ್ತು ಪಟ್ಟು ಬೆಲೆಗೆ ಆಹಾರವನ್ನು ಮಾರಾಟ ಮಾಡಿದರೂ, ಬ್ರ್ಯಾಂಡ್ ಗಳಷ್ಟೇ ಇಲ್ಲಿ ಮುಖ್ಯ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
नाम और दाम बड़े और दर्शन छोटे!
राजनगर एक्सटेंशन के कलेवा रेस्टोरेंट में हाइजीन का स्तर देखिए, किस प्रकार गोलगप्पो के बीच कॉकरोच विचरण करते नजर आ रहे है, इन्हें खाकर बीमार पड़ना स्वाभाविक है।
रेहड़ी पटरी वाले का भी साफ सफाई का स्तर इससे बेहतर होता है, लेकिन उनसे दस गुना महंगा खाना… pic.twitter.com/lvuGQUr6Vu— Lokesh Rai (@lokeshRlive) April 26, 2025
ಈ ವಿಡಿಯೋದಲ್ಲಿ ಗ್ರಾಹಕರೊಬ್ಬರು, ಪಾನಿಪುರಿಯ ಮೇಲೆ ಜಿರಳೆಗಳು ಓಡಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ರೆಕಾರ್ಡ್ ಮಾಡುತ್ತಿರುವ ಗ್ರಾಹಕನು ಹೋಟೆಲಿನ ಸಿಬ್ಬಂದಿಗೆ ಪಾನಿಪುರಿ ಮೇಲೆ ಜಿರಳೆಗಳು ಓಡಾಡುತ್ತಿರುವುದನ್ನು ನೋಡಿದ್ದಾನೆ. ಆ ಕೂಡಲೇ ಹೋಟೆಲ್ ಮಾಲೀಕರನ್ನು ಕರೆಯುವಂತೆ ಸಿಬ್ಬಂದಿಗೆ ಹೇಳಿರುವುದನ್ನು ಕಾಣಬಹುದು.
ಈ ವಿಡಿಯೋ ಈಗಾಗಲೇ ಒಂದೂವರೆ ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ನೈರ್ಮಲ್ಯ ಕೊರತೆ ಎದ್ದು ಕಾಣುತ್ತಿರುವುದಕ್ಕೆ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಬಳಕೆದಾರರೊಬ್ಬರು, ದಯವಿಟ್ಟು ಹೋಟೆಲ್ ಮಾಲೀಕರೇ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನ ಕೊಡಲು ಹೇಳಿ, ‘ಇದು ಗ್ರಾಹಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಈ ರೀತಿ ಆಹಾರ ತಿಂದರೆ ಆರೋಗ್ಯ ಕೈ ಕೊಡುವುದರಲ್ಲಿ ಯಾವುದೇ ಸಂದೇಹವೇ ಇಲ್ಲ’ ಎಂದಿದ್ದಾರೆ. ಇನ್ನೊಬ್ಬರು, ‘ಈ ಹೆಸರಿಗೆ ಮಾತ್ರ ಜನಪ್ರಿಯ ರೆಸ್ಟೋರೆಂಟ್, ನೈರ್ಮಲ್ಯದ ಬಗ್ಗೆ ಗಮನವೇ ಇಲ್ಲ, ಈ ವಿಡಿಯೋ ನೋಡಿದರೇನೇ ವಾಕರಿಕೆ ಬರುತ್ತದೆ’ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ