ದೆವ್ವ ಭೂತಗಳು ನಿಜವಾಗಿಯೂ ಇದೆಯೇ ಎಂಬುದು ಯಾರಿಗೂ ಗೊತ್ತಿಲ್ಲ. ಕೆಲವರು ದೆವ್ವಗಳು ಇದೆಯೆಂದು ನಂಬಿದರೆ ಇನ್ನೂ ಕೆಲವರು ಇದೆಲ್ಲಾ ಕಟ್ಟುಕಥೆ ಪ್ರಪಂಚದಲ್ಲಿ ದೆವ್ವಭೂತ ಎಂಬುದು ಇಲ್ಲವೇ ಇಲ್ಲ ಎಂದು ಹೇಳುತ್ತಾರೆ. ಹೀಗಿದ್ದರೂ ಹೆಚ್ಚಿನವರು ದೆವ್ವ ಎಂಬ ಹೆಸರು ಕೇಳಿದ್ರೆ ಭಯಪಟ್ಟುಕೊಳ್ಳುತ್ತಾರೆ. ಅದರಲ್ಲೂ ಮಕ್ಕಳಿಗೆ ದೆವ್ವ ಭೂತದ ಭಯ ಸ್ವಲ್ಪ ಜಾಸ್ತಿಯೇ. ಇಲ್ಲೊಂದು ಶಾಲೆಯ ಮಕ್ಕಳೂ ಕೂಡಾ ತಮ್ಮ ಶಾಲೆಯಲ್ಲಿ ದೆವ್ವಗಳಿವೆ ಎಂದು ಹೆದರಿದ್ದು, ಈ ಮಕ್ಕಳ ಭಯವನ್ನು ಹೋಗಲಾಡಿಸಲು ಶಿಕ್ಷಕರೊಬ್ಬರು ರಾತ್ರಿಯಿಡಿ ಶಾಲೆಯ ಕೊಠಡಿಯಲ್ಲಿಯೇ ಮಲಗಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ಘಟನೆ ತೆಲಂಗಾಣದ ಅದಿಲ್‌ಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಆನಂದಪುರದ ಸರ್ಕಾರಿ ಶಾಲೆಯೊಂದರಲ್ಲಿ ಕೆಲ ದಿನಗಳಿಂದ ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ದೆವ್ವದ ಸಂಚಾರವಿದೆಯೆಂದು ಸಿಕ್ಕಾಪಟ್ಟೆ ಭಯಪಟ್ಟಿದ್ದು, ಶಾಲೆಯ ಶಿಕ್ಷಕರಾದ ರವೀಂದರ್ ಅಮವಾಸ್ಯೆಯ ರಾತ್ರಿ ಶಾಲೆಯಲ್ಲಿ ಒಬ್ಬರೇ ಮಲಗುವ ಮೂಲಕ ವಿದ್ಯಾರ್ಥಿಗಳ ಭಯವನ್ನು ಹೋಗಲಾಡಿಸಿದ್ದಾರೆ.
𝙂𝙝𝙤𝙨𝙩𝙗𝙪𝙨𝙩𝙚𝙧’ 𝙏𝙚𝙖𝙘𝙝𝙚𝙧 𝙋𝙪𝙩𝙨 𝙎𝙩𝙪𝙙𝙚𝙣𝙩𝙨’ 𝙁𝙚𝙖𝙧 𝙩𝙤 𝙍𝙚𝙨𝙩 𝙗𝙮 𝙎𝙡𝙚𝙚𝙥𝙞𝙣𝙜 𝙞𝙣 𝙃𝙖𝙪𝙣𝙩𝙚𝙙 𝘾𝙡𝙖𝙨𝙨𝙧𝙤𝙤𝙢
Do ghosts exist? For students at a government school, they did—in the Class 5 room at the far corner of their school. This… pic.twitter.com/LIjF4BCJSg
— Sudhakar Udumula (@sudhakarudumula) July 9, 2024
ಈ ಕುರಿತ ಪೋಸ್ಟ್ ಒಂದನ್ನು ಸುಧಾಕರ್ (sudhakarudumula) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಎರಡು ವಿಡಿಯೋಗಳ ಪೈಕಿ ಒಂದು ವಿಡಿಯೋದಲ್ಲಿ ಶಿಕ್ಷಕರೊಬ್ಬರು ಮಕ್ಕಳ ಭಯವನ್ನು ಹೋಗಲಾಡಿಸಲು ಒಂಟಿಯಾಗಿ ಅಮವಾಸ್ಯೆ ರಾತ್ರಿಯಲ್ಲಿ ಶಾಲೆಯ ಕೊಠಡಿಯಲ್ಲಿ ಮಲಗಿರುವ ದೃಶ್ಯವನ್ನು ಕಾಣಬಹುದು. ಎರಡನೇ ದೃಶ್ಯದಲ್ಲಿ ಮುಂಜಾನೇ ಬೇಗ ಎದ್ದು ಶಿಕ್ಷಕನನ್ನು ಕಾಣಲು ಶಾಲೆಗೆ ಬಂದ ವಿದ್ಯಾರ್ಥಿಗಳು ತಮ್ಮ ಮೇಷ್ಟ್ರು ಸುರಕ್ಷಿತವಾಗಿರುವುದನ್ನು ಕಂಡು ಇಲ್ಲಿ ಯಾವುದೇ ದ್ವೆವಗಳು ಇಲ್ಲ ಎಂಬುದು ಮನವರಿಕೆಯಾಗಿದೆ. ದೆವ್ವದ ಭಯ ಹೋಗಲಾಡಿಸಿದ ಶಿಕ್ಷಕನಿಗೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸುವುದನ್ನು ಕಾಣಬಹುದು.
ಇದನ್ನೂ ಓದಿ: ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು; ಇದರ ಹಿಂದಿನ ಕಾರಣ ಏನು?
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 44 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರರು “ಮಕ್ಕಳ ಈ ಭಯವನ್ನು ಹೋಗಲಾಡಿಸಿದ ಧೈರ್ಯವಂತ ಶಿಕ್ಷಕರಿಗೆ ನನ್ನ ವಂದನೆಗಳು” ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಮೇಷ್ಟ್ರ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:12 pm, Wed, 10 July 24