Viral Video: ಗಾಜಿನ ಬಾಟಲಿಯ ಮೇಲೆ ನಿಂತು ಯೋಗ ಮಾಡುತ್ತಿದ್ದಾಳೆ ಯುವತಿ! ಇದ್ದಕ್ಕಿದ್ದಂತೆ ಏನಾಯ್ತು ಅಂತ ವಿಡಿಯೋ ನೋಡಿ

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. 24 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಲಭಿಸಿವೆ. ಕೆಲವರು ತಮಾಷೆಯಾಗಿ ಕಾಮೆಂಟ್​ ಮಾಡಿದ್ದರೆ ಇನ್ನು ಕೆಲವರು ಅಪಾಯವಾಗಬಹುದು ಎಚ್ಚರ ಎಂದು ಸೂಚನೆ ನೀಡಿದ್ದಾರೆ.

Viral Video: ಗಾಜಿನ ಬಾಟಲಿಯ ಮೇಲೆ ನಿಂತು ಯೋಗ ಮಾಡುತ್ತಿದ್ದಾಳೆ ಯುವತಿ! ಇದ್ದಕ್ಕಿದ್ದಂತೆ ಏನಾಯ್ತು ಅಂತ ವಿಡಿಯೋ ನೋಡಿ
ಗಾಜಿನ ಬಾಟಲಿಯ ಮೇಲೆ ನಿಂತು ಯೋಗ ಮಾಡುತ್ತಿದ್ದಾಳೆ ಯುವತಿ!
Edited By:

Updated on: Jun 27, 2021 | 3:23 PM

ಈಗಿನ ದಿನಮಾನದವರೆಲ್ಲಾ ತುಂಬಾ ಪ್ರತಿಭಾವಂತರು. ಪ್ರತಿನಿತ್ಯವೂ ಕೂಡಾ ಹೊಸದನ್ನೇ ಯೋಚಿಸುತ್ತಾರೆ ಮತ್ತು ಹೊಸ ಹೊಸ ಪ್ರಯತ್ನಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಳ್ಳಲು ಹೆಚ್ಚು ಆಸೆ ಪಡುತ್ತಾರೆ. ಹೊಸ ಹೊಸ ವಿಭಿನ್ನ ಪ್ರತಿಭೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತವೆ. ಕೆಲವು ವಿಡಿಯೋಗಳು ಮುನ್ನಚ್ಚರಿಗೆಯಾಗಿ ಇನ್ನಿತರರಿಗೆ ಎಚ್ಚರಿಕೆಯನ್ನು ನೀಡುತ್ತವೆ. ಇಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯುವತಿಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಈತರಹದ ಯೋಗಾಸನ ಸುಲಭದ ಮಾತಲ್ಲ! ಎಚ್ಚರಿಕೆಯಿಂದಿರಿ ಎಂಬ ಸಂದೇಶವನ್ನು ಸಾರುತ್ತಿದೆ.

ಸಾಮಾನ್ಯವಾಗಿ ಯೋಗಾಸನ ಮಾಡುವುದು ಕಷ್ಟಕರ. ಅಭ್ಯಾಸ ಮಾಡುತ್ತಾ ಮಾಡುತ್ತಾ ಕಲಿಯಬೇಕು. ಇಲ್ಲೋರ್ವ ಯುವತಿ ಯೋಗಾಸನ ಮಾಡುತ್ತಿದ್ದಾಳೆ. ಆದರೆ ಆಶ್ಚರ್ಯವೇನೆಂದರೆ ಮಾಮೂಲಿ ಯೋಗಾಸನವಲ್ಲ. ಗಾಜಿನ ಬಟಲಿಯ ಮೇಲೆ ನಿಂತು ಯೋಗದ ಭಂಗಿಗಳನ್ನು ಮಾಡುತ್ತಿದ್ದಾಳೆ. ಯಾವುದೇ ಒಂದು ಕಲೆಯಾದರೂ ಒಂದೇ ಬಾರಿಗೆ ಬರುವುದಿಲ್ಲ. ಪ್ರಯತ್ನ ಪಡಬೇಕು.. ಸವಾಲನ್ನು ಎದುರಿಸಬೇಕು. ಹಾಗೇ ಇವಳು ಅಭ್ಯಾಸಲ್ಲಿ ತೊಡಗಿದ್ದಾಗ ಒಮ್ಮೆಲೆ ಬ್ಯಾಲೆನ್ಸ್​ ತಪ್ಪಿ ಕೆಳಗೆ ಬಿದ್ದು ಬಿಡುತ್ತಾಳೆ. ವಿಡಿಯೋ ನೋಡಿದಾಕ್ಷಣ ಭಯವಾದರೂ ಸಹ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಯಾವುದೇ ವಿಭಿನ್ನ ಶೈಲಿಯ ಕಲೆಯಾದರೂ, ಒಂದೇ ಬಾರಿಗೆ ಹೆಸರು ಗಳಿಸಲು ಸಾಧ್ಯವಿಲ್ಲ. ಪ್ರಯತ್ನ ಪಟ್ಟರೆ ಸಾಧನೆಯ ಮೆಟ್ಟಿಲೇರಬಹುದು ಎಂಬ ಮಾತನ್ನು ಕೇಳಿರಬಹುದು. ಅದೆಷ್ಟೋ ಅಡೆತಡೆಗಳನ್ನು ಮೆಟ್ಟಿನಿಂತು ಕೊನೆಗೊಂದು ದಿನ ಗುರಿ ತಲುಪುತ್ತೇವೆ. ಹಾಗೆಯೇ ಈಕೆಯೂ ಸಹ ಅಭ್ಯಾಸದಲ್ಲಿ ತೊಡಗಿದ್ದಾಳೆ. ಕೆಲವರು ಹುಷಾರಾಗಿರಿ ಎಂದು ಪ್ರತಿಕ್ರಿಯೆ ನೀಡಿದ್ದರೆ ಇನ್ನು ಕೆಲವರು ಇದು ಸುಲಭದ ಸಾಹಸವಲ್ಲ! ಎಂದು ಹುಬ್ಬೇರಿಸಿದ್ದಾರೆ.

ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ. 24 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳು ಲಭಿಸಿವೆ. ಕೆಲವರು ತಮಾಷೆಯಾಗಿ ಕಾಮೆಂಟ್​ ಮಾಡಿದ್ದರೆ ಇನ್ನು ಕೆಲವರು ಅಪಾಯವಾಗಬಹುದು ಎಚ್ಚರ.. ಎಂದು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:

Viral Video: ಜೂ-ಕೀಪರ್​ ಮೇಲೆ ಆಕ್ರಮಣ ಮಾಡಿದೆ ದಢೂತಿ ಹಾವು! ಭಯಾನಕ ದೃಶ್ಯ ವೈರಲ್​

Viral Photo: ಅಕ್ಷಯ್​ ಕುಮಾರ್​ -ಟ್ವಿಂಕಲ್​ ಖನ್ನಾ ಇಂಟರೆಸ್ಟಿಂಗ್​ ಫೋಟೋ ವೈರಲ್​!