Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ಮಾವಿನಹಣ್ಣುಗಳನ್ನು 1.2 ಲಕ್ಷಕ್ಕೆ ಮಾರಾಟ ಮಾಡಿದ ಪುಟ್ಟ ಹುಡುಗಿ; ಘಟನೆ ನಡೆದದ್ದೇನು? ಇಲ್ಲಿದೆ ವಿವರ

ತುಳಸಿ ಕುಮಾರಿ 5ನೇ ಗ್ರೇಡ್ ವಿದ್ಯಾರ್ಥಿಯಾಗಿದ್ದಾಳೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಲಾಕ್​ಡೌನ್ ಹೇರಿದ ಕಾರಣ ಶಾಲೆ ಮುಚ್ಚಲಾಗಿದ್ದು, ಆನ್​ಲೈನ್ ತರಗತಿಯ ಮೂಲಕ ಪಾಠ ಮಾಡಲಾಗುತ್ತಿದೆ. ಇದರಿಂದ ಈ ಸಮಸ್ಯೆಗಳು ತಲೆದೋರಿವೆ.

12 ಮಾವಿನಹಣ್ಣುಗಳನ್ನು 1.2 ಲಕ್ಷಕ್ಕೆ ಮಾರಾಟ ಮಾಡಿದ ಪುಟ್ಟ ಹುಡುಗಿ; ಘಟನೆ ನಡೆದದ್ದೇನು? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on: Jun 27, 2021 | 7:04 PM

ದೇಶದ ಮಹಾನಗರ ಮುಂಬೈನ ಓರ್ವ ವ್ಯಕ್ತಿ, ಜಮ್​ಶೆಡ್​ಪುರದ ಪುಟ್ಟ ಹುಡುಗಿಯೊಬ್ಬಳ ಕಲಿಯುವ ಕನಸನ್ನು ನನಸು ಮಾಡಲು ಬೃಹತ್ ಸಹಾಯ ಮಾಡಿದ್ದಾರೆ. 11 ವರ್ಷದ ಪುಟ್ಟ ಬಾಲಕಿಗೆ ಸ್ಮಾರ್ಟ್​ಫೋನ್ ಕೊಳ್ಳಬೇಕು, ಆನ್​ಲೈನ್ ಕ್ಲಾಸ್​ನಲ್ಲಿ ಕಲಿಕೆ ಮುಂದುವರಿಸಬೇಕು ಎಂದು ಕನಸು ಕಂಡಿದ್ದಳು. ಆ ಕನಸೀಗ ನನಸಾಗಿದೆ. ಅಂದಹಾಗೆ ಕೊರೊನಾ ನಂತರದ ಪರಿಸ್ಥಿತಿಯಲ್ಲಿ ಬಹುತೇಕ ಎಲ್ಲರೂ ಆನ್​ಲೈನ್ ಕ್ಲಾಸ್​ನಲ್ಲಿ ಪಾಲ್ಗೊಳ್ಳುವಂತಾಗಿದೆ. ಈ ಸಮಯದಲ್ಲಿ ಎಲ್ಲರಿಗೂ ಫೋನ್ ಕೊಳ್ಳುವ ಅವಕಾಶ ಅಥವಾ ಸೌಕರ್ಯ ಇರುವುದಿಲ್ಲ.

ಅದೇ ರೀತಿ ಈ ಪುಟ್ಟ ಬಾಲಕಿಗೂ ಮೊಬೈಲ್ ಕೊಂಡುಕೊಳ್ಳಲು ಸಾಧ್ಯವಾಗಿಲ್ಲ. ತುಳಸಿ ಕುಮಾರಿ ಎಂಬ 11 ವರ್ಷದ ಹುಡುಗಿ, ರಸ್ತೆ ಬದಿಯಲ್ಲಿ ಮಾವಿನ ಹಣ್ಣಿನ ವ್ಯಾಪಾರ ನಡೆಸುತ್ತಾಳೆ. ಆಕೆಯ ಬಳಿಯಿಂದ ಮಾವಿನಹಣ್ಣು ಕೊಳ್ಳಲು ಬಂದ ಓರ್ವ ವ್ಯಕ್ತಿ 1 ಲಕ್ಷದ 20 ಸಾವಿರ ರೂಪಾಯಿ ಕೊಟ್ಟು 12 ಮಾವಿನಹಣ್ಣುಗಳನ್ನು ಖರೀದಿಸಿದ್ದಾರೆ. ಅಂದರೆ, ಪ್ರತೀ ಹಣ್ಣಿಗೆ 10,000 ರೂಪಾಯಿಯಂತೆ ಹಣ ಪಾವತಿಸಿದ್ದಾರೆ. ಇಷ್ಟೊಂದು ಮೊತ್ತದ ಹಣವನ್ನು ಹುಡುಗಿಯ ತಂದೆ ಶ್ರೀಮಾಲ್ ಕುಮಾರ್ ಅವರ ಖಾತೆಗೆ ವರ್ಗಾಯಿಸಿದ್ದಾರೆ.

ಹೀಗೆ ಹುಡುಗಿಯ ಕಲಿಕೆಗೆ ಸಹಾಯ ಮಾಡಿದ ವ್ಯಕ್ತಿಯ ಹೆಸರು ಅಮೆಯ ಹೆಟ್. ಆತ ವ್ಯಾಲ್ಯುಯೇಬಲ್ ಎಜುಟೈನ್​ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದಾರೆ. ಅವರು, ಹುಡುಗಿ ಇತ್ತೀಚೆಗಷ್ಟೇ ಸ್ಥಳೀಯ ವಾಹಿನಿಯಲ್ಲಿ ಹೇಳಿಕೊಂಡಿದ್ದ ಕಷ್ಟಗಳನ್ನು ಗಮನಿಸಿ ಈ ಸಹಾಯ ಮಾಡಿದ್ದಾರೆ. ಸ್ಮಾರ್ಟ್​ಫೋನ್ ಖರೀದಿ ಹಾಗೂ ಆನ್​ಲೈನ್ ಕ್ಲಾಸ್​ನಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ.

ತುಳಸಿ ಕುಮಾರಿ 5ನೇ ಗ್ರೇಡ್ ವಿದ್ಯಾರ್ಥಿಯಾಗಿದ್ದಾಳೆ. ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಲಾಕ್​ಡೌನ್ ಹೇರಿದ ಕಾರಣ ಶಾಲೆ ಮುಚ್ಚಲಾಗಿದ್ದು, ಆನ್​ಲೈನ್ ತರಗತಿಯ ಮೂಲಕ ಪಾಠ ಮಾಡಲಾಗುತ್ತಿದೆ. ಇದರಿಂದ ಈ ಸಮಸ್ಯೆಗಳು ತಲೆದೋರಿವೆ.

ಹೀಗೆ ದೊಡ್ಡ ಮೊತ್ತದ ಸಹಾಯ ಪಡೆದುಕೊಂಡ ಬಳಿಕ ಹುಡುಗಿ ಸಂತಸ ಹಂಚಿಕೊಂಡಿದ್ದಾಳೆ. ತಾನು, ಹಣ ಉಳಿತಾಯ ಮಾಡಿ ಸ್ಮಾರ್ಟ್​ಫೋನ್ ಕೊಂಡುಕೊಳ್ಳಬೇಕು ಎಂದುಕೊಂಡೆ. ಆದರೆ, ಈ ಕನಸು ಬೇಗನೇ ಈಡೇರಿದೆ. ಈಗ ಮೊಬೈಲ್ ಕೊಳ್ಳಬಹುದು ಹಾಗೂ ಆನ್​ಲೈನ್ ಕ್ಲಾಸ್​ನಲ್ಲೂ ಭಾಗವಹಿಸಬಹುದು ಎಂದು ಆಕೆ ತಿಳಿಸಿದ್ದಾಳೆ.

ಕೊವಿಡ್-19 ಬಳಿಕ ಕಲಿಕೆಯ ವಿಧಾನ ಸಂಪೂರ್ಣ ಬದಲಾಗಿದೆ. ಬಹುತೇಕ ಕಾರ್ಯಚಟುವಟಿಕೆಗಳು ಆನ್​ಲೈನ್ ವಿಧಾನಕ್ಕೆ ಶಿಫ್ಟ್ ಆಗಿದೆ. ಇದರಿಂದ ಡಿಜಿಟಲ್ ಡಿವೈಡ್ ಕೂಡ ಆಗಿದೆ. ಇದು ಶಿಕ್ಷಣ ವಲಯದಲ್ಲೂ ಹೊರತಾಗಿಲ್ಲ. ಹೀಗಾಗಿ ಮಕ್ಕಳು ಆನ್​ಲೈನ್ ಶಿಕ್ಷಣದಿಂದ ವಮಚಿತರಾಗುತ್ತಿರುವ ಪ್ರಕರಣಗಳನ್ನು ನಾವು ಕೇಳುತ್ತಿದ್ದೇವೆ. ಈ ಮಧ್ಯೆ ಹೀಗೊಂದು ಮಾನವೀಯ ಕೆಲಸ ನಡೆದಿದ್ದು, ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆನ್‌ಲೈನ್ ರಂಗಭೂಮಿ ತರಬೇತಿ; ರಂಗ ಚಟುವಟಿಕೆ ಆರಂಭಕ್ಕೆ ಮೈಸೂರಿನಲ್ಲಿ ಚಾಲನೆ ನೀಡಿದ ನಟ ಮಂಡ್ಯ ರಮೇಶ್

ಆನ್​ಲೈನ್​ನಲ್ಲಿ ರೈಲ್ವೆ ಟಿಕೆಟ್​ ಬುಕ್ ಮಾಡಲು ಆಧಾರ್​ ಕಾರ್ಡ್, ಪಾಸ್​ಪೋರ್ಟ್​ ಕಡ್ಡಾಯವಾಗಲಿದೆ; ಶೀಘ್ರದಲ್ಲೇ ನಿಯಮ ಜಾರಿ

ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಜಿಗಣಿಯಲ್ಲಿ ಮನೆಯೊಳಗೆ ನುಗ್ಗಿ ಬಿಂದಾಸಾಗಿ ಮಲಗಿದ ಚಿರತೆ; ಕಂಗಾಲಾದ ಮನೆಮಂದಿ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಶಾಸಕರ ಹೆಸರು ಎಫ್​ಐಅರ್​ನಲ್ಲಿ ಬಂದ ನಂತರವೇ ವಿನಯ್ ಅಂತ್ಯ ಸಂಸ್ಕಾರ: ಪ್ರತಾಪ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಮೈಗೆ ದೂರಿನ ಪತ್ರ ಕಟ್ಟಿ ತೆವಳುತ್ತಾ ಸರ್ಕಾರಿ ಕಚೇರಿಗೆ ತೆರಳಿದ ವ್ಯಕ್ತಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ
ಥೈಲ್ಯಾಂಡ್ ಪ್ರವಾಸ ಮುಗಿಸಿ, ಶ್ರೀಲಂಕಾಗೆ ತೆರಳಿದ ಪ್ರಧಾನಿ ಮೋದಿ