ದೈವಿ ಶಕ್ತಿಯಿದ್ದಲ್ಲಿ ದುಷ್ಟ ಶಕ್ತಿಗಳು ಇರುವುದು ಸಹಜ. ಆದರೆ ಮನುಷ್ಯನು ಎಷ್ಟೇ ಧೈರ್ಯವಂತನಾಗಿದ್ದರೂ ಭೂತ ಪ್ರೇತಗಳಿಗೆ ಸಹಜವಾಗಿಯೇ ಹೆದರುತ್ತಾರೆ. ಅದಲ್ಲದೇ, ರಾತ್ರಿಯ ವೇಳೆ ಶ್ವಾನಗಳ ಕಣ್ಣಿಗೆ ದೆವ್ವ, ಆತ್ಮಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ನಡುರಾತ್ರಿಯಲ್ಲಿ ಈ ಶ್ವಾನಗಳು ದೆವ್ವಗಳನ್ನು ಕಂಡಾಗ ವಿಚಿತ್ರವಾಗಿ ಕೂಗುತ್ತವೆ ಎನ್ನುವುದು ಎಲ್ಲರ ನಂಬಿಕೆ. ಆದರೆ ಕೆಲವೊಮ್ಮೆ ಈ ಕೆಟ್ಟ ಶಕ್ತಿಗಳು ಮನುಷ್ಯನ ಮೈಯನ್ನು ಸೇರಿಕೊಳ್ಳುವುದಿದೆ.
ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಈ ಶಾಲೆಯ ವಿದ್ಯಾರ್ಥಿನಿಯರು ದೆವ್ವಗಳು ಮೈ ಮೇಲೆ ಬಂದಂತೆ ವರ್ತಿಸಿದ್ದಾರೆ. ಅಷ್ಟೇ ಅಲ್ಲದೇ, ಏಕಾಏಕಿ ತರಗತಿ ಕೊಠಡಿಯೊಳಗಿನಿಂದ ಕಿರುಚುತ್ತ ಹೊರಗೆ ಬಂದು ನೆಲೆದ ಮೇಲೆ ಒರಳಾಡುತ್ತಿದ್ದಾರೆ. ಮೈ ಮೇಲೆ ಏನೋ ಮೆಟ್ಟಿಕೊಂಡವರಂತೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಈ ವಿಚಿತ್ರವಾದ ವರ್ತನೆಯನ್ನು ಶಾಲಾ ಶಿಕ್ಷಕರು ಹಾಗೂ ಉಳಿದ ವಿದ್ಯಾರ್ಥಿಗಳು ಗಾಬರಿಯಿಂದ ನೋಡುತ್ತಾ ನಿಂತಿದ್ದಾರೆ.
Its me basu ಎನ್ನುವ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮೈ ನಡುಕ ಹುಟ್ಟಿಸುವ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ದೆವ್ವ ಮೈ ಮೇಲೆ ಬಂದಿರುವಂತೆ ವರ್ತಿಸುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಈ ವಿಡಿಯೋ ಇಪ್ಪತ್ತಾರು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದ್ದು, ಈ ವಿಡಿಯೋ ನೋಡಿದ ನೆಟ್ಟಿಗರು ಗಾಬರಿಗೊಂಡಿದ್ದಾರೆ.
ಇದನ್ನೂ ಓದಿ: ಈ ಪುಟಾಣಿ ಮನೆ ಹೋಗ್ಲಿಲ್ಲ ಅಂದ್ರೆ ಅಜ್ಜ ಅಜ್ಜಿ ಗಾಬರಿಯಾಗ್ತಾರಂತೆ, ಕ್ಯೂಟ್ ವಿಡಿಯೋ ವೈರಲ್
ಕೆಲವರು ತಮಾಷೆಯಾಗಿಯೇ ಕಾಮೆಂಟ್ ಗಳನ್ನು ಮಾಡಿದ್ದು, ಬಳಕೆದಾರರೊಬ್ಬರು, ‘ಶಾಲೆಗೆ ಹೋಗುವ ಮನಸ್ಸಿಲ್ಲ ಅದಕ್ಕೆ ಈ ರೀತಿ ನಾಟಕ, ಯಾವ ದೆವ್ವನೂ ಇಲ್ಲ, ಭೂತನು ಇಲ್ಲ’ ಎಂದಿದ್ದಾರೆ. ಮತ್ತೊಬ್ಬರು, ‘ ಟೀಚರ್ ಹೋಮ್ ವರ್ಕ್ ಕೇಳಿರ್ಬೇಕು, ಅದಕ್ಕೆ ದೆವ್ವ ಬಂದಿರುತ್ತೆ’ ಎಂದಿದ್ದಾರೆ. ಇನ್ನೊಬ್ಬರು, ‘ಹುಲಿಕಲ್ ನಟರಾಜ್ ಅವರನ್ನು ಭೇಟಿ ಮಾಡಿ ಎಲ್ಲಾ ಸರಿ ಆಗುತ್ತೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ