Viral: ಗುಡ್ ಕಿಸ್ಸರ್… ಉಬರ್ ಡ್ರೈವರ್‌ಗೆ ವಿಚಿತ್ರ ಕಾಂಪ್ಲಿಮೆಂಟ್ ನೀಡಿದ ಪ್ಯಾಸೆಂಜರ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 13, 2024 | 3:40 PM

ಗ್ರಾಹಕರಿಗೆ ಸೇವೆಗಳು ಇಷ್ಟ ಆದ್ರೆ ಆಯಾ ಆ್ಯಪ್‌ಗಳಲ್ಲಿ ಉತ್ತಮವಾದ ರೇಟಿಂಗ್ಸ್‌ ಮತ್ತು ರಿವ್ಯೂ ಕೊಡ್ತಾರೆ. ಒಂದು ವೇಳೆ ಸೇವೆ ಇಷ್ಟ ಆಗಿಲ್ಲ ಅಂದ್ರೆ ಕಡಿಮೆ ರೇಟಿಂಗ್ಸ್‌ನೊಂದಿಗೆ ಸೇವೆಗಳು ಅಷ್ಟೇನು ಉತ್ತಮವಾಗಿಲ್ಲ ಎಂದು ರಿವ್ಯೂ ಕೊಡೋದನ್ನು ನೋಡಿರುತ್ತೀರಿ ಅಲ್ವಾ. ಆದ್ರೆ ಇಲ್ಲೊಂದು ಪ್ಯಾಸೆಂಜರ್‌ ಉಬರ್‌ ಡ್ರೈವರ್‌ ಒಬ್ಬರಿಗೆ ಗುಡ್‌ ಕಿಸ್ಸರ್‌ ಎಂಬ ವಿಚಿತ್ರ ಕಾಂಪ್ಲಿಮೆಂಟ್‌ ನೀಡಿದ್ದು, 8 ವರ್ಷಗಳ ಹಿಂದಿನ ಈ ರಿವ್ಯೂ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Viral: ಗುಡ್ ಕಿಸ್ಸರ್... ಉಬರ್ ಡ್ರೈವರ್‌ಗೆ ವಿಚಿತ್ರ ಕಾಂಪ್ಲಿಮೆಂಟ್ ನೀಡಿದ ಪ್ಯಾಸೆಂಜರ್‌
ವೈರಲ್​​ ಪೋಸ್ಟ್​​
Follow us on

ಫುಡ್‌, ಆನ್‌ಲೈನ್‌ ಶಾಪಿಂಗ್‌ ಅಪ್ಲಿಕೇಶನ್‌ಗಳಿಂದ ಹಿಡಿದು ಕ್ಯಾಬ್‌ ಅಪ್ಲಿಕೇಶನ್‌ಗಳ ವರೆಗೆ ಪ್ರತಿಯೊಂದು ಆ್ಯಪ್‌ಗಳಲ್ಲೂ ರಿವ್ಯೂ ಮತ್ತು ರೇಟಿಂಗ್ಸ್‌ ಇರುತ್ತೆ. ಇದೇ ರೇಟಿಂಗ್ಸ್‌ಗಳ ಆಧಾರದ ಮೇಲೆ ಗ್ರಾಹಕರು ಆನ್‌ಲೈನ್‌ ಶಾಪಿಂಗ್ಸ್‌ ಮಾಡುವಂತಹದ್ದೋ ಅಥವಾ ಕ್ಯಾಬ್‌ ಬುಕ್‌ ಮಾಡುವಂತಹದ್ದೋ ಮಾಡುತ್ತಾರೆ. ವಿಶೇಷವಾಗಿ ರೇಟಿಂಗ್ಸ್‌ ಮತ್ತು ರಿವ್ಯೂ ಉತ್ತಮವಾಗಿದ್ದರೆ ಹೆಚ್ಚಿನ ಪ್ರಯಾಣಿಕರು ಇಂತಹ ಉತ್ತಮ ರಿವ್ಯೂ ಇರುವ ಕ್ಯಾಬ್‌ಗಳನ್ನೇ ಬುಕ್‌ ಮಾಡ್ತಾರೆ. ಜೊತೆಗೆ ಗ್ರಾಹಕರಿಗೆ ಆ ಸೇವೆ ಇಷ್ಟ ಆದ್ರೆ ನಿಮ್ಮ ಸೇವೆ ಉತ್ತಮವಾಗಿದೆ, ಗ್ರಾಹಕರೊಂದಿಗೆ ನೀವು ವರ್ತಿಸಿದ ರೀತಿ ಅದ್ಭುತವಾಗಿದೆ ಅಂತ ರಿವ್ಯೂ ಕೂಡಾ ಕೊಡ್ತಾರೆ. ಒಂದು ವೇಳೆ ಸೇವೆ ಇಷ್ಟ ಆಗಿಲ್ಲ ಅಂದ್ರೆ ಈ ಕ್ಯಾಬ್‌ ಸೇವೆ ಚೆನ್ನಾಗಿಲ್ಲ ಎಂದು ರಿವ್ಯೂ ಕೊಡ್ತಾರೆ. ಇವರೆಲ್ಲರ ಮಧ್ಯೆ ಇಲ್ಲೊಬ್ಬ ಪ್ಯಾಸೆಂಜರ್‌ ಉಬರ್‌ ಡ್ರೈವರ್‌ಗೆ ಗುಡ್‌ ಕಿಸ್ಸರ್‌ ಎಂಬ ವಿಚಿತ್ರ ಕಾಂಪ್ಲಿಮೆಂಟ್‌ ನೀಡಿದ್ದು, 8 ವರ್ಷಗಳ ಹಿಂದಿನ ಈ ರಿವ್ಯೂ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಉಬರ್‌ ಅಪ್ಲಿಕೇಶನ್‌ನಲ್ಲಿ ಮೊಹಮ್ಮದ್‌ ಎಂಬ ಕ್ಯಾಬ್‌ ಡ್ರೈವರ್‌ಗೆ ಪ್ಯಾಸೆಂಜರ್‌ ಒಬ್ಬರು 8 ವರ್ಷಗಳ ಹಿಂದೆ ಗುಡ್‌ ಕಿಸ್ಸರ್‌ ಎಂಬ ರಿವ್ಯೂ ಕೊಟ್ಟಿದ್ದು, ಈ ರಿವ್ಯೂ ಸ್ಕ್ರೀನ್‌ಶಾಟ್‌ ಫೋಟೋ ಫುಲ್‌ ವೈರಲ್‌ ಆಗ್ತಿದೆ. ಈವರಗೆ 10,138 ಟ್ರಿಪ್‌ಗಳನ್ನು ಪೂರೈಸಿರುವ ಮೊಹಮ್ಮದ್‌ 4.96 ರೇಟಿಂಗ್ಸ್‌ ಕೂಡಾ ಪಡೆದಿದ್ದಾರೆ. ಜೊತೆಗೆ ಯಾರೋ ಇವರಿಗೆ ಗುಡ್‌ ಕಿಸ್ಸರ್‌ ಎಂಬ ವಿಚಿತ್ರ ರಿವ್ಯೂ ಕೂಡಾ ನೀಡಿದ್ದಾರೆ.

ವೈರಲ್​​ ಪೋಸ್ಟ್​​​​ ಇಲ್ಲಿದೆ ನೋಡಿ:

@s20_a_ ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಸ್ಕ್ರೀನ್‌ಶಾಟ್‌ ಫೋಟೊದಲ್ಲಿ ಉಬರ್‌ ಅಪ್ಲಿಕೇಷನ್‌ನಲ್ಲಿ ಮೊಹಮ್ಮದ್‌ ಎಂಬ ಕ್ಯಾಬ್‌ ಡ್ರೈವರ್‌ ಒಬ್ಬರ ಪ್ರೊಫೈಲ್‌ ಅನ್ನು ಕಾಣಬಹುದು. 4.96 ಇರುವ ಈ ಪ್ರೊಫೈಲ್‌ನಲ್ಲಿ ಯಾರೋ ಪ್ಯಾಸೆಂಜರ್‌ ಗುಡ್‌ ಕಿಸ್ಸರ್‌ ಎಂಬ ವಿಚಿತ್ರ ರಿವ್ಯೂ ಕೊಟ್ಟಿದ್ದಾರೆ.

ಇದನ್ನೂ ಓದಿ: ಡೇಂಜರಸ್‌ ಸ್ಪೀಡ್‌ ಬ್ರೇಕರ್‌… ಹಂಪ್‌ ಕಾಣದೇ ಸ್ಕೂಟಿ ಸಮೇತ ಪಲ್ಟಿಯಾದ ಸವಾರ; ಭಯಾನಕ ವಿಡಿಯೋ ವೈರಲ್‌

ಡಿಸೆಂಬರ್‌ 9 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 3.7 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೆಂತಾ ಕ್ರೇಜಿ ರಿವ್ಯೂ ದೇವ್ರೇʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆಲ್ಲಾ ರಿವ್ಯೂ ಕೊಡುವುದು ಸರಿಯಲ್ಲʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವಿಚಿತ್ರ ರಿವ್ಯೂ ನೋಡಿ ಫುಲ್‌ ಶಾಕ್‌ ಆಗಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ