Viral Video: ಗೊರಿಲ್ಲಾ ಪಾಠ: ಹೊಂಚಿ ತಿನ್ನುವುದಕ್ಕಿಂತ ಹಂಚಿ ತಿನ್ನುವುದು ಲೇಸು

Gorilla: Sharing is Caring ಎನ್ನುವುದು ಈ ಗೊರಿಲ್ಲಾಗಳಿಗೆ ಹೇಗೆ ಗೊತ್ತಾಯಿತು? ನಿಮ್ಮೂರಿನ ಕಾನ್ವೆಂಟ್ ಸ್ಕೂಲಿಗೇನಾದರೂ ಇವು ಬಂದಿದ್ದವಾ? ಒಮ್ಮೆ ನೋಡಿ ಹಾಗಿದ್ದರೆ...

Viral Video: ಗೊರಿಲ್ಲಾ ಪಾಠ: ಹೊಂಚಿ ತಿನ್ನುವುದಕ್ಕಿಂತ ಹಂಚಿ ತಿನ್ನುವುದು ಲೇಸು
ಹಂಚಿತಿನ್ನುವುದೇ ಬದುಕು
ಶ್ರೀದೇವಿ ಕಳಸದ

Updated on: Jul 06, 2023 | 6:06 PM

Animals : ಶಾಲಾದಿನಗಳನ್ನು ನೆನಪಿಸಿಕೊಳ್ಳಿ  (School Days), ಏನೇ ತಿನಿಸಿರಲಿ ಇರಲಿ, ಎಷ್ಟೇ ಸಣ್ಣದಿರಲಿ ಅದನ್ನು ಸ್ನೇಹಿತರೊಂದಿಗೆ ಅದನ್ನು ಹಂಚಿಕೊಂಡು ತಿಂದರೇ ಖುಷಿ. ಅದನ್ನೇ ಈಗಿನ ಕಾನ್ವೆಂಟ್​ ಮಕ್ಕಳು Sharing is Caring ಎಂದು ನಿರ್ಮಲ ನಗುವಿನೊಂದಿಗೆ ಹೇಳಿದಾಗ, ದೊಡ್ಡವರು ಮರೆತಿದ್ದನ್ನು ನೆನಪಿಸಿಕೊಳ್ಳುತ್ತ  ಅಚ್ಚರಿ ವ್ಯಕ್ತಪಡಿಸುತ್ತಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಗೊರಿಲ್ಲಾ ತಾನೂ ತಿನ್ನುತ್ತ ಆಮೆಗೂ ಸೇಬುಹಣ್ಣನ್ನು (Apple) ತಿನ್ನಿಸಲು ನೋಡುತ್ತಿದೆ. ಅದರ ಪಕ್ಕದಲ್ಲಿರುವ ಇನ್ನೊಂದು ಗೊರಿಲ್ಲಾ ಆಮೆಯನ್ನು ಮುದ್ದಿಸಲು ಹವಣಿಸುತ್ತಿದೆ. ಎರಡೂ ಎಂಥ ಪ್ರೀತಿಯಿಂದ ಅದನ್ನು ನೋಡಿಕೊಳ್ಳುತ್ತಿವೆಯಲ್ಲ?

ಇಂಥ ವಿಡಿಯೋಗಳು ನನ್ನ ದುಃಖವನ್ನು ಮರೆಸುತ್ತವೆ. ಈಗ ನನ್ನ ಮನಸ್ಸು ತಿಳಿಗೊಂಡಿತು, ಇಡೀ ದಿನ ನಾನು ಬೇಸರದಲ್ಲಿದ್ದೆ. ಇಂಥ ವಿಡಿಯೋಗಳು ನಮ್ಮ ಮನಸ್ಸನ್ನು ಅರಳಿಸುತ್ತವೆ. ನಾವು ಮನುಷ್ಯರೂ ಹೀಗೆ ಅನ್ಯಜನರನ್ನು ಪ್ರೀತಿಸುವುದನ್ನು ಯಾವಾಗ ಕಲಿಯುತ್ತೇವೋ? ಪಾಪ ಆಮೆಗೆ ಸೇಬನ್ನು ಕಚ್ಚಲು ಆಗುತ್ತಿಲ್ಲ. ಎರಡೂ ಗೋರಿಲ್ಲಾಗಳು ತಮ್ಮದೇ ಮಗುವೆಂಬಂತೆ ಎಷ್ಟು ಕಾಳಜಿಯಿಂದ ಅದನ್ನು ನೋಡಿಕೊಳ್ಳುತ್ತಿವೆಯಲ್ಲ… ಅಂತೆಲ್ಲ ನೆಟ್ಟಿಗರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : Viral: 1975ರಲ್ಲಿ ಈ ನೋಟ್​ ಬರೆದ ಮಹಿಳೆಯನ್ನು ಪತ್ತೆ ಹಚ್ಚಿದ ವ್ಯಕ್ತಿ

ಈ ಮೂರೂ ಪ್ರಾಣಿಗಳಿಗೆ ಈಗಲೇ ಒಂದು ಬುಟ್ಟಿ ಸೇಬನ್ನು ತಂದು ಕೊಡಬೇಕು ಎನ್ನಿಸುತ್ತಿದೆ ಎಂದು ಒಬ್ಬರು ಹೇಳಿದ್ದಾರೆ. ಇವು ಯಾವೂರಲ್ಲಿವೆ ಎಂದು ನಿಮಗೆ ಗೊತ್ತಿದೆಯೇ? ಮೊದಲು ನಿಮ್ಮ ಅಕ್ಕಪಕ್ಕದ ಜನರೊಂದಿಗೆ ಆಹಾರವನ್ನು ಹಂಚಿಕೊಂಡು ತಿನ್ನಿ ಎಂದು ಒಬ್ಬರು ಬುದ್ಧಿವಾದ ಹೇಳಿದ್ದಾರೆ. ಹೌದು, ಅನೇಕರು ವರ್ಚುವಲ್​ ಜಗತ್ತಿನಲ್ಲಷ್ಟೇ ಮಾನವೀಯತೆ ವ್ಯಕ್ತಪಡಿಸುತ್ತಾರೆ. ನಿಜ ಜಗತ್ತಿನಲ್ಲಿ ತಮ್ಮ ತಮ್ಮ ಕೋಟೆಗಳಲ್ಲಿ ಭದ್ರವಾಗಿರುತ್ತಾರೆ ಎಂದು ಇದಕ್ಕೆ ಪ್ರತಿಯಾಗಿ ಮತ್ತೊಬ್ಬರು ಹೇಳಿದ್ಧಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Follow Us