ಇತ್ತೀಚಿನ ದಿನಗಳಲ್ಲಿ ಮದುವೆಗಳನ್ನು ವಿಭಿನ್ನವಾಗಿ ಆಚರಿಸುವುದನ್ನು ಕಾಣಬಹುದು. ವಧು ವರರ ಎಂಟ್ರಿಯನ್ನು ಹೊಸ ಕಲ್ಪನೆಗಳ ಮೂಲಕ ಮಾಡುವ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಗಳು ಹುಟ್ಟಿಕೊಂಡ ಮೇಲೆ ಮಂಟಪಕ್ಕೆ ವಧು ವರರ ಆಗಮನದ ಕಲ್ಪನೆಗಳೇ ಬದಲಾಗಿವೆ. ಪ್ರತೀ ಬಾರಿ ವಿಭಿನ್ನ ರೀತಿಯಲ್ಲಿ ವಧು ವರರು ಮಂಟಪಕ್ಕೆ ಆಗಮಿಸುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದೇ ರೀತಿ ಇದೀಗ ವರನೊಬ್ಬ ಜೆಸಿಬಿ (JCB) ಯಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ ವಿಡಿಯೋ ವೈರಲ್ ಅಗಿದೆ. ಚಳಿಗಾಲವಾದ ಕಾರಣ ಉತ್ತರಭಾರತದ ರಾಜ್ಯಗಳಲ್ಲಿ ಹಿಮಪಾತ (Snowfall) ವಾಗುತ್ತಿದೆ. ರಸ್ತೆಯೂ ಕಾಣದಷ್ಟು ದಟ್ಟ ಮಂಜು ಹಾಗೂ ಹಿಮಪಾತ ಸಂಭವಿಸುತ್ತಿದೆ. ಈ ನಡುವೆ ವರನೊಬ್ಬ (Groom) ನಡೆದುಕೊಂಡು ಬರಲು ಅಥವಾ ಕಾರಿನಲ್ಲಿ ಬರಲು ಸಾಧ್ಯವಾಗದೆ ಜೆಸಿಬಿಯಲ್ಲಿ ಬಂದಿದ್ದಾರೆ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿದೆ.
Because of heavy Snowfall going on in Himachal,a barat was ferried in Two JCB Machines in a Snow Bound are of Shimla district in Himachal ..Watch this video of Barat in JCBs ..Himachali Rocks pic.twitter.com/OU6hDDVQea
— Anilkimta (@Anilkimta2) January 24, 2022
ಹಿಮಪಾತದ ನಡುವೆ ವರ ಜೆಸಿಬಿಯಲ್ಲಿ ಬರುವ ವಿಡಿಯೋವನ್ನು @Anilkimta2. ಎನ್ನುವ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಭಾರಿ ಪ್ರಮಾಣದಲ್ಲಿ ಹಿಮಪಾತ, ದಟ್ಟ ಮಂಜು ಕವಿದ ಕಾರಣ ವರನನ್ನು ಜೆಸಿಬಿಯಲ್ಲಿ ಕರೆತರಲಾಯಿತು ಎಂದು ಕ್ಯಾಪ್ಷನ್ ನೀಡುವ ಮೂಲಕ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸದ್ಯ ವಿಡಿಯೋ ಸಖತ್ ವೈರಲ್ ಆಗಿದ್ದು, ಮಂಜಿನ ನಡುವೆ ಜೆಸಿಬಿಯನ್ನು ಓಡಿಸಿಕೊಂಡು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹದು.
ಈ ಹಿಂದೆ ಪಾಕಿಸ್ತಾನ ಪತ್ರಕರ್ತರೊಬ್ಬರು ಹಂಚಿಕೊಂಡ ವಿಡಿಯೋದಲ್ಲಿ ವಧುವರರಿಬ್ಬರೂ ಜೆಸಿಬಿಯನ್ನು ಓಡಿಸಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದರು. ಇದರ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಬಳಿಕ ಎಲ್ಲೆಡೆ ವೈರಲ್ ಆಗಿದತ್ತು. ಇದೀಗ ಹಿಮಪಾತದ ಕಾರಣ ವರ ಜೆಸಿಬಿ ಏರಿ ಬಂದ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ;
ಕಚ್ಚಾ ಬಾದಾಮ್ ಹಾಡಿಗೆ ಸಖತ್ ಹೆಜ್ಜೆ ಹಾಕಿದ ಸ್ಪೈಸ್ ಜೆಟ್ನ ಗಗನಸಖಿ; ವಿಡಿಯೋ ವೈರಲ್