ಸಾಮಾನ್ಯವಾಗಿ ಮದುವೆ ಮನೆಯಲ್ಲಿನ ಕೆಲವು ತಮಾಷೆ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಮದುವೆ ಅಂದಾಕ್ಷಣ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ, ಸಂತೋಷದಿಂದ ಆಚರಣೆಯನ್ನು ಸಂಭ್ರಮಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸುವುದೂ ಸಹ ರೂಢಿಯಲ್ಲಿ ಬಂದುಬಿಟ್ಟಿದೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಅಂಥದ್ದೇ! ಮದುವೆಯಲ್ಲಿ ವರನ ಸ್ನೇಹಿತ ನಾಗಿಣಿ ಡಾನ್ಸ್ ಮಾಡುತ್ತಿದ್ದಾನೆ. ವಿಡಿಯೋ ಸಕತ್ ವೈರಲ್ ಆಗಿದೆ.
ವಧು ವರ ವೇದಿಕೆಯ ಮೇಲೆ ಆಸೀನರಾಗಿದ್ದಾರೆ. ಸ್ನೇಹಿತ ವರನ ಎದುರಿಗೆ ನಾಗಿಣಿ ಹಾಡಿಗೆ ನೃತ್ಯ ಮಾಡುತ್ತಿದ್ದಾನೆ. ಸ್ನೇಹಿತನಂತೆಯೇ ವರನೂ ಸಹ ಅಭಿನಯ ಮಾಡುತ್ತಾನೆ. ತಮಾಷೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.
ವರನು ಅಭಿನಯ ಮಾಡುತ್ತಿದ್ದಂತೆಯೇ ವಧು ನಗಲು ಪ್ರಾರಂಭಿಸುತ್ತಾಳೆ. ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರು ನಗುವ ಎಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಓರ್ವರು, ಮದುವೆಯಲ್ಲಿ ನಾಗಿಣಿ ನೃತ್ಯವನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇನ್ನು, ಕೆಲವರು ವಿಡಿಯೋ ಬಹಳ ಗಮ್ಮತ್ತಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಕಾಮನಬಿಲ್ಲು ಬಣ್ಣದ ಹೆಬ್ಬಾವನ್ನು ಎಂದಾದರೂ ನೋಡಿದ್ದೀರಾ?
Viral Video: ನಾಯಿಯ ಹುಟ್ಟುಹಬ್ಬಕ್ಕೆ ಔತಣಕೂಟ ಏರ್ಪಡಿಸಿದ ಮನೆ ಮಂದಿ! ವಿಡಿಯೊ ವೈರಲ್