Success Story: ಕಿವುಡಿ ಎಂದು ಮೂದಲಿಸಿದರ ಮುಂದೆ ಐಎಎಸ್​ ಅಧಿಕಾರಿಯಾಗಿ ಸಾಧಿಸಿ ತೋರಿಸಿದ ಸೌಮ್ಯ ಶರ್ಮ

Saumya Sharma IAS | ತನ್ನ 16ನೇ ವರ್ಷದಲ್ಲಿ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡ ಸೌಮ್ಯ ಶರ್ಮ ಅದರಿಂದ ಜೀವನವೇ ಮುಗಿದು ಹೋಯಿತೆಂದು ಧೃತಿಗೆಡಲಿಲ್ಲ. ಬದಲಾಗಿ ತನ್ನ ವೈಕಲ್ಯಕ್ಕೇ ಸವಾಲೊಡ್ಡಿ ಅಪ್ಪ-ಅಮ್ಮನ ಪ್ರೋತ್ಸಾಹದಿಂದ ಮೊದಲ ಪ್ರಯತ್ನದಲ್ಲೇ ಐಎಎಸ್​ ಅಧಿಕಾರಿಯಾಗಿ ಆಯ್ಕೆಯಾಗಿದ್ದಾಳೆ.

Success Story: ಕಿವುಡಿ ಎಂದು ಮೂದಲಿಸಿದರ ಮುಂದೆ ಐಎಎಸ್​ ಅಧಿಕಾರಿಯಾಗಿ ಸಾಧಿಸಿ ತೋರಿಸಿದ ಸೌಮ್ಯ ಶರ್ಮ
ಐಎಎಸ್​ ಅಧಿಕಾರಿ ಸೌಮ್ಯ ಶರ್ಮ
Follow us
ಸುಷ್ಮಾ ಚಕ್ರೆ
|

Updated on:Aug 08, 2021 | 3:47 PM

ಆಕೆಯ ತಂದೆ, ತಾಯಿ ಇಬ್ಬರೂ ವೈದ್ಯರು. ಮಧ್ಯಮವರ್ಗದ ಕುಟುಂಬದಲ್ಲಿ ಹುಟ್ಟಿದ ಆಕೆಗೆ ಬಾಲ್ಯದಲ್ಲಿ ಯಾವ ಕಷ್ಟವೂ ಗೊತ್ತಾಗಲೇ ಇಲ್ಲ. ಆದರೆ, ಆಕೆಗೆ 16 ವರ್ಷವಾದಾಗ ಇದ್ದಕ್ಕಿದ್ದಂತೆ ಆಕೆಯ ಕಿವಿ ಕಿವುಡಾಯಿತು. ಡಾಕ್ಟರ್ ಆಗಿದ್ದ ಆಕೆಯ ಅಪ್ಪ-ಅಮ್ಮ ಅದೆಷ್ಟೋ ವೈದ್ಯರನ್ನು ಸಂಪರ್ಕ ಮಾಡಿ, ಏನೇನೋ ಪ್ರಯತ್ನಪಟ್ಟರೂ ಆಕೆಗೆ ಶ್ರವಣ ಶಕ್ತಿ (Hearing Power) ವಾಪಾಸ್ ಬರಲೇ ಇಲ್ಲ. ಆಗ ಕುಟುಂಬಸ್ಥರೆಲ್ಲ ಆಕೆಯ ಬಗ್ಗೆಯೇ ಮಾತನಾಡಿಕೊಳ್ಳತೊಡಗಿದರು. ಇವಳನ್ನು ಇನ್ಯಾರು ಮದುವೆಯಾಗ್ತಾರೆ? ಇವಳಿನ್ನು ಮನೆಯಲ್ಲೇ ಕೂರಬೇಕಷ್ಟೆ ಎಂಬ ಚುಚ್ಚು ಮಾತುಗಳು ಹೆಚ್ಚಾಗತೊಡಗಿತು. ನಾನು ಇವರೆಲ್ಲರ ಮುಂದೆ ಎತ್ತರಕ್ಕೆ ಬೆಳೆದು ತೋರಿಸಲೇಬೇಕು ಎಂದು ಆಗ ಆಕೆ ನಿರ್ಧಾರ ಮಾಡಿದಳು. ಅದರಂತೆ ಬಹಳ ಚಿಕ್ಕ ವಯಸ್ಸಿನಲ್ಲೇ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ​ ಪರೀಕ್ಷೆ (UPSC Exam) ಪಾಸ್ ಮಾಡಿ ಐಎಎಸ್​ (IAS Officer) ಅಧಿಕಾರಿಯಾದಳು. ಆಕೆಯ ಬಗ್ಗೆ ಮಾತನಾಡಿಕೊಂಡವರು ಇನ್ನೂ ಅಲ್ಲೇ ಇದ್ದಾರೆ. ಆದರೆ, ಅದರಿಂದ ಹಠ ತೊಟ್ಟ ಆಕೆ ತನ್ನ ವೈಕಲ್ಯವನ್ನು ಮೀರಿ ಸಾಧಕಳಾಗಿ ನಿಂತಿದ್ದಾಳೆ. ಆಕೆಯ ಹೆಸರು ಸೌಮ್ಯ ಶರ್ಮ (Saumya Sharma).

ಸಾಧಿಸಲೇಬೇಕು ಎಂಬ ಹಠವಿದ್ದರೆ ಅದಕ್ಕೆ ನಮ್ಮ ಯಾವ ನ್ಯೂನತೆಗಳೂ, ಸಮಸ್ಯೆಗಳೂ ಅಡ್ಡಿಯಾಗುವುದಿಲ್ಲ. ನಾಲ್ಕು ಜನರಿಂದ ತಿರಸ್ಕಾರಕ್ಕೆ ಒಳಗಾದಾಗ, ನಾನು ವೇಸ್ಟ್ ಆಗಿಬಿಟ್ಟಿದ್ದೇನೆ ಎಂಬ ಕೊರಗು ನಮ್ಮೊಳಗೇ ಉದ್ಭವವಾದಾಗ, ಹೀಯಾಳಿಸಿದವರಿಗೆ ಉತ್ತರ ಕೊಡಲೇಬೇಕೆಂಬ ಕಿಚ್ಚು ಹೊತ್ತಿಕೊಂಡಾಗಲೇ ನಾವು ಗುರಿ ಮುಟ್ಟಲು ಸಾಧ್ಯ. ಕಷ್ಟದ ಕುಲುಮೆಯಲ್ಲಿ ಬೆಂದವರೇ ಮುಂದೊಂದು ದಿನ ಸುಂದರ ರೂಪ ಪಡೆಯುತ್ತಾರೆ, ನಾಲ್ಕು ಜನಕ್ಕೆ ಉಪಕಾರಿಯಾಗುತ್ತಾರೆ ಎಂಬುದು ಅತಿಶಯೋಕ್ತಿಯ ಮಾತಲ್ಲ. ಅದಕ್ಕೆ ತಾಜಾ ಉದಾಹರಣೆ ಐಎಎಸ್​ ಅಧಿಕಾರಿ ಸೌಮ್ಯ ಶರ್ಮ.

saumya sharma IAS

ಐಎಎಸ್​ ಅಧಿಕಾರಿ ಸೌಮ್ಯ ಶರ್ಮ

ಸೌಮ್ಯ ಶರ್ಮ 2017ರಲ್ಲಿ ಯುಪಿಎಸ್​ಸಿ ಪರೀಕ್ಷೆಯನ್ನು ಪಾಸ್ ಮಾಡಿದ ಯುವತಿ. ತನ್ನ 16ನೇ ವರ್ಷದಲ್ಲಿ ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡ ಸೌಮ್ಯ ಅದರಿಂದ ಜೀವನವೇ ಮುಗಿದು ಹೋಯಿತೆಂದು ಧೃತಿಗೆಡಲಿಲ್ಲ. ಬದಲಾಗಿ ತನ್ನ ವೈಕಲ್ಯಕ್ಕೇ ಸವಾಲೊಡ್ಡಿ ಅಪ್ಪ-ಅಮ್ಮನ ಪ್ರೋತ್ಸಾಹದಿಂದ ಮೊದಲ ಪ್ರಯತ್ನದಲ್ಲೇ ಐಎಎಸ್​ ಅಧಿಕಾರಿಯಾಗಿ ಆಯ್ಕೆಯಾಗಿದ್ದಾಳೆ. ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿ ಪರೀಕ್ಷೆಯಲ್ಲಿ ಭಾರತಕ್ಕೆ 9ನೇ ರ್ಯಾಂಕ್ ಕೂಡ ಪಡೆದಿದ್ದಾಳೆ. ದೆಹಲಿ ಮೂಲದ ಸೌಮ್ಯ ಬಹಳ ಸುಂದರವಾದ ಬಾಲ್ಯವನ್ನು ಅನುಭವಿಸಿದ್ದ ಹುಡುಗಿ. ಅಪ್ಪ-ಅಮ್ಮ ಇಬ್ಬರೂ ವೈದ್ಯರಾಗಿದ್ದರಿಂದ ಮನೆಯಲ್ಲಿ ಯಾವುದಕ್ಕೂ ಕೊರತೆಯೇನೂ ಇರಲಿಲ್ಲ. ಹಾಗಂತ ಸುಖದ ಸುಪ್ಪತ್ತಿಗೆಯೂ ಇರಲಿಲ್ಲ.

ಮಧ್ಯಮ ವರ್ಗದ ಕುಟುಂಬದ ಸೌಮ್ಯ ಮೊದಲಿನಿಂದಲೂ ಓದಿನಲ್ಲಿ ಬಹಳ ಚುರುಕು. ಆದರೆ, ಆಕೆಗೆ 16 ವರ್ಷವಾದಾಗ ಅಂದರೆ ಎಸ್​ಎಸ್​ಎಲ್​ಸಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಆಕೆಗೆ ಕಿವಿ ಕೇಳದಂತಾಯಿತು. ಏನೆಲ್ಲ ಆಪರೇಷನ್ ಮಾಡಿದರೂ ಉಪಯೋಗವಾಗಲಿಲ್ಲ. ಆಕೆ ಶೇ. 95ರಷ್ಟು ಭಾಗ ಕಿವುಡಿಯಾಗಿದ್ದರು. ಈ ಶಾಕ್​ನಿಂದ ಹೊರಗೆ ಬರಲು ಆಕೆಯ ಕುಟುಂಬಕ್ಕೆ ಬಹಳ ಸಮಯವೇ ಬೇಕಾಯಿತು. ಅದರ ಮಧ್ಯೆ ಕುಟುಂಬಸ್ಥರು, ಸುತ್ತಮುತ್ತಲಿನವರ ಟೀಕೆಗಳು ಬೇರೆ ಮನಸನ್ನು ಇನ್ನಷ್ಟು ಚುಚ್ಚುತ್ತಿತ್ತು. ನೋಡಲು ಬಹಳ ಸುಂದರವಾಗಿದ್ದ ಸೌಮ್ಯಳಿಗೆ ಕಿವುಡುತನವೊಂದು ದೊಡ್ಡ ಕಪ್ಪು ಚುಕ್ಕಿಯಾಗಿತ್ತು. ಆದರೆ, ಸೌಮ್ಯ ಮಾತ್ರ ಇದರಿಂದ ಧೈರ್ಯ ಕಳೆದುಕೊಳ್ಳಲಿಲ್ಲ.

saumya sharma IAS

ಐಎಎಸ್​ ಅಧಿಕಾರಿ ಸೌಮ್ಯ ಶರ್ಮ

ಹಿಯರಿಂಗ್ ಏಡ್ ಬಳಸಿ ಆಕೆ ದೆಹಲಿಯ ನ್ಯಾಷನಲ್ ಲಾ ಸ್ಕೂಲ್​ನಲ್ಲಿ ಕಾನೂನು ಪದವಿ ಪಡೆದರು. ತನ್ನ 23ನೇ ವಯಸ್ಸಿಗೆ ಮೊದಲ ಬಾರಿಗೆ ಯುಪಿಎಸ್​ಸಿ ಪರೀಕ್ಷೆ ಬರೆದರು. ಅಚ್ಚರಿಯೆಂಬಂತೆ ಆ ಪರೀಕ್ಷೆಯಲ್ಲಿ ಆಕೆ ಉತ್ತೀರ್ಣಳಾಗಿ 9ನೇ ರ್ಯಾಂಕ್ ಪಡೆದು ಐಎಎಸ್​ಗೆ ಆಯ್ಕೆಯಾದರು. ಯಾವುದೇ ಕೋಚಿಂಗ್ ತೆಗೆದುಕೊಳ್ಳದೆ ಪರೀಕ್ಷೆ ಬರೆದ ಸೌಮ್ಯ ಈಗಲೂ ಅನೇಕ ಕಾಲೇಜುಗಳಿಗೆ ಹೋಗಿ ಯುಪಿಎಸ್​ಸಿ ಪರೀಕ್ಷೆಗೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕೆಂಬ ಬಗ್ಗೆ ಸಲಹೆಗಳನ್ನು ನೀಡುತ್ತಾರೆ. ಈ ಮೂಲಕ ಅದೆಷ್ಟೋ ವಿದ್ಯಾರ್ಥಿಗಳಿಗೆ, ವಿಕಲಾಂಗ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Success Story: 3 ಲಕ್ಷ ರೂ.ನಲ್ಲಿ ಶುರುವಾದ ಟೀ ಶಾಪ್​ನ ಆದಾಯವೀಗ ವರ್ಷಕ್ಕೆ 100 ಕೋಟಿ!

Investor Success Story: 25 ವರ್ಷಕ್ಕೇ ಕೋಟ್ಯಧಿಪತಿಯಾದ ಈ ಯುವಕನ ಬಳಿ ಸ್ವಂತ ಕಾರಿಲ್ಲ; ಅರುಣ್ ಹೇಳಿದ ಹೂಡಿಕೆ ಸೂತ್ರ

(Success Story of IAS Officer Saumya Sharma who is Hearing Impaired but Cleared UPSC exam in First Attempt)

Published On - 3:45 pm, Sun, 8 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ