ಮದುವೆ ಕಾರ್ಡ್ ನಲ್ಲಿ ಫಿಸಿಕಲ್ ಕ್ವಾಲಿಫೈಡ್ ಎಂದು ಅರ್ಹತೆ ಉಲ್ಲೇಖಿಸಿದ ಮದುಮಗ

ಕೆಲವರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯೂ ವಿಭಿನ್ನವಾಗಿರಬೇಕೆಂದು ಬಯಸುತ್ತಾರೆ. ಹೀಗಾಗಿ ವಿಭಿನ್ನವಾಗಿ ಮದುವೆ ಕಾರ್ಡ್ ಮಾಡಿಸುವುದನ್ನು ನೋಡಿರಬಹುದು. ಇಂತಹ ಮದುವೆ ಕಾರ್ಡ್ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ಮದುವೆ ಕಾರ್ಡ್ ವೊಂದರಲ್ಲಿ ಮದುಮಗನ ಹೆಸರಿನ ಕೆಳಭಾಗದಲ್ಲಿ ಫಿಸಿಕಲ್ ಕ್ವಾಲಿಫೈಡ್ ಎಂದು ಬರೆಯಲಾಗಿದೆ. ಇದನ್ನು ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುವ ಮೂಲಕ ಮದುಮಗನ ಕಾಲೆಳೆದಿದ್ದಾರೆ.

ಮದುವೆ ಕಾರ್ಡ್ ನಲ್ಲಿ ಫಿಸಿಕಲ್ ಕ್ವಾಲಿಫೈಡ್ ಎಂದು ಅರ್ಹತೆ ಉಲ್ಲೇಖಿಸಿದ ಮದುಮಗ
ವೈರಲ್ ಫೋಟೋ
Image Credit source: Getty Images/ Instagram

Updated on: May 01, 2025 | 12:04 PM

ಮದುವೆ (marriage) ಅಂದ್ರೆ ಸಂಭ್ರಮವೇ ಸಂಭ್ರಮ. ಹೌದು, ಮದುವೆಯ ದಿನ ಮನೆಯಲ್ಲಿ ಹಬ್ಬದ ವಾತಾವರವೇ ಸೃಷ್ಟಿಯಾಗಿರುತ್ತದೆ. ಮದುವೆ ಎಂದ ಕೂಡಲೇ ಮದುವೆ ಕಾರ್ಡ್,ಜವಳಿ, ಆಭರಣಗಳ ಖರೀದಿಯೂ ತಯಾರಿಗಳು ಜೋರಾಗಿಯೇ ಇರುತ್ತದೆ. ಅದರಲ್ಲಿ ಈಗಿನ ಮದುವೆ ಕಾರ್ಡ್ ಗಳನ್ನು ವಿಭಿನ್ನವಾಗಿ ಮಾಡಿಸುತ್ತಾರೆ. ಸಾಮಾನ್ಯವಾಗಿ ವಧು ವರರು ತಮ್ಮ ಹೆಸರಿನ ಪಕ್ಕದಲ್ಲಿ ತಮ್ಮ ವಿದ್ಯಾರ್ಹತೆ (qualification) ಯ ಬಗ್ಗೆ ಉಲ್ಲೇಖಿಸಿರುವುದನ್ನು ನೋಡಬಹುದು. ಆದರೆ ಇದೀಗ ಮದುವೆ ಕಾರ್ಡಿನ ಫೋಟೋವೊಂದು ವೈರಲ್ ಆಗಿದ್ದು, ಇದರಲ್ಲಿ ಮದುವೆಯಾಗುವ ಹುಡುಗನ ಹೆಸರಿನ ಕೆಳಗೆ ಫಿಸಿಕಲ್ ಕ್ವಾಲಿಫೈಡ್ (physical qualified) ಎಂದು ಬರೆಯಲಾಗಿದ್ದು, ಇದನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ajeet kumar 970 ಹೆಸರಿನ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮದುವೆ ಕಾರ್ಡನ್ನು ಸೂಕ್ಷ್ಮವಾಗಿ ಗಮನಿಸಿ. ವರನ ಹೆಸರನ್ನು ಮಹಾವೀರ್ ಎಂದು ಬರೆಯಲಾಗಿದ್ದು ಅದರ ಕೆಳಭಾಗದಲ್ಲಿ ಫಿಸಿಕಲ್ ಕ್ವಾಲಿಫೈಡ್ ಎಂದು ಉಲ್ಲೇಖಿಸಿರುವುದನ್ನು ನೋಡಬಹುದು.

ಇದನ್ನೂ ಓದಿ
ವಿಶ್ವದಲ್ಲೇ ಈ ವಿಮಾನ ನಿಲ್ದಾಣವು ದುಬಾರಿಯಾಗಲು ಕಾರಣಗಳು ಇವೆ ನೋಡಿ
ಹೆಂಡತಿ-ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ಅಪಾಯಕಾರಿ ಸ್ಟಂಟ್
ಚಲಿಸುತ್ತಿದ್ದ ಬೈಕ್ ನಲ್ಲಿ ಸ್ಟಂಟ್‌ ಮಾಡಲು ಹೋಗಿ ರಸ್ತೆಗೆ ಬಿದ್ದ ಯುವಕ
ಮಾಲ್​​​ನಲ್ಲಿ ಅಗ್ನಿಅವಘಡ, ಜೀವ ಉಳಿಸಿಕೊಳ್ಳಲು ಕಿಟಕಿಯಲ್ಲಿ ನೇತಾಡಿದ ಜನ

ಇದನ್ನೂ ಓದಿ :ವಿಶ್ವದ ದುಬಾರಿ ವಿಮಾನ ನಿಲ್ದಾಣವಿದು, ಇಲ್ಲಿ ಒಂದು ಬಾಳೆ ಹಣ್ಣಿಗೆ ಬೆಲೆ ಎಷ್ಟು ಗೊತ್ತಾ?

ವೈರಲ್ ಫೋಟೋ ಇಲ್ಲಿದೆ ನೋಡಿ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:51 am, Thu, 1 May 25