Viral : ಮದುವೆ ಸಮಯದಲ್ಲೂ ಗ್ರಾಹಕನಿಗೆ ಸ್ಪಂದಿಸಿದ ವರ, ವಿಡಿಯೋ ವೈರಲ್

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದು. ಹೀಗಾಗಿ ಎಲ್ಲರೂ ತಮ್ಮ ತಮ್ಮ ಮದುವೆ ತಯಾರಿಯನ್ನು ಜೋರಾಗಿಯೆ ನಡೆಸುತ್ತಾರೆ..ಹೊಸ ಜೀವನಕ್ಕೆ ಕಾಲಿಡುವ ವಧು ವರರ ಉದ್ಯೋಗದಲ್ಲಿದ್ದರೆ ರಜೆ ಹಾಕಿ ತಮ್ಮ ಮದ್ವೆಯನ್ನು ಎಂಜಾಯ್ ಮಾಡುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮದ್ವೆ ದಿನವು ವ್ಯಾಪಾರಿಗೆ ಗ್ರಾಹಕನಿಂದ ಕರೆ ಬಂದಿದ್ದು, ತನ್ನ ಗ್ರಾಹಕನೊಂದಿಗೆ ಮದುಮಗನು ಮಾತನಾಡಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

Viral : ಮದುವೆ ಸಮಯದಲ್ಲೂ ಗ್ರಾಹಕನಿಗೆ ಸ್ಪಂದಿಸಿದ ವರ, ವಿಡಿಯೋ ವೈರಲ್
ವೈರಲ್ ವಿಡಿಯೋ
Image Credit source: Instagram

Updated on: May 02, 2025 | 4:30 PM

ಹುಡುಗ ಆಗಿರಲಿ, ಹುಡುಗಿಯೇ ಆಗಿರಲಿ ತನ್ನ ಜೀವನ ಸಂಗಾತಿ (life partner) ಯಾಗಿ ಬರುವ ವ್ಯಕ್ತಿಯ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿರುತ್ತಾರೆ. ಉತ್ತಮ ಜೀವನ ನಡೆಸಬೇಕು, ತನ್ನ ಜೊತೆಗೆ ಹೆಚ್ಚಿನ ಸಮಯ ಕಳೆಯಬೇಕು ಹೀಗೆ ಸಾಕಷ್ಟು ಕನಸು ಕಂಡಿರುತ್ತಾರೆ. ಆದರೆ ಮದುವೆ ದಿನವೇ ಮದುಮಗನ ತನ್ನ ಕೆಲಸದಲ್ಲಿ ಬ್ಯುಸಿಯಾದರೆ ಹೇಗಿರುತ್ತದೆ ಎಂದು ಒಮ್ಮೆ ಊಹಿಸಿ. ಹೌದು ಇಲ್ಲೊಬ್ಬ ವರನು ವ್ಯಾಪಾರಿ (bussiness man) ಯಾಗಿದ್ದು, ಈತನಿಗೆ ಮದುವೆ ಶಾಸ್ತ್ರದಲ್ಲಿ ಬ್ಯುಸಿಯಿರುವಾಗಲೇ ಗ್ರಾಹಕನು ಕರೆ ಮಾಡಿ ಮಾತನಾಡಿದ್ದು, ಅಲ್ಲೇ ಇದ್ದ ಕುಟುಂಬಸ್ಥರು ಹಾಗೂ ವಧು ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋವೊಂದು ವೈರಲ್ (video) ಆಗುತ್ತಿದ್ದಂತೆ ನೆಟ್ಟಿಗರು ಈತನ ಬ್ಯುಸಿ ಶೆಡ್ಯೂಲ್ ಕಂಡು ಶಾಕ್ ಆಗಿದ್ದಾರೆ.

iamkhushboo2.o ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ನವಜೋಡಿಯನ್ನು   ಮನೆ ತುಂಬಿಸಿಕೊಳ್ಳುವುದನ್ನು ನೋಡಬಹುದು. ವಧು ವರ ಹಾಗೂ ಕುಟುಂಬ ಸದಸ್ಯರೆಲ್ಲರೂ ಈ ಶಾಸ್ತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ವರನಿಗೆ ಆ ವೇಳೆಯಲ್ಲಿ ಒಂದೂ ಫೋನ್ ಕರೆ ಬಂದಿದೆ. ಕಾಲ್ ಎತ್ತಿದ ವರನಿಗೆ ಗ್ರಾಹಕನಿಂದ ಬಂದ ಕರೆ ಎಂದು ತಿಳಿದು ನಗು ಬರುತ್ತದೆ. ಆದರೆ ವರ ಮಾತ್ರ ಕರೆ ಕಟ್ ಮಾಡದೇ ತಾಳ್ಮೆಯಿಂದಲೇ ಆತನೊಂದಿಗೆ ಮಾತನಾಡುತ್ತಾನೆ. ಇಂದು ಶಾಪ್ ಓಪನ್ ಇಲ್ಲ, ನಾಳೆ ಹೇಳುವೆ ಎಂದು ಹೇಳಿದ್ದಾನೆ. ಗ್ರಾಹಕನು ಬೆಲೆ ಕೇಳಿದಾಗ 180 ಎಂದು ಹೇಳಿ ಕರೆ ಕಟ್ ಮಾಡಿದ್ದಾನೆ. ವರನು ಗ್ರಾಹಕನಂ ಜೊತೆಗೆ ಮಾತನಾಡುತ್ತಿದ್ದನ್ನು ಕೇಳಿದ ಕುಟುಂಬಸ್ಥರು ಹಾಗೂ ವಧುವು ಜೋರಾಗಿ ನಕ್ಕಿದ್ದಾರೆ.

ಇದನ್ನೂ ಓದಿ
ಹಲವು ವರ್ಷಗಳ ಬಳಿಕ ಬಾಲ್ಯವನ್ನು ಕಳೆದ ಮನೆಗೆ ಭೇಟಿ ನೀಡಿ ಭಾವುಕನಾದ ವಿದೇಶಿಗ
ದುಡಿಯುವ ಕೈಗೆ ಆಸರೆಯಾದ, ಹಸಿದ ಗೋವಿಗೆ ಅನ್ನದಾತನಾದ, ನಿಜವಾದ ಪರಮಾತ್ಮ
ಗಂಡ ಗಡ್ಡ ಶೇವ್​ ಮಾಡಿಲ್ಲ ಎಂದು ಮೈದುನನ ಜತೆ ಓಡಿ ಹೋದ ಮಹಿಳೆ
ಕರಡಿ ಘರ್ಜನೆಗೆ ಬೆದರಿದ ಹುಲಿರಾಯ

ಇದನ್ನೂ ಓದಿ : Viral : ನೋಡೋಕೆ ಮಾತ್ರ ಹೈ -ಫೈ ರೆಸ್ಟೋರೆಂಟ್, ಇಲ್ಲಿ ಸಿಗೋ ಪಾನಿಪುರಿಯಲ್ಲಿ ಜಿರಳೆಗಳದ್ದೇ ರಾಶಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋ ಈಗಾಗಲೇ 1.5 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡುಕೊಂಡಿದ್ದು ನೆಟ್ಟಿಗರು ವರನ ಕಾಲೆಳೆದಿದ್ದಾರೆ. ಬಳಕೆದಾರರೊಬ್ಬರು, ‘ಈ ಫನ್ನಿ ಮೂವ್ಮೆಂಟನ್ನು ಜೀವನದಲ್ಲಿ ಪ್ರತಿಯೊಂದು ಕ್ಷಣವು ನೆನಪಿಸಿಕೊಳ್ಳುತ್ತೀರಾ, ಇಬ್ಬರಿಗೂ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು, ‘ಈತ ಮುಗ್ಧ ವ್ಯಕ್ತಿ , ಪತ್ನಿಯೂ ತುಂಬಾ ಮುದ್ದಾಗಿದ್ದಾಳೆ’ ಎಂದಿದ್ದಾರೆ. ಇನ್ನೊಬ್ಬರು, ‘ಈ ರೀತಿ ಕೆಲಸ ಮಾಡಿದರೆ ಬ್ಯುಸಿನೆಸ್ ಲಾಭದಾಯಕವಾಗಿರುತ್ತದೆ’ ಎಂದು ಕಾಮೆಂಟ್ ನಲ್ಲಿ ತಿಳಿಸಿದ್ದಾರೆ. ಕೆಲವರು ಈ ವ್ಯಕ್ತಿಯ ತಾಳ್ಮೆಯನ್ನು ಮೆಚ್ಚಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ