‘ಮಾರಾಯಾ ನೀ ಮದುವೆ ಮೊದಲೇ ಉಲ್ಟಾ ನಿಂತಿದ್ದು ಬಹಳ ಒಳ್ಳೆಯದಾಯ್ತು’ ಎನ್ನುತ್ತಿದ್ದಾರೆ ನೆಟ್ಟಿಗರು

Pre Wedding Shoot : ಪ್ರೀ ವೆಡ್ಡಿಂಗ್ ಶೂಟ್ ಅನ್ನೋದು ರೋಗದಂತೆ ಹರಡುತ್ತಿದೆ ಎಂದು ಒಬ್ಬರು. ಅರೆ, ಈ ಲುಂಗಿ ನಿಂತಿದ್ದರ ಹಿಂದಿರೋ ತಂತ್ರವೇನು? ಎಂದು ಇನ್ನೊಬ್ಬರು. ಅಂತೂ ಭಾರೀ ತಮಾಷೆಗೆ ಒಳಗಾಗಿದೆ ಈ ಜೋಡಿಗಳ ವಿಡಿಯೋ.

‘ಮಾರಾಯಾ ನೀ ಮದುವೆ ಮೊದಲೇ ಉಲ್ಟಾ ನಿಂತಿದ್ದು ಬಹಳ ಒಳ್ಳೆಯದಾಯ್ತು’ ಎನ್ನುತ್ತಿದ್ದಾರೆ ನೆಟ್ಟಿಗರು
ಪ್ರೀ ವೆಡ್ಡಿಂಗ್ ಶೂಟ್​; ಉಲ್ಟಾ ನಿಂತು ಪೋಸ್ ನೀಡಿದ ವರ
Updated By: ಶ್ರೀದೇವಿ ಕಳಸದ

Updated on: Nov 07, 2022 | 4:26 PM

Viral Video : ಪ್ರೀ ವೆಡ್ಡಿಂಗ್ ಶೂಟ್​ನ ವಿಡಿಯೋ, ಫೋಟೋಗಳ ಕಾನ್ಸೆಪ್ಟ್​ ಅಂತೂ ನೀವು ಊಹಿಸಲು ಅಸಾಧ್ಯವೆಂಬಷ್ಟು ಮಟ್ಟಿಗೆ ಕ್ರಿಯಾಶೀಲವಾಗಿ ಚಾಲ್ತಿಯಲ್ಲಿವೆ. ಇದೀಗ ವೈರಲ್ ಆಗಿರುವ ಈ ಮಜಾ ವಿಡಿಯೋ ನೋಡಿ. ನೆಟ್ಟಿಗರಂತೂ ಬಿದ್ದುಬಿದ್ದು ನಗುತ್ತಿದ್ದಾರೆ. ಇಂಥ ಪ್ರೀ ವೆಡ್ಡಿಂಗ್ ಶೂಟ್​ ಈತನಕ ನೋಡಿರಲೇ ಇಲ್ಲ ಎನ್ನುತ್ತಿದ್ಧಾರೆ. ಅಂಥಾ ವಿಶೇಷ ಏನಿದೆ ಇದರಲ್ಲಿ? ನಿಮಗೂ ಕುತೂಹಲ ಉಂಟಾಗುತ್ತಿದೆಯಾ, ಹಾಗಿದ್ದರೆ ನೋಡಿ.

ವಧು ಭರತನಾಟ್ಯದಲ್ಲಿ ಮೈಮರೆಯುತ್ತಿದ್ದರೆ ವರ ಎಷ್ಟೋ ಹೊತ್ತಿನ ತನಕ ತಲೆಕೆಳಗು ಮಾಡಿ ನೆಲಕ್ಕೆ ಕೈಯೂರಿ ನಿಂತಿದ್ದಾನೆ. ಎಷ್ಟೊಂದು ರಮ್ಯವಾದ, ವೈಭವಯುತವಾದ ಮತ್ತು ಸರಳವಾದ ಪ್ರೀ ವೆಡ್ಡಿಂಗ್ ಶೂಟ್​ ವಿಡಿಯೋಗಳನ್ನು ನೀವು ನೋಡಿದ್ದೀರಿ. ಆದರೆ ಇಂಥ ಕಷ್ಟಕರವಾದ ಕರಾಮತ್ತಿನ ವಿಡಿಯೋ ನೋಡಿದ್ದಿರೆ?

5 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 12,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸಾಕಷ್ಟು ಜನರು ರೀಟ್ವೀಟ್ ಮಾಡಿದ್ದಾರೆ. ಮದುವೆಯಾಗಬೇಕೆಂದರೆ ಯೋಗದೊಂದಿಗೆ ಸಮರಕಲೆಯನ್ನೂ ಮದುವೆ ಮೊದಲೇ ಅಭ್ಯಾಸ ಮಾಡಬೇಕಾಗುತ್ತದೆ ಹಾಗಿದ್ದರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮೊದಲೆಲ್ಲ ಮದುವೆ ನಂತರ ಟೆನ್ಷನ್​ ಆಗುತ್ತಿತ್ತು. ಈಗ ಮದುವೆ ಮೊದಲೇ ಟೆನ್ಷನ್​ ಆಗಲು ಶುರುವಾಗಿದೆ ಅಂದಹಾಗಾಯಿತು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಎಲ್ಲಾ ಸರಿ ಆದರೆ ಈ ಲುಂಗಿ ಹೇಗೆ ನಿಂತುಕೊಂಡಿದೆ, ಎಂಥ ತಂತ್ರ ಅಡಗಿದೆ ಇದರಲ್ಲಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ ಇನ್ನೂ ಒಬ್ಬರು.

ಪ್ರೀ ವೆಡ್ಡಿಂಗ್ ಶೂಟ್​ ಎನ್ನುವುದು ರೋಗದಂತೆ ಹಬ್ಬುತ್ತಿದೆ ಎಂದು ಒಬ್ಬರು ಹೇಳಿದ್ದಾರೆ. ಲುಂಗಿಯನ್ನು ವಯಾಗ್ರಾ ವಾಷಿಂಗ್​ ಪೌಡರ್​ನಿಂದ ತೊಳೆಯಲಾಗಿದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಸದ್ಯ ಸಾಂಪ್ರದಾಯಿಕ ಉಡುಪಿನಲ್ಲಿದ್ದಾರೆ ಅವರಿಬ್ಬರೂ! ಎಂದು ಸಮಾಧಾನಪಟ್ಟುಕೊಂಡಿದ್ದಾರೆ ಮಗದೊಬ್ಬರು. ನೋಡೋಣ ಈ ಇಬ್ಬರೂ ಎಷ್ಟು ದಿನ ಹೀಗೇ ನಿಂತುಕೊಂಡಿರುತ್ತಾರೆ ಎಂದು ಯಾರೋ ಒಬ್ಬರು ನಕ್ಕಿದ್ದಾರೆ.

ಜನರ ಪ್ರತಿಕ್ರಿಯೆಗಳು ನಿಲ್ಲುವುದೇ ಇಲ್ಲ ಬರೆಯುತ್ತ ಹೋದರೆ. ಅದೊಂದು ತಳ ಮುಟ್ಟದ ಸಾಗರದಂತೆ.

ಸರಿ, ನಿಮಗೇನು ಅನ್ನಿಸುತ್ತೆ ಈ ವಿಡಿಯೋ ನೋಡಿ?

 

.