Guinness World Records: ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತೀ ಚಿಕ್ಕ ಎಸ್ಕಲೇಟರ್; ವಿಡಿಯೋ ಇಲ್ಲಿದೆ ನೋಡಿ

|

Updated on: Apr 27, 2024 | 11:00 AM

ವಿಶ್ವದ ಅತ್ಯಂತ ಚಿಕ್ಕ ಎಸ್ಕಲೇಟರ್ ಜಪಾನ್‌ನಲ್ಲಿದೆ. ಈ ಎಸ್ಕಲೇಟರ್‌ ಬರೀ 5 ಮೆಟ್ಟಿಲುಗಳನ್ನು ಒಳಗೊಂಡಿದೆ. ಇದರ ಎತ್ತರ 83 ಸೆಂ ಮತ್ತು ದೂರ 2.7 ಅಡಿ. ಜನರು ಕೇವಲ ಐದು ಮೆಟ್ಟಿಲುಗಳನ್ನು ಏರಲು ಈ ಎಸ್ಕಲೇಟರ್ ಅನ್ನು ಬಳಸುತ್ತಾರೆ.

Guinness World Records: ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತೀ ಚಿಕ್ಕ ಎಸ್ಕಲೇಟರ್; ವಿಡಿಯೋ ಇಲ್ಲಿದೆ ನೋಡಿ
ವಿಶ್ವದ ಅತೀ ಚಿಕ್ಕ ಎಸ್ಕಲೇಟರ್
Follow us on

ಸಾಮಾನ್ಯವಾಗಿ ಮಾಲ್​ಗಳಲ್ಲಿ ಮೆಟ್ರೋ, ರೈಲ್ವೇ ಸ್ಟೇಷನ್​​ಗಳಲ್ಲಿ ನೀವು ಎಸ್ಕಲೇಟರ್‌ಗಳನ್ನು ನೋಡಿರುತ್ತೀರಿ. ಹೆಚ್ಚು ಮೆಟ್ಟಿಲುಗಳು ಇರುವುದರಿಂದ ನಡೆಯಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ಎಸ್ಕಲೇಟರ್​ಗಳನ್ನು ಅಳವಡಿಸಲಾಗುತ್ತದೆ. ಆದರೇ ಎಂದಾದರೂ ಕೇವಲ 5 ಮೆಟ್ಟಿಲುಗಳಿರುವ ಎಸ್ಕಲೇಟರ್​ ಅನ್ನು ನೀವು ನೋಡಿದ್ದೀರಾ? ಇದೀಗ ಈ ಪುಟ್ಟ ಎಸ್ಕಲೇಟರ್ ಗಿನ್ನೆಸ್ ವಿಶ್ವ ದಾಖಲೆ ಪುಟದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ಸದ್ಯ ವಿಶ್ವದ ಅತೀ ಚಿಕ್ಕ ಎಸ್ಕಲೇಟರ್​​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

ವಿಶ್ವದ ಅತ್ಯಂತ ಚಿಕ್ಕ ಎಸ್ಕಲೇಟರ್ ಜಪಾನ್‌ನಲ್ಲಿದೆ. ಈ ಎಸ್ಕಲೇಟರ್‌ ಬರೀ 5 ಮೆಟ್ಟಿಲುಗಳನ್ನು ಒಳಗೊಂಡಿದೆ. ಇದರ ಎತ್ತರ 83 ಸೆಂ ಮತ್ತು ದೂರ 2.7 ಅಡಿ. ಜನರು ಕೇವಲ ಐದು ಮೆಟ್ಟಿಲುಗಳನ್ನು ಏರಲು ಈ ಎಸ್ಕಲೇಟರ್ ಅನ್ನು ಬಳಸುತ್ತಾರೆ.

ಮತ್ತಷ್ಟು ಓದಿ: 110 ವರ್ಷ ವಯಸ್ಸು, ಒಬ್ಬರೇ ಇರ್ತಾರೆ, ಕಾರು ಓಡಿಸ್ತಾರೆ, ಯಾವುದೇ ರೋಗ ಇಲ್ಲ, ಆಹಾರ ಕ್ರಮ ಹೇಗಿದೆ ಗೊತ್ತೇ?

@kavi_gomase ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಏಪ್ರಿಲ್​​ 26ರಂದು ವಿಶ್ವದ ಅತೀ ಚಿಕ್ಕ ಎಸ್ಕಲೇಟರ್ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 40 ಸಾವಿರಕ್ಕೂ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ವಿಡಿಯೋ ವೀಕ್ಷಿಸಿದ  800ರಕ್ಕೂ ಹೆಚ್ಚಿನ  ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಸಾಕಷ್ಟು ಕಾಮೆಂಟ್​ಗಳನ್ನು ಕೂಡ ಕಾಣಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ