ಅಹಮದಾಬಾದ್: ಗುಜರಾತ್ನಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದರಲ್ಲಿ, ಗುಜರಾತ್ ಆಸ್ಪತ್ರೆಯ ವೈದ್ಯರು ತಮ್ಮ ಕನ್ಸಲ್ಟೇಷನ್ ರೂಂಗೆ ಬರುವ ಮೊದಲು ಚಪ್ಪಲಿಯನ್ನು ತೆಗೆದು ಹೊರಗೆ ಇಡಬೇಕೆಂದು ರೋಗಿಯ ಕುಟುಂಬದ ಸದಸ್ಯರಿಗೆ ಸೂಚಿಸಿದ್ದರು. ಇದರಿಂದ ಕೆರಳಿದ ಕುಟುಂಬಸ್ಥರು ಆ ವೈದ್ಯರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಘಾತ ಉಂಟುಮಾಡಿದೆ.
ಗುಜರಾತ್ನ ಭಾವನಗರದ ಸಿಹೋರ್‌ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಈ ಘಟನೆ ನಡೆದಿದೆ. ತಲೆಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ರೋಗಿಯ ಕುಟುಂಬಸ್ಥರು ಮಹಿಳೆಯನ್ನು ಆಸ್ಪತ್ರೆಗೆ ಕರೆತಂದಿದ್ದರು.
Young Doctor assaulted at Sihor hospital in #Bhavnagar district;
Altercation erupts over removing shoes.
A verbal altercation turned violent when relatives of a female patient were instructed to remove their footwear before entering the emergency ward.”#MedTwitter @JPNadda pic.twitter.com/b91PU6eECD— Indian Doctor🇮🇳 (@Indian__doctor) September 16, 2024
ಸಿಸಿಟಿವಿ ದೃಶ್ಯಗಳ ಪ್ರಕಾರ, ಎಮರ್ಜೆನ್ಸಿ ರೂಂ ಒಳಗಿನ ಹಾಸಿಗೆಯ ಮೇಲೆ ಮಹಿಳೆಯ ಪಕ್ಕದಲ್ಲಿ ಕೆಲವು ಪುರುಷರು ನಿಂತಿರುವುದನ್ನು ಕಾಣಬಹುದು. ಕೆಲವು ಸೆಕೆಂಡುಗಳ ನಂತರ, ಡಾ. ಜೈದೀಪ್‌ಸಿನ್ಹ್ ಗೋಹಿಲ್ ಆ ರೂಂಗೆ ಪ್ರವೇಶಿಸಿದರು. ಆಗ ಅಲ್ಲಿದ್ದವರಿಗೆ ನಿಮ್ಮ ಚಪ್ಪಲಿಗಳನ್ನು ಹೊರಗೆ ಕಳಚಿಟ್ಟು ಒಳಗೆ ಬನ್ನಿ ಎಂದು ಸೂಚಿಸಿದರು.
ಇದನ್ನೂ ಓದಿ: ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಇದರಿಂದ ವೈದ್ಯರು ಹಾಗೂ ರೋಗಿಯ ಕುಟುಂಬದವರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪುರುಷರ ಗುಂಪು ವೈದ್ಯರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿತು ಮತ್ತು ಮಹಿಳೆ ಹಾಸಿಗೆಯ ಮೇಲೆ ಮಲಗಿದ್ದರೂ ಸಹ ವೈದ್ಯರನ್ನು ಥಳಿಸಿತು. ಎನ್‌ಡಿಟಿವಿ ಪ್ರಕಾರ, ಈ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ