Video: ಭಾರತ ಅಗ್ಗ ಅಂದುಕೊಂಡ್ರಾ, ಇಲ್ಲಿನ ಜೀವನ ಎಷ್ಟು ಕಷ್ಟ ಎಂದ ರಷ್ಯನ್ ಯುವತಿ

ವಿದೇಶ ಎಂದರೆ ಬಲು ದುಬಾರಿ, ಹೀಗಾಗಿ ವಿದೇಶಕ್ಕೆ ಹೋಲಿಸಿದ್ರೆ ಭಾರತದಲ್ಲಿ ಕಡಿಮೆ ಸಂಬಳವಿದ್ರು ಆರಾಮದಾಯಕವಾಗಿ ಜೀವನ ನಡೆಸ್ಬಹುದು ಎನ್ನುವುದು ಅನೇಕರ ಅಭಿಪ್ರಾಯ. ನಿಮ್ಮಲ್ಲಿ ಹಣವಿದ್ದರೆ ಮಾತ್ರ ಇಲ್ಲಿ ಬದುಕ್ಬಹುದು ಎಂದು ವಿದೇಶಿ ಯುವತಿಯೊಬ್ಬಳು ಹೇಳಿಕೊಂಡಿದ್ದಾರೆ. ಭಾರತದಲ್ಲಿ ಜೀವನ ನಡೆಸೋದು ಕಷ್ಟ ಎಂದಿರುವ ರಷ್ಯಾದ ಯುವತಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Video: ಭಾರತ ಅಗ್ಗ ಅಂದುಕೊಂಡ್ರಾ, ಇಲ್ಲಿನ ಜೀವನ ಎಷ್ಟು ಕಷ್ಟ ಎಂದ ರಷ್ಯನ್ ಯುವತಿ
ವೈರಲ್‌ ವಿಡಿಯೋ
Image Credit source: Instagram

Updated on: Sep 07, 2025 | 12:06 PM

ಈಗಿನ ದುಬಾರಿ ದುನಿಯಾದಲ್ಲಿ ಬದುಕೋದು ಕಷ್ಟನೇ ಬಿಡಿ. ಅದು ನಮ್ಮ ದೇಶವಾಗಿರಲಿ, ವಿದೇಶವಾಗಿರಲಿ ಖರ್ಚು ವೆಚ್ಚಗಳು ಸ್ವಲ್ಪ ವ್ಯತ್ಯಾಸವಿರಬಹುದು. ಆದರೆ ವಿದೇಶದಲ್ಲಿ ಸಂಬಳ ಅಧಿಕವಾಗಿದ್ರು ದುಡಿದ ಅರ್ಧಕಷ್ಟು ಹಣವು ಬಾಡಿಗೆ, ದಿನಸಿ ಸಾಮಾನುಗಳು ಹೀಗೆ ವೆಚ್ಚವಾಗುತ್ತದೆ. ಹೀಗಾಗಿ ವಿದೇಶಕ್ಕೆ ಹೋಲಿಸಿದ್ರೆ ಭಾರತದ ಜೀವನ ಸ್ವಲ್ಪ ಅಗ್ಗವೇ ಆಗಿದೆ ಎಂದು ಹೇಳುವುದನ್ನು ನೀವು ನೋಡಿರಬಹುದು. ಆದರೆ ರಷ್ಯಾದ ಯುವತಿಗೆ (Russian Young women) ಗುರುಗ್ರಾಮ್‌ನಲ್ಲಿ (Gurugram) ಇದಕ್ಕೆ ತದ್ವಿರುದ್ಧವಾದ ಅನುಭವ ಆಗಿದೆ ಅಂತೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

meowvi.vi ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವಿಕ್ಟೋರಿಯಾ ಹೆಸರಿನ ರಷ್ಯಾದ ಯುವತಿಯೂ ಗುರುಗ್ರಾಮ್‌ನಲ್ಲಿ ಖರ್ಚು ವೆಚ್ಚದ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋಗೆ ಶೀರ್ಷಿಕೆ ನೀಡಿದ್ದು, ಭಾರತದಲ್ಲಿ ಜೀವನ ಅಗ್ಗವಾಗಿದೆ ಎನ್ನುವುದು ಅನೇಕರ ಅಭಿಪ್ರಾಯ. ಆದರೆ ಈ ಗುರುಗ್ರಾಮ್‌ನಲ್ಲಿ ನಾನು ಒಂದು ತಿಂಗಳಲ್ಲಿ ಕಳೆಯುವ ಹಣವು ಇಷ್ಟಾಗಿರುತ್ತದೆ. ನೀವು ಈ ಗುರುಗ್ರಾಮ್‌ನಲ್ಲಿ ಉತ್ತಮ ಜೀವನ ನಡೆಸಲು ಬಯಸಿದರೆ, ಅದಕ್ಕೆ ನಿಮ್ಮ ಜೇಬನ್ನು ಸಿದ್ಧಪಡಿಸಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ
ಕೇರಳದ ಮಕ್ಕಳೊಂದಿಗೆ ಮಲಯಾಳಂ ಮಾತನಾಡಿ ಬೆರಗು ಮೂಡಿಸಿದ ಪೋಲಿಷ್ ಮಹಿಳೆ
ಭಾರತ ಬಿಟ್ಟು ಹೊರಡುವಾಗ ಅಮೆರಿಕನ್ ಮಹಿಳೆ ಭಾವುಕ
ಭಾರತ ಎಷ್ಟು ಸುಂದರವಾಗಿದೆ ಎಂದು ತೋರಿಸಿಕೊಟ್ಟ ವಿದೇಶಿ ವ್ಲಾಗರ್
ವಿದ್ಯಾರ್ಥಿ ಭವನದ ಊಟ ಸವಿದು ಪ್ರಾಮಾಣಿಕ ರೇಟಿಂಗ್ಸ್‌ ನೀಡಿದ ವ್ಲಾಗರ್

ವೈರಲ್ ವಿಡಿಯೋ ಇಲ್ಲಿದೆ ನೋಡಿ

ವಿಕ್ಟೋರಿಯಾ ಗುರುಗ್ರಾಮ್‌ನಲ್ಲಿ ಜೀವನ ನಡೆಸಲು ತಾನು ಎಷ್ಟು ಖರ್ಚು ಮಾಡಬೇಕಾಗುತ್ತದೆ ಎಂದು ವಿವರಿಸಿದ್ದು, 1BHK ಗೆ ತಿಂಗಳಿಗೆ ಬಾಡಿಗೆ 1,20,000 ರೂ, ಉಬರ್ ಸವಾರಿಗೆ 1,000 ರೂ, ರೆಸ್ಟೋರೆಂಟ್‌ನಲ್ಲಿ ಆಹಾರ ಸವಿಯಲು 2,500 ರೂ, ವಿದ್ಯುತ್‌ ಬಿಲ್ 15,000 ರೂ, ಶಾಪಿಂಗ್‌ ಗಾಗಿ 30,000 ರೂ, ಔಷಧಿಗಳಿಗೆ 20,000 ರೂ, ಬ್ಯೂಟಿ ಕೇರ್ 15,000 ರೂ ಹಾಗೂ ತಿಂಗಳ ದಿನಸಿಗಾಗಿ 40,000 ರೂ ಎಂದು ಹೇಳಿರುವುದನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: Video: ಕೇರಳದ ಮಕ್ಕಳೊಂದಿಗೆ ಮಲಯಾಳಂ ಮಾತನಾಡಿ ಬೆರಗು ಮೂಡಿಸಿದ ಪೋಲಿಷ್ ಮಹಿಳೆ

ಈ ವಿಡಿಯೋ ಇದುವರೆಗೂ 2.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಬಳಕೆದಾರರೊಬ್ಬರು ಐಷಾರಾಮಿ ಜೀವನ ನಡೆಸಲು ಎಷ್ಟು ದುಡಿದ್ದರೂ ಸಾಲದು, ಹೀಗಾಗಿ ಇತಿಮಿತಿಯಲ್ಲಿದ್ರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು ನೀವು ಗುರುಗ್ರಾಮ್‌ನಲ್ಲಿ ಇರುವುದೇ ನೀವು ಮಾಡಿದ ಮೊದಲ ತಪ್ಪು ಎಂದಿದ್ದಾರೆ. ಇನ್ನೊಬ್ಬರು ನೀವು ಔಷಧಕ್ಕಾಗಿ 20000 ರೂ ಖರ್ಚು ಮಾಡುತ್ತೀರಾ, ಅಂತಹ ಆರೋಗ್ಯ ಸಮಸ್ಯೆ ಏನು ಎಂದು ಕಾಮೆಂಟ್ ನಲ್ಲಿ ಕೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ