Video: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯ ರಕ್ಷಣೆಗೆ ಧಾವಿಸಿದ ರಿಯಲ್ ಹೀರೋಸ್; ವಿಡಿಯೋ ವೈರಲ್
ಕೆಲವರು ಎಲ್ಲಾ ಸಮಸ್ಯೆಗೂ ಆತ್ಮಹತ್ಯೆ ಒಂದೇ ಪರಿಹಾರವೆಂದುಕೊಂಡು ತಮ್ಮ ಅಮೂಲ್ಯವಾದ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಮಹಿಳೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ದೇವರಂತೆ ಬಂದು ಒಂದಷ್ಟು ಪುರುಷರು ಆಕೆಯ ಪ್ರಾಣವನ್ನು ರಕ್ಷಿಸಿದ್ದಾರೆ. ಈ ಭಾವನಾತ್ಮಕ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದ್ದು, ಮಹಿಳೆಯ ಪ್ರಾಣ ರಕ್ಷಿಸಿದ ರಿಯಲ್ ಹೀರೋಗಳ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಜೀವನ (Life) ಎನ್ನುವಂತಹದ್ದು ತುಂಬಾನೇ ಅಮೂಲ್ಯವಾದದ್ದು, ಅದನ್ನು ಹಾಳು ಮಾಡಿಕೊಳ್ಳಬಾರದು. ಸಮಸ್ಯೆಗಳನ್ನು ಎದುರಿಸಿ ಬದುಕಲು ಕಲಿಯಬೇಕು. ಹೀಗಿದ್ದರೂ ಅದೆಷ್ಟೋ ಜನರು ತಮ್ಮ ನೋವು ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವೆಂದು ತಮ್ಮ ಅಮೂಲ್ಯ ಜೀವವನ್ನೇ ಕಳೆದುಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಮಹಿಳೆ ತನ್ನ ಕಷ್ಟಗಳಿಗೆ ಆತ್ಮಹತ್ಯೆಯೇ ಪರಿಹಾರವೆಂದು ನದಿಗೆ ಹಾರಲು ಯತ್ನಿಸಿದ್ದು, ಒಂದಷ್ಟು ಪುರುಷರು ಸಮಯ ಪ್ರಜ್ಞೆಯಿಂದ ಆಕೆಯ ಪ್ರಾಣವನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ರಿಯಲ್ ಹೀರೋಗಳ (Real heroes) ಈ ಮಹತ್ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಆತ್ಮಹತ್ಯೆಗೆ ಯತ್ನಿಸಿದಾಕೆಯ ಪ್ರಾಣ ರಕ್ಷಿಸಿದ ರಿಯಲ್ ಹೀರೋಸ್:
ಮಹಿಳೆಯೊಬ್ಬಳು ಅಳುತ್ತಾ ಡ್ಯಾಂ ಬಳಿ ನಿಂತು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು, ಆಕೆ ನದಿಗೆ ಹಾರಬೇಕು ಅನ್ನುವಷ್ಟರಲ್ಲಿ ತಮ್ಮ ಸಮಯ ಪ್ರಜ್ಞೆಯಿಂದ ಒಂದಷ್ಟು ಪುರುಷರು ಆಕೆಯ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯ ಖಜುರಿಯಾ ಲಾಸಿ ಡ್ಯಾಂ ಬಳಿ ನಡೆದಿದ್ದು ಎನ್ನಲಾಗುತ್ತಿದೆ.
ಈ ವಿಡಿಯೋವನ್ನು ಧರ್ಮೇಂದ್ರ ಯಾದವ್ (Dharmendra Yadav) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
आत्महत्या के कगार पर पहुँचे इंसान को बचाने वाला सिर्फ शरीर नहीं, उसका मन, उसकी आत्मा, और उसकी दुनिया बचा लेता है।
चुपचाप खड़ा था वो पुल की मुंडेर पर, ज़िंदगी से हारा, उम्मीदों के डर पर तभी एक हाथ पीछे से बढ़ा,ना कोई सवाल, ना कोई सज़ा। pic.twitter.com/NUxTH6aoOc
— Dharmendra Yadav (@Dharmendra2091) September 4, 2025
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ಅಳುತ್ತಾ ಡ್ಯಾಂ ಬಳಿ ನಿಂತು ಆತ್ಮಹತ್ಯೆಗೆ ಮುಂದಾಗುತ್ತಿರುವ ದೃಶ್ಯವನ್ನು ಕಾಣಬಹುದು. ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಾಗ ಹಿಂದಿನಿಂದ ಬಂದಂತಹ ವ್ಯಕ್ತಿಯೊಬ್ಬರು ಆಕೆಯ ಕೈಯನ್ನು ಹಿಡಿದು ಎಳೆದಿದ್ದಾರೆ. ನಂತರ ಮೂರು ನಾಲ್ಕು ಜನ ಬಂದು ಆಕೆಯನ್ನು ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: ಸಮೋಸ ತರಲು ನಿರಾಕರಿಸಿದ ಪತಿ, ಕೋಪದಲ್ಲಿ ಥಳಿಸಿ ಹಲ್ಲೆಗೆ ಯತ್ನಿಸಿದ ಪತ್ನಿ
ಸೆಪ್ಟೆಂಬರ್ 04 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಸಾಯಲು ಮುಂದಾದವರನ್ನು ಬದುಕಿಸುವ ಅವಶ್ಯಕತೆಯಾದರೂ ಏನಿತ್ತುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಜನ ಯಾಕೆ ಈ ರೀತಿ ಮೂರ್ಖರಂತೆ ವರ್ತಿಸಬೇಕುʼ ಎಂದು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇವರು ನಿಜವಾದ ಹೀರೋಗಳುʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








