Dilse : ಹಾಡು ಹಳೆಯದಾದರೇನು ಭಾವ ನವನವೀನ ಎನ್ನುವಂತೆ ಇನ್ಸ್ಟಾಗ್ರಾಂನ ರೀಲ್ಗಳು. ಹಳತು ಹೊಸತು ಎಂಬ ಬೇಧವಿಲ್ಲದೆ ಲಕ್ಷಾಂತರ ಕಲಾವಿದರು ಅವುಗಳ ಮರುಪ್ರಸ್ತುತಿ ಮಾಡುತ್ತಾರೆ. ಒಬ್ಬೊಬ್ಬರ ಪ್ರಸ್ತುತಿಯನ್ನು ಕೇಳಿದಾಗಲೂ ಆ ಹಾಡು ಹೊಸ ಮೆರುಗನ್ನು ಪಡೆದುಕೊಳ್ಳುತ್ತದೆ, ಅಷ್ಟೇ ಅಲ್ಲ ಕೇಳುಗರಲ್ಲಿ ಸಂಚಲವನ್ನೂ ಉಂಟುಮಾಡುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸಂಗೀತ ನಿರ್ವಹಣಕಾರ ಮತ್ತು ಸೌಂಡ್ ಎಂಜಿನಿಯರ್ ಆಗಿರುವ ಆದಿತ್ಯ ಓಕ್ (Aditya Oke) ಎಂಬುವವರು ದಿಲ್ಸೆ (Dilse) ಚಿತ್ರದ ಜಿಯಾ ಜಲೇ ಜಾನ್ ಜಲೇ (Jiya Jale Jaan Jale) ಹಾಡನ್ನು ಹಾರ್ಮೋನಿಯಂನಲ್ಲಿ ನುಡಿಸಿದ್ದಾರೆ ಕೇಳಿ, ನೋಡಿ.
ಆಹಾ ಎಷ್ಟು ಸುಮಧುರವಾಗಿದೆ ಈ ನುಡಿಸಾಣಿಕೆ, ನನ್ನ ಮನಸ್ಸು ಮತ್ತು ಹೃದಯ ಪ್ರಫುಲ್ಲಗೊಂಡವು ಎಂದಿದ್ದಾರೆ ನೆಟ್ಟಿಗರು. ಹಾರ್ಮೋನಿಯಂ ಆ ಹಾಡಿನ ಆತ್ಮವನ್ನು ಇಲ್ಲಿ ವಿಸ್ತರಿಸಿದೆ ಎನ್ನಿಸುತ್ತಿದ ಎಂದಿದ್ದಾರೆ ಒಬ್ಬರು. ಬೆರಳುಗಳು ಹಾರ್ಮೋನಿಯಂ ಕೀಗಳ ಮೇಲೆ ಎಷ್ಟೊಂದು ಲೀಲಾಜಾಲವಾಗಿ ಚಲಿಸುತ್ತಿವೆ, ಅದ್ಭುತ ಎಂದಿದ್ದಾರೆ ಮತ್ತೊಬ್ಬರು. ಆದಿತ್ಯ ಅವರು ನುಡಿಸಿದ ”ಲಾಲ್ ಇಷ್ಕ್” ಕೇಳಿ ಈ ಕೆಳಗಿನ ರೀಲ್ನಲ್ಲಿ.
ಎಷ್ಟು ಸಲ ಕೇಳಿದರೂ ಇದರ ನಶೆಯೇ ಇಳಿಯುತ್ತಿಲ್ಲ ಎಂದಿದ್ದಾರೆ ಮಗದೊಬ್ಬರು. ನನ್ನ ಪ್ರಿಯತಮನನ್ನು ಖುಷಿಪಡಿಸಲು ಇದಕ್ಕಿಂತ ಮತ್ತೊಂದು ರೀಲ್ ಇಲ್ಲವೇ ಇಲ್ಲ ಎಂದಿದ್ದಾರೆ ಇನ್ನೂ ಒಬ್ಬರು. 1 ಲಕ್ಷಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. 30,000ಕ್ಕಿಂತಲೂ ಹೆಚ್ಚು ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ : Viral Video: ಉಸ್ತಾದ್ ಸ್ಪೈಡರ್ಖಾನ್; ಖಂಡಿತ ಇದು ಜಗತ್ತಿನ ಶಾಂತಿಗಾಗಿ ಅಲ್ಲ!
ನೂರಾರು ಜನರು ತಮ್ಮ ಮೆಚ್ಚುಗೆಯನ್ನು ಈ ವಿಡಿಯೋಗೆ ಸೂಚಿಸಿದ್ದಾರೆ. ಮತ್ತಷ್ಟು ಚಿತ್ರಗೀತೆಗಳನ್ನು ನಿಮ್ಮ ಹಾರ್ಮೋನಿಯಂ ವಾದನದಲ್ಲಿ ಕೇಳುವ ಆಸೆಯಾಗುತ್ತಿದೆ ಎಂದು ಅನೇಕರು ಹಳೆಯ ಮತ್ತು ಹೊಸ ಚಿತ್ರಗೀತೆಗಳ ಪಟ್ಟಿಯನ್ನೇ ನೀಡುತ್ತಿದ್ದಾರೆ ಈ ಪೋಸ್ಟ್ನಡಿ.
ಈ ಸಂಜೆ, ರೊಯ್ಯನೇ ಬೀಸುತ್ತಿರುವ ಗಾಳಿ ಮತ್ತು ಹಾರ್ಮೋನಿಯಂನಲ್ಲಿ ಈ ಹಾಡು… ಒಟ್ಟಾರೆ ನಿಮಗೀಗ ಒಂದೆರಡು ಹೆಜ್ಜೆ ಕುಣಿಯಬೇಕು ಎನ್ನಿಸುತ್ತಿರಬೇಕಲ್ಲ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 3:44 pm, Wed, 5 July 23