Viral: ಹೆಂಡ್ತಿಯಿಂದ ಮುಕ್ತಿ ಸಿಕ್ಕ ಖುಷಿಗೆ ಗೊಂಬೆಯ ಜೊತೆ ಭರ್ಜರಿ ಡಿವೋರ್ಸ್‌ ಪಾರ್ಟಿ ಮಾಡಿದ ಪತಿರಾಯ; ವಿಡಿಯೋ ವೈರಲ್‌

| Updated By: ಅಕ್ಷತಾ ವರ್ಕಾಡಿ

Updated on: Dec 15, 2024 | 5:17 PM

ಕೆಲ ವಾರಗಳ ಹಿಂದೆಯಷ್ಟೇ ಪಾಕಿಸ್ತಾನಿ ಮಹಿಳೆಯೊಬ್ಬರು ಡಿವೋರ್ಸ್‌ ಪಡೆದ ಖುಷಿಗೆ ಮದುವೆ ಫೋಟೋಗಳನ್ನು ಹರಿದು, ಕೇಕ್‌ ಕಟ್‌ ಮಾಡಿ ಸಂಭ್ರಮಾಚರಣೆ ಮಾಡಿದಂತಹ ಸುದ್ದಿಯೊಂದು ಸಖತ್‌ ವೈರಲ್‌ ಆಗಿತ್ತು. ಮತ್ತೊಂದು ಇಂತಹದ್ದೇ ವಿಚಿತ್ರ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಹೆಂಡ್ತಿಯಿಂದ ಮುಕ್ತಿ ಸಿಕ್ಕ ಖುಷಿಗೆ ಗೊಂಬೆಯ ಜೊತೆ ಭರ್ಜರಿ ಡಿವೋರ್ಸ್‌ ಪಾರ್ಟಿ ಮಾಡಿದ್ದಾನೆ. ಸದ್ಯ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.

Viral: ಹೆಂಡ್ತಿಯಿಂದ ಮುಕ್ತಿ ಸಿಕ್ಕ ಖುಷಿಗೆ ಗೊಂಬೆಯ ಜೊತೆ ಭರ್ಜರಿ ಡಿವೋರ್ಸ್‌ ಪಾರ್ಟಿ ಮಾಡಿದ ಪತಿರಾಯ; ವಿಡಿಯೋ ವೈರಲ್‌
Haryana
Follow us on

ಇವತ್ತಿನ ಕಾಲದಲ್ಲಿ ಕ್ಷುಲ್ಲಕ ಕಾರಣಗಳಿಗೆ ಸಂಬಂಧಗಳು ಮುರಿದುಕೊಳ್ಳುತ್ತಿವೆ. ಕೆಲ ಗಂಡ ಹೆಂಡ್ತಿಯಂತೂ ಸಣ್ಣಪುಟ್ಟ ಕಾರಣಗಳಿಗೆ ಡಿವೋರ್ಸ್‌ ತೆಗೆದುಕೊಳ್ಳುತ್ತಿದ್ದಾರೆ. ಈ ವಿಚ್ಛೇದನದ ಬಳಿಕ ಖುಷಿಗಿಂತ ಮಾನಸಿಕ ಯಾತನೆ, ನೋವು, ಒಂಟಿತನವನ್ನು ಅನುಭವಿಸುವವರೇ ಹೆಚ್ಚು. ಆದ್ರೆ ಕೆಲವೊಬ್ಬರು ಮಾತ್ರ ಡಿವೋರ್ಸ್‌ ಸಿಕ್ಕಾಗ ಬಂಧನದಿಂದ ಮುಕ್ತಿ ಸಿಕ್ಕಷ್ಟೇ ಸಂತೋಷ ಪಡ್ತಾರೆ. ಈ ಖುಷಿಗೆ ಸ್ನೇಹಿತರ ಜೊತೆಗೂಡಿ ಭರ್ಜರಿ ಪಾರ್ಟಿ ಮಾಡಿದವರು ಸಹ ಇದ್ದಾರೆ. ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೂಡಾ ಹೆಂಡ್ತಿಯಿಂದ ಮುಕ್ತಿ ಸಿಕ್ಕ ಖುಷಿಗೆ ಡಿವೋರ್ಸ್‌ ಪಾರ್ಟಿ ಮಾಡಿದ್ದಾನೆ. ಹೌದು ಈತ ಮಾಜಿ ಹೆಂಡ್ತಿಯ ಮ್ಯಾನಿಕ್ಯು ಜೊತೆ ಮಸ್ತ್‌ ಪಾರ್ಟಿ ಮಾಡಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ವಿಚಿತ್ರ ಘಟನೆ ಹರಿಯಾಣದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ಡಿವೋರ್ಸ್‌ ಸಿಕ್ಕ ಖುಷಿಗೆ ಭರ್ಜರಿ ಸಂಭ್ರಮಾಚರಣೆ ಮಾಡಿದ್ದಾನೆ. ಮಂಜೀತ್‌ ಎಂಬಾತ 2020 ನೇ ಇಸವಿಯಲ್ಲಿ ಕೋಮಲ್‌ ಎಂಬಾಕೆಯನ್ನು ಮದುವೆಯಾಗುತ್ತಾನೆ. ನಂತರದ ದಿನಗಳಲ್ಲಿ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲಾರಂಭಿಸಿದ್ದು, ಇದು ವಿಚ್ಛೇದನದಲ್ಲಿ ಕೊನೆಗೊಂಡಿತು. ಆಗಸ್ಟ್‌ 1, 2024 ರಂದು ಈತನಿಗೆ ಹೆಂಡ್ತಿಯಿಂದ ಮುಕ್ತಿ ಸಿಕ್ಕಿದ್ದು, ಇದೇ ಖುಷಿಯಲ್ಲಿ ಈತ ಇದೀಗ ಮಾಜಿ ಹೆಂಡ್ತಿಯ ಮ್ಯಾನಿಕ್ಯು ಜೊತೆ ಭರ್ಜರಿಯಾಗಿ ಡಿವೋರ್ಸ್‌ ಪಾರ್ಟಿ ಮಾಡಿದ್ದಾನೆ.

ಇದನ್ನೂ ಓದಿ: 287 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ; ಕೆಲವೇ ದಿನದಲ್ಲಿ ದುರಂತ ಸಾವು, ಆಗಿದ್ದೇನು?

ಈ ಕುರಿತ ವಿಡಿಯೋವನ್ನು m_s_dhakad_041 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಮಂಜೀತ್‌ ಹೆಣ್ಣು ಗೊಂಬೆಯ ಭುಜದ ಮೇಲೆ ಕೈ ಹಾಕಿ ನಿಂತಿರುವ ಹಾಗೂ ಅವರ ಹಿಂಬದಿಯಲ್ಲಿ ಡಿವೋರ್ಸ್‌ ಪಾರ್ಟಿ ಎಂದು ಬರೆದಿರುವ ಬ್ಯಾನರ್‌ ಒಂದನ್ನು ಅಳವಡಿಸಿರುವ ದೃಶ್ಯವನ್ನು ಕಾಣಬಹುದು. ಮಂಜೀತ್‌ ಫ್ರೆಂಡ್ಸ್‌ ಜೊತೆ ಸೇರಿ ಕೇಕ್‌ಗಳನ್ನು ಕಟ್‌ ಮಾಡಿ, ಹೂ ಮಾಲೆ ಹಾಕಿ ಮಸ್ತ್‌ ಆಗಿ ಡಿವೋರ್ಸ್‌ ಪಾರ್ಟಿ ಮಾಡಿದ್ದಾನೆ.

ನವೆಂಬರ್‌ 30 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಂಥಾ ಕಾಲ ಬಂತಪ್ಪಾ, ಈಗೆಲ್ಲಾ ಡಿವೋರ್ಸ್‌ ಸಿಕ್ರೂ ಕೂಡಾ ಪಾರ್ಟಿ ಮಾಡ್ತಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ನೋವಿನಿಂದ ಆದಷ್ಟು ಬೇಗ ನೀವು ಹೊರ ಬನ್ನಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಭಿನಂದನೆಗಳು ಸಹೋದರʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ