ಏಜ್ ಇಸ್ ಜಸ್ಟ್ ಎ ನಂಬರ್ : ಮೊಮ್ಮಗನ ಕಾರಿನ ಕೀ ಕೈಗೆ ಸಿಗುತ್ತಿದ್ದಂತೆ ಈ ಅಜ್ಜ ಮಾಡಿದ್ದೇನು ಗೊತ್ತಾ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳುನ್ನು ಕಂಡಾಗ ಅಚ್ಚರಿಯಾಗುತ್ತದೆ. ಹೌದು ಈ ಯುವಕ ಯುವತಿಯರು ಅಪಾಯಕಾರಿ ಸ್ಟಂಟ್ ಮಾಡುವುದನ್ನು ನೀವು ನೋಡಿರುತ್ತೀರಿ. ಆದರೆ ಈ ವೈರಲ್ ವಿಡಿಯೋದಲ್ಲಿ ಮೊಮ್ಮಗನು ಅಜ್ಜನ ಕೈಗೆ ಕಾರಿನ ಕೀ ಕೊಟ್ಟಿದ್ದಾನೆ. ತನ್ನ ಕೈಗೆ ಮೊಮ್ಮಗನ ಫೋರ್ಡ್ ಮಸ್ಟಾಂ ಗ್ ಕಾರಿನ ಕೀ ಸಿಗುತ್ತಿದ್ದಂತೆ ಈ ಅಜ್ಜ ಮಾಡಿದ್ದೇನು ಗೊತ್ತಾ? ಈ ಕುರಿತಾದ ಮಾಹಿತಿ ಇಲ್ಲಿದೆ.

ಏಜ್ ಇಸ್ ಜಸ್ಟ್ ಎ ನಂಬರ್ : ಮೊಮ್ಮಗನ ಕಾರಿನ ಕೀ ಕೈಗೆ ಸಿಗುತ್ತಿದ್ದಂತೆ ಈ ಅಜ್ಜ ಮಾಡಿದ್ದೇನು ಗೊತ್ತಾ?
ವೈರಲ್​​ ವಿಡಿಯೋ
Edited By:

Updated on: May 17, 2025 | 12:24 PM

ಏಜ್ ಇಸ್ ಎ ಜಸ್ಟ್ ನಂಬರಷ್ಟೇ, ದೇಹಕ್ಕಷ್ಟೇ ವಯಸ್ಸಾಗುವುದು ಹೊರತು ಮನಸ್ಸಿಗಲ್ಲ, ಜೀವನೋತ್ಸಾಹಕ್ಕಲ್ಲ ಎಂದು ವೃದ್ಧ (old man) ರನ್ನು ಕಂಡಾಗ ಹೇಳುವುದನ್ನು ನೋಡಬಹುದು. ಇಳಿ ವಯಸ್ಸಿನಲ್ಲಿಯೂ ಜೀವನೋತ್ಸಾಹದಿಂದ ನಮ್ಮೆಲ್ಲರ ಗಮನ ಸೆಳೆದಂತಹ ಅದೆಷ್ಟೋ ವೃದ್ಧರಿದ್ದಾರೆ. ಕೆಲ ವೃದ್ಧರೂ ಮಾಡುವ ಕಸರತ್ತು ನೋಡಿದಾಗ ಅಚ್ಚರಿಯಾಗುತ್ತದೆ. ಇದೀಗ ಹರಿಯಾಣದ ವೃದ್ದರಿಗೆ ಮೊಮ್ಮಗನು ತನ್ನ ಫೋರ್ಡ್ ಮಸ್ಟಾಂಗ್ (Ford Mustang) ಕಾರಿನ ಕೀ ಕೊಟ್ಟಿದ್ದು, ಅಜ್ಜ ಕಾರಿನೊಳಗೆ ಕುಳಿತು ಸಿನೀಮಿಯ ಶೈಲಿಯಲ್ಲಿ ಡ್ರಿಫ್ಟಿಂಗ್ (drifting) ಮಾಡಿದ್ದಾರೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಈ ಅಜ್ಜನ ಡ್ರಿಫ್ಟಿಂಗ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Dev chahal ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದ ಪ್ರಾರಂಭದಲ್ಲಿ ಮೊಮ್ಮಗನು ಕಾಲಿನ ಕೀಯನ್ನು ಅಜ್ಜನಿಗೆ ಕೊಡುವುದನ್ನು ನೋಡಬಹುದು. ಮೊಮ್ಮಗ ಇರುವಾಗ ಅಜ್ಜನಿಗೆ ಮೋಜು ಮಾಡಲು ಸಾಧ್ಯವಾಗದಿದ್ದರೆ ಹೇಗೆ? ಈ ಕೀಲಿಯನ್ನು ತೆಗೆದುಕೊಳ್ಳಿ. ಎಚ್ಚರಿಕೆಯಿಂದ ಕಾರು ಓಡಿಸಿ ಎಂದು ಹೇಳಿದ್ದಾನೆ. ಈ ವೇಳೆಯಲ್ಲಿ ಅಜ್ಜನ ಮುಖದಲ್ಲಿ ಖುಷಿಯನ್ನು ಕಾಣಬಹುದು. ಮೊಮ್ಮಗನ ಕಾರಿನ ಕೀ ಕೈಗೆ ಸಿಗುತ್ತಿದ್ದಂತೆ ಕಾರಿನೊಳಗೆ ಕುಳಿತು ಕಾರು ಸ್ಟಾರ್ಟ್ ಮಾಡಿ ಓಡಿಸಲು ಮುಂದಾಗಿದ್ದಾರೆ. ಆದರೆ ಈ ವೇಳೆಯಲ್ಲಿ ಡ್ರಿಫ್ಟ್‌ಗಳನ್ನು ಮಾಡಿದ್ದಾರೆ. ಅಜ್ಜನ ಸ್ಟಂಟ್ ನೋಡಿ ಮೊಮ್ಮಗನು ಶಾಕ್ ಆಗಿದ್ದಾನೆ.

ಇದನ್ನೂ ಓದಿ
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ಸ್ಟಂಟ್ ನೋಡಿದ ಮೊಮ್ಮಗನು, ಕಾರು ನಿಲ್ಲಿಸಿದ ಅಜ್ಜನ ಬಳಿ ನೀನು ಏನು ಮಾಡಿದೆ? ಕೇಳುವುದನ್ನು ನೋಡಬಹುದು. ಅದಕ್ಕೆ ಅದೇ ಜೋಶ್ ನಲ್ಲಿ ನಾವು ಟ್ರಾಕ್ಟರುಗಳನ್ನು ಓಡಿಸುತ್ತಿದ್ದಾಗ, ಮುಂಭಾಗದ ಚಕ್ರವನ್ನು ಗಾಳಿಯಲ್ಲಿ ಎತ್ತಿಕೊಂಡು ಅದೆಷ್ಟೋ ಕಿಲೋಮೀಟರ್ ಗಟ್ಟಲೆ ಓಡಿಸುತ್ತಿದ್ದೆವು ಎಂದು ನಗುತ್ತಲೇ ಉತ್ತರ ನೀಡಿದ್ದಾರೆ.

ಇದನ್ನೂ ಓದಿ : ಬ್ಯಾಲೆನ್ಸ್ ತಪ್ಪಿ ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ

ಈ ವಿಡಿಯೋವೊಂದು ಈಗಾಗಲೇ 5.7 ಮಿಲಿಯನ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಬಳಕೆದಾರರು ಈ ಇಳಿವಯಸ್ಸಿನಲ್ಲಿಯೂ ಅಜ್ಜನ ಎನರ್ಜಿಯನ್ನು ಹಾಡಿ ಹೊಗಳಿದ್ದಾರೆ. ಬಳಕೆದಾರರೊಬ್ಬರು, ‘ಅಜ್ಜ ರಾಕ್, ಮೊಮ್ಮಗ ಶಾಕ್’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಅಜ್ಜ ನಿಮ್ಮ ಸ್ಟಂಟ್ ಅತ್ಯದ್ಭುತವಾಗಿದೆ ವಾವ್’ ಎಂದಿದ್ದಾರೆ. ಮತ್ತೊಬ್ಬರು, ಈ ಅಜ್ಜನ ಸ್ಟಂಟ್ ಹಾಗೂ ಮಾತಿಗೆ ನಾನು ದೊಡ್ಡ ಅಭಿಮಾನಿಯಾಗಿ ಬಿಟ್ಟೆ ಎಂದು ಕಾಮೆಂಟ್ ಮಾಡಿರುವುದನ್ನು ನೋಡಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ