Unique Lemon: ಇಂತಹ ವಿಚಿತ್ರ ಗಾತ್ರದ ನಿಂಬೆಯನ್ನು ನೀವು ಎಂದಾದರೂ ನೋಡಿದ್ದೀರಾ?

|

Updated on: Jan 21, 2024 | 5:32 PM

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳನ್ನು ಪೋಸ್ಟ್ ಮಾಡಲಾಗುತ್ತದೆ. ಆದರೆ ಅದರಲ್ಲಿ ಕೆಲವು ವಿಡಿಯೋಗಳು ಮಾತ್ರ ಜನರ ಗಮನ ಸೆಳೆಯುತ್ತವೆ. ಅಂತಹ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ವಿಡಿಯೋದಲ್ಲಿ ಪಪ್ಪಾಯಿ ಹಣ್ಣಿನ ಗಾತ್ರದ ವಿಶಿಷ್ಟ ನಿಂಬೆಯನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

Unique Lemon: ಇಂತಹ ವಿಚಿತ್ರ  ಗಾತ್ರದ ನಿಂಬೆಯನ್ನು ನೀವು ಎಂದಾದರೂ ನೋಡಿದ್ದೀರಾ?
Unique Lemon
Image Credit source: instagram
Follow us on

ಮಾರುಕಟ್ಟೆಯಲ್ಲಿ ಸಿಗುವ ನಿಂಬೆ ಹಣ್ಣುಗಳು ಸಾಮಾನ್ಯವಾಗಿ ಗಾತ್ರದಲ್ಲಿ ಚಿಕ್ಕದಾಗಿ ದುಂಡಗಾಗಿರುತ್ತವೆ. ಕೆಲವೊಮ್ಮೆ ಅಪರೂಪದ ಸಮಯದಲ್ಲಿ ಕೆಲವು ನಿಂಬೆ ಹಣ್ಣುಗಳು ಮಧ್ಯಮ ಗಾತ್ರದಲ್ಲಿರುತ್ತವೆ. ಹೀಗೆ ಅಬ್ಬಬ್ಬಾ ಅಂದ್ರೇ ಒಂದು ನಿಂಬೆ ಹಣ್ಣು ಗರಿಷ್ಠ 100 ರಿಂದ 200 ಗ್ರಾಂ ತೂಕ ತೂಗಬಹುದು. ಆದರೆ ನೀವು ಎಂದಾದರೂ ಗಾತ್ರದಲ್ಲಿ ಪಪ್ಪಾಯಿ ಹಣ್ಣಿನಷ್ಟು ದೊಡ್ಡದಾಗಿರುವ ವಿಶಿಷ್ಟವಾದ ನಿಂಬೆ ಹಣ್ಣನ್ನು ನೋಡಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನು ಒಮ್ಮೆ ನೋಡಿ. ಈ ವಿಡಿಯೋ ಇದಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಗಾತ್ರದಲ್ಲಿ ದೊಡ್ಡದಷ್ಟೇ ಅಲ್ಲ, ಆಕಾರದಲ್ಲೂ ಬಹಳ ವಿಶಿಷ್ಟವಾಗಿರುವ ಈ ನಿಂಬೆ ಹಣ್ಣನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಈ ವಿಡಿಯೋವನ್ನು @maxiskitchen ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೋದಲ್ಲಿ ಮಹಿಳೆಯೊಬ್ಬರು ಆಕಾರದಲ್ಲಿ ದೊಡ್ಡದಷ್ಟೇ ಅಲ್ಲ, ಆಕಾರದಲ್ಲೂ ಬಹಳ ವಿಷ್ಟವಾಗಿರುವ ನಿಂಬೆ ಹಣ್ಣನ್ನು ಕತ್ತರಿಸುವಂತಹ ದೃಶ್ಯವನ್ನು ಕಾಣಬಹುದು.
ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಅವರ ಮನೆಯ ಹಿತ್ತಲಲ್ಲಿ ಬೆಳೆದಂತಹ ಗಜ ಗಾತ್ರದ ಹಾಗೂ ಆಕಾರದಲ್ಲಿ ಹಳದಿ ಬಣ್ಣದ ಕ್ಯಾಪ್ಸಿಕಂ ನಂತೆ ಕಾಣುವ ನಿಂಬೆ ಹಣ್ಣನ್ನು ಕತ್ತರಿಸುತ್ತಾರೆ. ಅದನ್ನು ಕತ್ತರಿಸಿದಾಗ ನಿಂಬೆಯ ಒಳ ಭಾಗವು ಬಹಳ ವಿಶಿಷ್ಟವಾಗಿರುವುದನ್ನು ಕಾಣಬಹುದು.

ಇದನ್ನೂ ಓದಿ: ಕಲ್ಲು ಗಾಳಿಯಲ್ಲಿ ತೇಲುತ್ತಿರುವಂತೆ ಕಾಣುತ್ತಿದೆಯೇ? ಆದರೆ ಹಾಗಿಲ್ಲ ಸರಿಯಾಗಿ ಗಮನಿಸಿ

ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 30.6 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 1.6 ಮಿಲಿಯನ್ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಈ ದೈತ್ಯ ನಿಂಬೆಯನ್ನು ನೋಡಿದಾಗ ನನಗೇಕೆ ಇಷ್ಟು ಆತಂಕವಾಗುತ್ತಿದೆʼ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದು ವೈರಲ್ ನಿಂಬೆʼ ಎಂದು ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಕಾಣಲು ದೆವ್ವದಂತಿದೆ, ಇದನ್ನು ತಿನ್ನಬಹುದೇʼ ಎಂದು ಕೇಳಿದ್ದಾರೆ. ಹೀಗೆ ಕೆಲವರು ಈ ವಿಶಿಷ್ಟ ಆಕಾರದ ನಿಂಬೆಯನ್ನು ನೋಡಿ ಇದು ತುಂಬಾ ಭಯಾನಕವಾಗಿದೆ ಅಂತ ಹೇಳಿದ್ರೆ ಇನ್ನೂ ಕೆಲವರು ವ್ಹಾವ್ ಈ ನಿಂಬೆ ತುಂಬಾ ಕಲಾತ್ಮಕವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ