Online Shopping : ಪ್ರತೀ ದಿನ ಲೆಕ್ಕವಿಲ್ಲದಷ್ಟು ಆನ್ಲೈನ್ ಶಾಪಿಂಗ್ನ ಅವಾಂತರಗಳು ನಡೆಯುತ್ತಿರುತ್ತವೆ. ಆರ್ಡರ್ ಮಾಡುವುದೊಂದು ತಲುಪುವುದೊಂದು. ಇದೀಗ ಅಮೇಝಾನ್ನಿಂದ ರೂ. 90,000 ಕ್ಯಾಮೆರಾ ಲೆನ್ಸ್ ಅನ್ನು ಆರ್ಡರ್ ಮಾಡಿದ ಒಬ್ಬರಿಗೆ ಲೆನ್ಸ್ ಬದಲಾಗಿ ಕಿನೋವಾ ಬೀಜಗಳು (ಹರಿವೆ ಸೊಪ್ಪಿನ ವರ್ಗಕ್ಕೆ ಸೇರಿದ ಬೀಜಗಳು) ತಲುಪಿವೆ. ಅರುಣಕುಮಾರ್ ಮೆಹೆರ್ ಎಂಬುವವರು ತಮ್ಮ ಅನುಭವವನ್ನು ಟ್ವೀಟ್ ಮಾಡಿದ್ದಾರೆ, ‘ಅಮೇಝಾನ್ನಿಂದ 90K INR ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದೆ. ಆದರೆ ಲೆನ್ಸ್ ಬಾಕ್ಸಿನೊಳಗೆ ಕಿನೋವಾ ಬೀಜಗಳ (Quinoa Seeds) ಪ್ಯಾಕೆಟ್ ಕಳುಹಿಸಲಾಗಿದೆ. ಅಮೇಝಾನ್ ಮತ್ತು ಎಪ್ಪಾರಿಯೋ ರೀಟೇಲ್ನ ದೊಡ್ಡ ಸ್ಕ್ಯಾಮ್ ಇದು.’
Ordered a 90K INR Camera lens from Amazon, they have sent a lens box with a packet of quinoa seeds inside instead of the lens. Big scam by @amazonIN and Appario Retail. The lens box was also opened. Solve it asap. pic.twitter.com/oED7DG18mn
ಇದನ್ನೂ ಓದಿ— Arun Kumar Meher (@arunkmeher) July 6, 2023
ಅರುಣಕುಮಾರ್ ಜು. 5ರಂದು ಅಮೇಝಾನ್ನಿಂದ ಸಿಗ್ಮಾ 24/70 F 2.8 ಲೆನ್ಸ್ ಆರ್ಡರ್ ಮಾಡಿದ್ದರು. ಆದ ಸಮಸ್ಯೆಯನ್ನು ಅವರು ಅಮೇಝಾನ್ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಅಮೇಝಾನ್ ಈ ಬಗ್ಗೆ ತನಿಖೆ ನಡೆಸುತ್ತಿದೆ ಪ್ರತಿಕ್ರಿಯಿಸಿದೆಯಾದರೂ, ಅರುಣಕುಮಾರ್, ಲೆನ್ಸ್ ಕಳುಹಿಸಿ ಇಲ್ಲವೆ ಹಣವನ್ನು ಮರುಪಾವತಿಸಿ ಎಂದು ಮರುಟ್ವೀಟ್ ಮಾಡಿದ್ದಾರೆ. ಜು.7ರಂದು ಮಾಡಿದ ಈ ಟ್ವೀಟ್ ಅನ್ನು 1.3 ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸುಮಾರು 300 ಜನರು ರೀಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Viral Video: ಹೀಲ್ಸ್ ಮತ್ತು ಸ್ಕರ್ಟ್ನಲ್ಲಿ ಡ್ಯಾನ್ಸ್ ಮಾಡಿದ ಪುರುಷ
ಅನೇಕರು ತಮ್ಮ ಇಂಥ ಅನುಭವಗಳನ್ನು ಈ ಟ್ವೀಟ್ನಡಿ ಹಂಚಿಕೊಂಡಿದ್ದಾರೆ. ಕೆಲವರು ಅಂಗಡಿಗೆ ಹೋಗಿ ಖರೀದಿಸುವುದು ಉತ್ತಮ ಎಂದಿದ್ದಾರೆ. ಕಳೆದ ವರ್ಷ ಸಿಗ್ಮಾ 150-600 ಲೆನ್ಸ್ ಆರ್ಡರ್ ಮಾಡಿದ್ದೆ, ನನಗೆ ಹೊಲಿಗೆ ಯಂತ್ರ ಕಳಿಸಿದ್ದರು ಎಂದಿದ್ದಾರೆ ಒಬ್ಬರು. ಇದೇನು ಹೊಸ ಸಮಸ್ಯೆಯಲ್ಲ, ನಾನು ಅನೇಕ ಬಾರಿ ಇದನ್ನು ಎದುರಿಸಿದ್ದೇನೆ. ಕೆಲವೊಮ್ಮೆ ಸಮಸ್ಯೆಗಳು ಪರಿಹಾರಗೊಂಡಿವೆ, ಇನ್ನೂ ಕೆಲವು ಹಾಗೇ ಇವೆ. ಆದ್ದರಿಂದ ಡೆಲಿವರಿ ಏಜೆಂಟರ್ ಮುಂದೆಯೇ ಬಾಕ್ಸ್ ತೆರೆದು ನಂತರ ಅದನ್ನು ತೆಗೆದುಕೊಳ್ಳುತ್ತೇನೆ ಎಂದಿದ್ಧಾರೆ ಇನ್ನೊಬ್ಬರು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 11:56 am, Mon, 17 July 23