ಮಗು ಮತ್ತು ತಾಯಿಯ ಬಾಂಧವ್ಯವನ್ನು ವಿವರಿಸಲು ಪದಗಳೇ ಸಾಲದು. ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳಲ್ಲೂ ತಾಯಿ ಮತ್ತು ಮಗುವಿನ ಬಾಂಧವ್ಯ ತುಂಬಾನೇ ವಿಶೇಷವಾಗಿರುತ್ತದೆ. ಈ ತಾಯಿ ಪ್ರೀತಿಯನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ. ತಾಯಿ ಮಗುವಿನ ನಡುವಿನ ನಿಷ್ಕಲ್ಮಶ ಪ್ರೀತಿ, ಬಾಂಧವ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಕಾಣ ಸಿಗುತ್ತಿರುತ್ತವೆ. ಇದೀಗ ಇಲ್ಲೊಂದು ಹೃದಯ ವಿದ್ರಾವಕ ಘಟನೆಯ ವಿಡಿಯೋವೊಂದು ವೈರಲ್ ಆಗಿದ್ದು, ತಾಯಿಯ ಮೃತ ದೇಹವನ್ನು ಬಿಗಿದಪ್ಪಿ ಕುಳಿತ ಮರಿ ಕೋತಿಯೊಂದು ಮೃತ ದೇಹವನ್ನು ಮಣ್ಣು ಮಾಡುವ ಸಂದರ್ಭದಲ್ಲಿ ಅಮ್ಮ ಜೊತೆ ನನ್ನನ್ನೂ ಮಣ್ಣು ಮಾಡಿ… ಅವಳನ್ನು ಬಿಟ್ಟು ಇರಲಾರೆ… ಎಂದು ರೋಧಿಸಿದೆ. ಈ ದೃಶ್ಯ ಎಂತಹ ಕಲ್ಲು ಮನಸ್ಸನ್ನು ಕೂಡಾ ಕರಗಿಸುವಂತಿದೆ.
ಮನುಷ್ಯರೇ ಆಗಿರಲಿ ಅಥವಾ ಪ್ರಾಣಿ ಪಕ್ಷಿಗಳೇ ಆಗಿರಲಿ ಹೆತ್ತಮ್ಮನನ್ನು ಕಳೆದುಕೊಳ್ಳಲು ಯಾರು ಇಷ್ಟ ಪಡುವುದಿಲ್ಲ. ಅಂತಹ ಸಂದರ್ಭ ಬಂದರೆ ನಿಂತ ನೆಲವೇ ಕುಸಿದಂತಾಗುತ್ತದೆ. ಅನಾಥ ಭಾವನೆ ಕಾಡುತ್ತದೆ. ಅದೇ ರೀತಿ ಇಲ್ಲೊಂದು ಕೋತಿ ಮರಿ ಕೂಡಾ ತಾಯಿಯನ್ನು ಕಳೆದುಕೊಂಡು ಅಮ್ಮನನ್ನು ಬಿಟ್ರೆ ನನಗ್ಯಾರು ಇಲ್ಲ ಅವಳ ಜೊತೆ ನನ್ನನ್ನು ಮಣ್ಣು ಮಾಡಿ ಎಂದು ತಾಯಿ ಕೋತಿಯ ಮೃತ ದೇಹವನ್ನು ಬಿಗಿದಪ್ಪಿ ರೋಧಿಸಿದೆ.
ಈ ವಿದ್ರಾವಕ ಘಟನೆಯ ವಿಡಿಯೋವನ್ನು bujjima.24 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ತಾಯಿಯ ಮೃತದೇಹವನ್ನು ಬಿಗಿದಪ್ಪಿ ಕೋತಿ ಮರಿಯೊಂದು ರೋಧಿಸುತ್ತಿರುವ ದೃಶ್ಯವನ್ನು ಕಾಣಬಹುದು. ಮೃತಪಟ್ಟ ತಾಯಿ ಕೋತಿಯನ್ನು ಮಣ್ಣು ಮಾಡುವಾಗ ಮೃತ ದೇಹವನ್ನು ಬಿಗಿದಪ್ಪಿ ಕುಳಿತ ಮರಿ ಕೋತಿ “ಅಮ್ಮ ಜೊತೆ ನನ್ನನ್ನೂ ಮಣ್ಣು ಮಾಡಿ… ಅವಳನ್ನು ಬಿಟ್ಟು ಇರಲಾರೆ” ಎಂದು ರೋಧಿಸಿದೆ.
ಇದನ್ನೂ ಓದಿ: ಅಯ್ಯಯ್ಯೋ…… ಲಿಪ್ ಲಾಕ್ ಮಾಡಲು ಹೋಗಿ ಪ್ರಿಯತಮೆಯ ಬಾಯಿಗೆ ವಾಂತಿ ಮಾಡಿದ ಯುವಕ
ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 9.3 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಅಯ್ಯೋ… ಈ ದೃಶ್ಯವನ್ನು ನೋಡಿ ನನ್ನ ಕಣ್ಣಂಚಲ್ಲಿ ನೀರು ಬಂತು’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ಈ ಭೂಮಿ ಮೇಲಿನ ಯಾವ ಜೀವಿಯೂ ತನ್ನ ತಾಯಿಯ ಅಗಲಿಕೆಯನ್ನು ಸಹಿಸಲಾರದು’ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಭಾವುಕರಾಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ