Viral Video: ರೈಲು ಹಳಿ ಮಧ್ಯೆ  ಸಿಲುಕಿಕೊಂಡ ಶ್ವಾನ, ರೈಲ್ವೆ ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆ ಹೇಗಿತ್ತು ನೋಡಿ? 

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 21, 2024 | 5:54 PM

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು  ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ದೃಶ್ಯಗಳು ಹಾಸ್ಯಮಯವಾಗಿದ್ದರೆ, ಕೆಲವು ವಿಡಿಯೋಗಳು ನಮ್ಮ ಹೃದಯ ಗೆಲ್ಲುತ್ತವೆ. ಸದ್ಯ ಅಂತಹದೊಂದು ವಿಡಿಯೋ ಹರಿದಾಡುತ್ತಿದ್ದು, ರೈಲು ಹಳಿಯ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದ ಶ್ವಾವನ್ನು ರೈಲ್ವೆ ಸಿಬ್ಬಂದಿಗಳು  ತಮ್ಮ ತ್ವರಿತ ಕಾರ್ಯಾಚರಣೆ ಮೂಲಕ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. 

Viral Video: ರೈಲು ಹಳಿ ಮಧ್ಯೆ  ಸಿಲುಕಿಕೊಂಡ ಶ್ವಾನ, ರೈಲ್ವೆ ಸಿಬ್ಬಂದಿಗಳ ರಕ್ಷಣಾ ಕಾರ್ಯಾಚರಣೆ ಹೇಗಿತ್ತು ನೋಡಿ? 
ವೈರಲ್​​ ವಿಡಿಯೋ
Follow us on

ರೈಲು ಹಳಿಗಳ ಮೇಲೆ ಚಲಿಸುವಾಗ ಅಥವಾ ರೈಲು ಹಳಿಯನ್ನು ದಾಟುವಾಗ ಎಷ್ಟು ಎಚ್ಚರ ವಹಿಸಿದರೂ ಕಮ್ಮಿಯೇ. ಹೀಗೆ ಬೇಜವ್ದಾರಿಯುತವಾಗಿ ರೈಲು ಹಳಿ ದಾಟಲು ಹೋಗಿ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದುಂಟು. ಹೌದು ಕೆಲವರು ವೇಗವಾಗಿ ರೈಲು ಬರುತ್ತಿರುವ ವೇಳೆ ಹಳಿ ದಾಟಲು ಹೋಗಿ ಪ್ರಾಣವನ್ನು ಕಳೆದುಕೊಂಡರೆ, ಇನ್ನೂ ಕೆಲವರು ತರಾತುರಿಯಲ್ಲಿ ಹಳಿ ದಾಟುವಾಗ, ದುರಾದೃಷ್ಟವಶಾತ್ ರೈಲು ಹಳಿಗಳ ಮಧ್ಯೆ  ಕಾಲು ಸಿಲುಕಿಕೊಂಡು ಅಪಾಯಕ್ಕೆ ಸಿಲುಕಿದ್ದುಂಟು. ಇದೀಗ ಅದೇ ರೀತಿಯ ಘಟನೆಯೊಂದು ನಡೆದಿದ್ದು, ಹಳಿ ದಾಟುವ ಸಂದರ್ಭದಲ್ಲಿ ಆಯ ತಪ್ಪಿ ಬೀದಿನಾಯಿಯ  ಕಾಲು ರೈಲು ಹಳಿಗಳ ನಡುವೆ ಸಿಕ್ಕಿ ಹಾಕಿಕೊಂಡಿದೆ. ರೈಲ್ವೆ ಸಿಬ್ಬಂದಿಗಳು ಆ ತಕ್ಷಣ ಧಾವಿಸಿ ಶ್ವಾನದ ಪ್ರಾಣ ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಬೀದಿ ನಾಯಿಯೊಂದು ರೈಲು ಹಳಿ ದಾಡುವ ವೇಳೆ ಅದರ ಕಾಲು ರೈಲು ಹಳಿಯ ನಡುವೆ ಸಿಕ್ಕಿಹಾಕಿಕೊಂಡಿದ್ದು, ಅದರಿಂದ ಬಿಡಿಸಿಕೊಳ್ಳಲು ಪರದಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. @NoContextHumans ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ಬೀದಿನಾಯಿಯೊಂದು  ರೈಲು ಹಳಿಯ ನಡುವೆ ಸಿಕ್ಕಿ ಹಾಕಿಕೊಂಡು ಅದರಿಂದ ಹೊರ ಬರಲು ಪರದಾಡುತ್ತಿರುವ ದೃಶ್ಯವನ್ನು ಕಾಣಬಹುದು. ಈ ದೃಶ್ಯವನ್ನು ಕಂಡ ರೈಲ್ವೆ ಸಿಬ್ಬಂದಿಗಳು ಆ ತಕ್ಷಣ ಧಾವಿಸಿ, ರೈಲು ಬರುವ ಮೊದಲು ಈ ಮುಗ್ಧ ಜೀವಿಯ ಪ್ರಾಣವನ್ನು ರಕ್ಷಣೆ ಮಾಡಬೇಕೆಂದು ಒಂದಷ್ಟು ರೈಲ್ವೆ ಸಿಬ್ಬಂದಿಗಳು ತಮ್ಮ ತ್ವರಿತ ಕಾರ್ಯಾಚರಣೆಯ ಮೂಲಕ ರೈಲು ಹಳಿಯ ನಡುವೆ ಸಿಕ್ಕಿ ಹಾಕಿಕೊಂಡ ಶ್ವಾನದ ಕಾಲನ್ನು ಬಿಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಆ ತಕ್ಷಣ ಆ ಶ್ವಾನವು ಬದುಕಿತು ಬಡ ಜೀವ ಎಂದು ಅಲ್ಲಿಂದ ಓಡಿ ಹೋಗುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪತ್ನಿಯ ಗೂಗಲ್ ಖಾತೆಯಲ್ಲಿದ್ದ ಸೀಕ್ರೆಟ್ ಫೋಟೋಗಳನ್ನು ಕಂಡು ಬೆಚ್ಚಿ ಬಿದ್ದ ಪತಿ; ಅಷ್ಟಕ್ಕೂ ಅದರಲ್ಲಿ ಏನಿತ್ತು?

ಮಾರ್ಚ್ 21 ರಂದು ಹಂಚಿಕೊಳ್ಳಲಾದ ಈ ವಿಡಿಯೋ 5.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಮೂಕ ಪ್ರಾಣಿಗಳ ನೋವಿಗೆ ಸ್ಪಂದಿಸಿದ ರೈಲ್ವೆ ಸಿಬ್ಬಂದಿಗಳಿಗೆ ಧನ್ಯವಾದಗಳುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಮಾನವೀಯತೆಯು ಇನ್ನೂ ಜೀವಂತವಾಗಿದೆʼ ಎಂದು  ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ದೃಶ್ಯ ತುಂಬಾನೇ ಹೃದಯ್ಪರ್ಶಿಯಾಗಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ರೈಲ್ವೆ ಸಿಬ್ಬಂದಿಗಳ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ