‘Hold My Chole Bhature’: ಲಿಫ್ಟ್ನಲ್ಲಿ ಸಿಲುಕಿಕೊಂಡರು ಚೋಲೆ ಭಟುರೆಯ ತಟ್ಟೆಗಳನ್ನು ಬಿಡದ ಪುರುಷರ ವಿಡಿಯೋ ವೈರಲ್!

ಗ್ರೇಟರ್ ನೋಯ್ಡಾದ ಎತ್ತರದ ಕಟ್ಟಡವೊಂದರಲ್ಲಿ ಕೆಲವು ಪುರುಷರ ಗುಂಪು, ಚೋಲೆ ಭಟುರೆ ಹಿಡಿದು ಲಿಫ್ಟ್ನಲ್ಲಿ ಸಿಕ್ಕಿಬಿದ್ದ ವೀಡಿಯೊ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿ ಮಾಡುವುದರ ಜೊತೆಗೆ ಎಲ್ಲರನ್ನೂ ನಗೆ ಕಡಲಿನಲ್ಲಿ ತೇಲಿಸಿದೆ. ಅಷ್ಟು ಭಯ, ಆತಂಕದ ನಡುವೆಯೂ ಚೋಲೆ ಭಟುರೆ ಮೇಲಿರುವ ಪ್ರೀತಿ ನೋಡಿ ಜನ ದಂಗಾಗಿದ್ದಾರೆ. ಏನಿದೆ ಈ ವಿಡಿಯೋದಲ್ಲಿ ನೀವೇ ನೋಡಿ.

'Hold My Chole Bhature': ಲಿಫ್ಟ್ನಲ್ಲಿ ಸಿಲುಕಿಕೊಂಡರು ಚೋಲೆ ಭಟುರೆಯ ತಟ್ಟೆಗಳನ್ನು ಬಿಡದ ಪುರುಷರ ವಿಡಿಯೋ ವೈರಲ್!
ಸಾಂದರ್ಭಿಕ ಚಿತ್ರImage Credit source: Pinterest
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Dec 17, 2023 | 5:23 PM

ನೀವು ಎಂದಾದರೂ ಬಟ್ಟಲಿನ ತುಂಬಾ ಚೋಲೆ ಭಟುರೆ ಹಾಕಿಕೊಂಡು  ಲಿಫ್ಟ್​​​ನಲ್ಲಿ ಹೋಗಿದ್ದೀರಾ?  ಆದರೆ ಇಲ್ಲೊಂದಿಷ್ಟು ಯುವಕರು ಅಂತಹ ಕೆಲಸ ಮಾಡಿದ್ದಾರೆ. ಗ್ರೇಟರ್ ನೋಯ್ಡಾದ ಎತ್ತರದ ಕಟ್ಟಡವೊಂದರಲ್ಲಿ ಕೆಲವು ಪುರುಷರ ಗುಂಪು, ಚೋಲೆ ಭಟುರೆ ಬಟ್ಟಲಿನಲ್ಲಿ ತೆಗೆದುಕೊಂಡು ಲಿಫ್ಟ್ ಏರಿದ್ದಲ್ಲದೆ ಅಲ್ಲಿಯೇ ಸಿಕ್ಕಿಬಿದ್ದ ವೀಡಿಯೊ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸುದ್ದಿ ಮಾಡುವುದರ ಜೊತೆಗೆ ಎಲ್ಲರನ್ನೂ ನಗೆ ಕಡಲಿನಲ್ಲಿ ತೇಲಿಸಿದೆ.

ಹಾಗಾದರೆ ಏನಿದೆ ಈ ವಿಡಿಯೋದಲ್ಲಿ ಅಂತೀರಾ? ಗ್ರೇಟರ್ ನೋಯ್ಡಾದ ಮಹಡಿಯೊಂದರ ಲಿಫ್ಟ್ನಲ್ಲಿ ಮೂವರು ವ್ಯಕ್ತಿಗಳು ಸಿಲುಕಿಕೊಂಡಿದ್ದು, ಚೋಲೆ ಭಟುರೆಯ ಬಟ್ಟಲು ಹಿಡಿದಿರುವುದನ್ನು ನೀವು ಕಾಣಬಹುದಾಗಿದೆ. ಇದರಲ್ಲಿ ನಿಜವಾದ ಟ್ವಿಸ್ಟ್ ಏನೆಂದರೆ 30 ನಿಮಿಷಗಳ ಕಾಲ ಲಾಕ್ ಆಗಿದ್ದ ಅವರನ್ನು ಲಿಫ್ಟ್ ನಿಂದ ಹೊರಗೆ ತರುವಾಗ ಅಲ್ಲಿ ಕಾಯುತ್ತಿದ್ದ ಯುವಕರ ಬಳಿ “ಮೇರೆ ಭಟುರೆ ಪಕ್ಡೋ (ನನ್ನ ಭಟುರೆ ಇರುವ ತಟ್ಟೆಯನ್ನು ಹಿಡಿದುಕೊಳ್ಳಿ)” ಎಂದು ಹೇಳುವುದನ್ನು ನೀವು ನೋಡಬಹುದಾಗಿದೆ. ಹೊರಗೆ ಆತಂಕದಿಂದ ಕಾಯುತ್ತಿದ್ದ ಎಲ್ಲರಿಗೂ ಆ ಮಾತು ಕೇಳಿ ನಗು ಬಂದಿದೆ. ಅಷ್ಟು ಭಯ, ಆತಂಕದ ನಡುವೆಯೂ ಚೋಲೆ ಭಟುರೆ ಮೇಲಿರುವ ಪ್ರೀತಿ ನೋಡಿ ಜನ ದಂಗಾಗಿದ್ದಾರೆ.

ಲಿಫ್ಟ್ ಒಳಗಿನ ತುರ್ತು ಬಟನ್ ವಿಫಲಗೊಂಡಿದ್ದು ಆ ಯುವಕರು ಸಹಾಯಕ್ಕಾಗಿ ತಮ್ಮ ನೆರೆಹೊರೆಯವರಿಗೆ ಕರೆ ಮಾಡಿದ್ದಾರೆ. ಬಳಿಕ ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಸಂಬಂಧಪಟ್ಟ ನೆರೆಹೊರೆಯವರು ಅಲ್ಲಿ ಸಿಕ್ಕಿಬಿದ್ದ ವ್ಯಕ್ತಿಗಳಿಗೆ ಸಹಾಯ ಮಾಡಲು ಕೈ ಜೋಡಿಸಿದ್ದು. ಲಿಫ್ಟ್ ನಿಂದ ಹೊರ ಬರಬೇಕು ಎನ್ನುವಾಗ ಮೊದಲು, ತಮ್ಮ ಚೋಲೆ ಭಟುರೆ ಇರುವ ತಟ್ಟೆಗಳನ್ನು ಹಿಡಿದುಕೊಳ್ಳಲು ಹೇಳಿದ್ದು ಅವರ ತಮಾಷೆಯ ಮಾತು ಎಲ್ಲರ ಗಮನವನ್ನು ಸೆಳೆಯಿತು. ಈ ಮೂವರು ವ್ಯಕ್ತಿಗಳು ಹೇಳುವ ಪ್ರಕಾರ ಇವರು ತಮ್ಮ “ಚೋಲೆ ಭಟುರೆ ಹಿಡಿದು ಲಿಫ್ಟ್ಗೆ ಪ್ರವೇಶಿಸಿದ್ದು ಅದು ಇದ್ದಕ್ಕಿದ್ದಂತೆ ನಿಂತಿತು” ಎಂದಿದ್ದಾರೆ.

ಇದನ್ನೂ ಓದಿ: ಕರ್ಮ ಯಾರನ್ನೂ ಬಿಡಲ್ಲ: ಲಿಫ್ಟ್ ಒಳಗಡೆ ಮೂತ್ರ ವಿಸರ್ಜನೆ ಮಾಡಿದ ಬಾಲಕನ ಗತಿ ಏನಾಯ್ತು ನೋಡಿ?

ಸುಮಾರು ಒಂದು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಹಲವಾರು ಜನ ಇಷ್ಟಪಟ್ಟಿದ್ದಾರೆ. ಕೆಲವರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನು ಕೆಲವರು “ಜಾನ್ ಜಾಯೆ ಪರ್ ಚೋಲೆ ಭಟುರೆ ನಾ ಜಾಯೆ” (ಜೀವ ಬೇಕಿದ್ದರೆ ಹೋಗಲಿ ಆದರೆ ಚೋಲೆ ಭಟುರೆ ಬೇಕು) ಎಂದು ಹೇಳಿದ್ದಾರೆ. ಮತ್ತೆ ಕೆಲವರು ಅವರ ಆಹಾರ ಪ್ರೀತಿಗೆ ಮನಸೋತಿದ್ದಾರೆ. ಇನ್ನು ಹಲವರು ಅವರ ಉದ್ಧಟತನಕ್ಕೆ ಚೀಮಾರಿ ಹಾಕಿದ್ದಾರೆ. ಏನೇ ಇರಲಿ ಈ ವಿಡಿಯೋ ಮಾತ್ರ ಸಿಕ್ಕಾ ಪಟ್ಟೆ ವೈರೆಲ್ ಆಗಿದ್ದು ಜನರಿಗೆ ಖುಷಿ ಕೊಟ್ಟಿದ್ದಂತೂ ಸುಳ್ಳಲ್ಲ.

ಮತ್ತಷ್ಟು ವೈರಲ್​​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ದೇಗುಲದಲ್ಲಿ ಭಕ್ತನಂತೆ ಕೈ ಮುಗಿದು ಕುಳಿತು ಆಂಜನೇಯನ ಕಿರೀಟವನ್ನೇ ಕದ್ದ ಕಳ್ಳ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ಹೊಸವರ್ಷದ ಆಗಮನಕ್ಕಾಗಿ ಎಲ್ಲೆಡೆ ಶುರುವಾಗಿದೆ ಕ್ಷಣಗಣನೆ
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ರಜತ್​ಗೆ ರಿವರ್ಸ್​, ಧನರಾಜ್​-ಹನುಮಂತುಗೆ ಫಾಸ್ಟ್ ಫಾರ್ವರ್ಡ್
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷ ಬರಮಾಡಿಕೊಂಡ ಆಕ್ಲೆಂಡ್ ಜನರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಮೈಸೂರು ಅರಮನೆಯ ವಿದ್ಯುದ್ದೀಪ ಅಲಂಕಾರ ಇನ್ನೂ ಚೆಂದ: ರೈತರು
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಈ ವರ್ಷದ ಕೊನೆಯ ಸೂರ್ಯಾಸ್ತ: ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಮನಮೋಹಕ ದೃಶ್ಯ
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!
ಸಂಘದ ಸದಸ್ಯನಾಗಲು ಕುಡುಕನಾಗಿರುವುದು ಬೇಸಿಕ್ ಅರ್ಹತೆ ಮತ್ತು ಅನಿವಾರ್ಯತೆ!