Video: ಬಣ್ಣ ಎರಚಿದ್ದಕ್ಕೆ 4 ವರ್ಷದ ಮೊಮ್ಮಗನ ಮೇಲೆ ಬಿಸಿನೀರು ಸುರಿದ ಅಜ್ಜಿ: ವಿಲವಿಲನೆ ಒದ್ದಾಡಿದ ಬಾಲಕ

ನಾಗ್ಪುರದಲ್ಲಿ ನಡೆದ ಅಮಾನವೀಯ ಘಟನೆ ಇದು. ಹೋಳಿ ಆಡುವಾಗ ಬಣ್ಣ ಚೆಲ್ಲಿದನೆಂದು ಅಜ್ಜಿ ತನ್ನ 4 ವರ್ಷದ ಮೊಮ್ಮಗನ ಮೇಲೆ ಕುದಿಯುವ ಬಿಸಿನೀರನ್ನು ಸುರಿದಿದ್ದಾರೆ. ಬಾಲಕನಿಗೆ ಶೇ.45ರಷ್ಟು ಸುಟ್ಟಗಾಯಗಳಾಗಿ ಸ್ಥಿತಿ ಚಿಂತಾಜನಕವಾಗಿದೆ. ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಅಜ್ಜಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Video: ಬಣ್ಣ ಎರಚಿದ್ದಕ್ಕೆ 4 ವರ್ಷದ ಮೊಮ್ಮಗನ ಮೇಲೆ ಬಿಸಿನೀರು ಸುರಿದ ಅಜ್ಜಿ: ವಿಲವಿಲನೆ ಒದ್ದಾಡಿದ ಬಾಲಕ
ವೈರಲ್​​ ವಿಡಿಯೋ

Updated on: Mar 05, 2026 | 10:56 AM

ಮುಂಬೈ, ಮಾ.5: ಪುಟ್ಟ ಮಕ್ಕಳಿಗೆ ಅಜ್ಜಿ ಅಂದ್ರೆ ಪಂಚ ಪ್ರಾಣ, ಅಜ್ಜಿಗೂ ಅಷ್ಟೇ ಮೊಮ್ಮಕ್ಕಳು ತುಂಬಾ ಪ್ರೀತಿ, ಆದರೆ ಇಲ್ಲೊಂದು ಘಟನೆ ಅದಕ್ಕೆ ವಿರುದ್ಧವಾಗಿದೆ. ನೆನ್ನೆ ದೇಶದ ಎಲ್ಲ ಕಡೆ ಬಣ್ಣಗಳ ಹಬ್ಬ ತುಂಬಾ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ ಹಾಗೂ ಇದನ್ನು ಅತ್ಯಂತ ತಮಾಷೆಯಾಗಿ ಆಡುತ್ತಾರೆ. ಅದರಲ್ಲೂ ಈ ಹಬ್ಬವನ್ನು ಮಕ್ಕಳು ತುಂಬಾ ಖುಷಿಯಿಂದ ಆಚರಣೆ ಮಾಡಿದ್ದಾರೆ. ಆದರೆ ಈ ಬಣ್ಣದ ಹಬ್ಬ ಈ ಪುಟ್ಟ ಬಾಲಕನಿಗೆ ಕರಾಳ ದಿನವಾಗಿದೆ. ತಮಾಷೆಯಾಗಿ ತನ್ನ ಮೇಲೆ ಬಣ್ಣ ಎರಚಿದ್ದ ಎಂದು ಅಜ್ಜಿ ತನ್ನ ಮೊಮ್ಮಗನ ಮೇಲೆ ಬಿಸಿ ಬಿಸಿ ನೀರನ್ನು ಸುರಿದು ವಿಕೃತಿ ಮೆರೆದಿದ್ದಾರೆ. ಈ ಭೀಕರ ಘಟನೆಯು ನಾಗ್ಪುರ ಜಿಲ್ಲೆಯ ಕೋರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾರ್ಚ್ 3 ರಂದು ಓಂ ಹರೀಶ್ ವಂಗೆ ಎಂಬ ಬಾಲಕ ತನ್ನ ಮನೆಯ ಹೊರಗೆ ಬಣ್ಣದ ಸ್ಪ್ರೇ ಬಾಟಲಿಯೊಂದಿಗೆ ಆಟವಾಡುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ಅಜ್ಜಿ ಸಿಂಧು ಠಾಕ್ರೆ ಅವರ ಮೇಲೆ ಬಣ್ಣದ ನೀರು ಬಿದ್ದಿದೆ. ಇದರಿಂದ ಕೆರಳಿದ ಅಜ್ಜಿ, ಬಕೆಟ್‌ನಲ್ಲಿ ತುಂಬಿದ್ದ ಕುದಿಯುವ ಬಿಸಿನೀರನ್ನು ಮೊಮ್ಮಗನ ಮೇಲೆ ಸುರಿದಿದ್ದಾರೆ. 4 ವರ್ಷದ ಬಾಲಕ ಓಂ ಹರೀಶ್ ವಂಗೆ ಬಿಸಿ ನೀರಿನ ಉರಿಯಲ್ಲಿ ಒದ್ದಾಡಿದ್ದಾನೆ. ಇದೀಗ ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಈ ಕೃತ್ಯದ ವಿಡಿಯೋ ಸಿಸಿಟಿವಿಯಲ್ಲಿ ಸೇರಿಯಾಗಿದೆ.

ಇದನ್ನೂ ಓದಿ: ಇರಾನ್​​​​ ಹೊತ್ತಿ ಉರಿಯಲು ಈ ಹುಡುಗಿಯೇ ಕಾರಣ: 2024ರ ಈ ವಿಡಿಯೋ ನೆನಪಿದ್ಯಾ?

ಇಲ್ಲಿದೆ ನೋಡಿ ವಿಡಿಯೋ:

ಬಿಸಿನೀರು ಸುರಿದ ರಭಸಕ್ಕೆ ಮಗುವಿನ ಸೊಂಟದ ಕೆಳಭಾಗದ ಚರ್ಮ ಸಂಪೂರ್ಣವಾಗಿ ಸುಟ್ಟುಹೋಗಿದೆ. ಸುಮಾರು ಶೇ. 45ರಷ್ಟು ಸುಟ್ಟ ಗಾಯಗಳಾಗಿರುವ ಬಾಲಕನನ್ನು ನಾಗ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಈ ವಿಡಿಯೋ ಮಗು ನೋವಿನಿಂದ ಕಿರುಚುತ್ತಾ ಓಡುತ್ತಿರುವ ದೃಶ್ಯ ಎಂತಹವರನ್ನೂ ಕಣ್ಣೀರು ಹಾಕಿಸುವಂತಿದೆ. ಘಟನೆಗೆ ಸಂಬಂಧಿಸಿದಂತೆ ಕೋರಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಜ್ಜಿ ಸಿಂಧು ಠಾಕ್ರೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಹಬ್ಬದ ದಿನವೇ ಅಜ್ಜಿಯ ಇಂತಹ ಅಮಾನವೀಯ ವರ್ತನೆ ಕಂಡ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us