Viral Video : ಈ ಹಕ್ಕಿ ಜೇನುಗೂಡಿನಲ್ಲಿರುವ ತುಪ್ಪವನ್ನು ತಿನ್ನಲು ಹೋಗಿದೆ. ವೈರಲ್ ಆಗುತ್ತಿರುವ ಈ ವಿಡಿಯೋ ಅನ್ನು ರೆಗ್ ಸ್ಯಾಡ್ಲರ್ ಎಂಬ ಖಾತೆದಾರರು ಟ್ವೀಟ್ ಮಾಡಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ಹೀಗೆ ಹಕ್ಕಿಯೂ ಜೇನುಗೂಡಿನ ಮೇಲೆ ದಾಳಿ ಮಾಡಬಹುದೆಂಬ ಅಂದಾಜೇ ಇರಲಿಲ್ಲ ಎಂದು ನೆಟ್ಟಿಗರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಪಕ್ಷಿಗಳ ಆಹಾರ ಎಲ್ಲರಿಗೂ ಗೊತ್ತಿರುವಂಥದ್ದೇ.
I’ve never heard of a Honey-buzzard before. I had no idea they attack honey bees’ nests for food.??
–
? Credit : Rahul’s Wildscape/YT pic.twitter.com/b6DJclenkQ ಇದನ್ನೂ ಓದಿ— Reg Saddler (@zaibatsu) November 30, 2022
ನೂರಾರು ಜೇನುನೊಣಗಳು ಹನಿ ಬಝರ್ಡ್ ಎನ್ನುವ ಈ ಹಕ್ಕಿಯ ಸುತ್ತಲೂ ಹಾರಾಡುತ್ತಿದ್ದರೂ ಕಚ್ಚಲು ಪ್ರಯತ್ನಿಸುತ್ತಿದ್ದರೂ ಹಕ್ಕಿ ಮಾತ್ರ ಜೇನು ತಿನ್ನುವ ಧ್ಯಾನದಲ್ಲಿ ಮುಳುಗಿದೆ. ರಾಯಲ್ ಸೊಸೈಟಿ ಫಾರ್ ದಿ ಪ್ರೊಟೆಕ್ಷನ್ ಆಫ್ ಬರ್ಡ್ಸ್ ಪ್ರಕಾರ, ಈ ಹನಿ ಬಝಾರ್ಡ್ ಪಕ್ಷಿಯು ಬೇಟೆಯಾಡುವ ದೊಡ್ಡ ಗಾತ್ರದ ಹಕ್ಕಿ. ಅಗಲವಾದ ರೆಕ್ಕೆಗಳನ್ನು ಮತ್ತು ಉದ್ದವಾದ ಬಾಲವನ್ನು ಬಲಿಷ್ಠ ಕಾಲುಗಳನ್ನು ಇದು ಹೊಂದಿರುತ್ತದೆ. ಜೇನುಗೂಡು ಮತ್ತು ಕಣಜಗಳ ಗೂಡುಗಲ ಮೇಲೆ ಇದು ದಾಳಿ ಮಾಡುತ್ತದೆ.
ಈ ವಿಡಿಯೋ ನೋಡಿದ ನೆಟ್ಟಿಗರು, ಮೊದಲ ಸಲ ಪಕ್ಷಿಯೊಂದು ಹೀಗೆ ಜೇನು ತಿನ್ನುತ್ತಿರುವುದನ್ನು ನೋಡುತ್ತಿದ್ದೇನೆ ಎಂದಿದ್ದಾರೆ. ಹಕ್ಕಿ ಕೂಡ ಜೇನು ತಿನ್ನುತ್ತಿದೆಯೇ? ಹಾಗಿದ್ದರೆ ಇದರ ಊಟ ಜೇನುತುಪ್ಪವೇ ಇಡೀ ದಿನ ಎಂದಿದ್ದಾರೆ ಮತ್ತೊಬ್ಬರು. ಇದು ವಲಸೆ ಹಕ್ಕಿ, ಬೇಸಿಗೆಯಲ್ಲಿ ಸೈಬೀರಿಯಾ ಜಪಾನ್ಗೆ ಸಂತಾನೋತ್ಪತ್ತಿಗಾಗಿ ಹಾರಿ ಹೋಗುತ್ತದೆ ಎಂದಿದ್ದಾರೆ ಮಗದೊಬ್ಬರು. ನೋಡಲು ಬಹಳ ಕ್ರೂರ ಅನ್ನಿಸುತ್ತದೆ, ಆದರೆ ಪ್ರಕೃತಿಯ ಭಾಗವೇ ಅಲ್ಲವೆ ಇದೂ ಕೂಡ ಎಂದಿದ್ದಾರೆ ಇನ್ನೂ ಒಬ್ಬರು.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:15 pm, Fri, 2 December 22