
Viral Video : ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮಿಳುನಾಡಿನಲ್ಲಿ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗಾಗ ವನ್ಯಜೀವಿಗಳ ಕುರಿತು ಟ್ವೀಟ್ ಮಾಡುತ್ತಿರುತ್ತಾರೆ. ಈ ಸಲ ಅವರು ಟ್ವೀಟ್ ಮಾಡಿದ ಈ ವಿಡಿಯೋದಲ್ಲಿ ಹಾರ್ನ್ಬಿಲ್ಗಳು ಆಕಾಶದಲ್ಲಿ ಆಕ್ರಮಣಕಾರಿಯಾಗಿ ದಾಳಿಯಲ್ಲಿ ತೊಡಗಿಕೊಂಡಿವೆ.
ಪ್ರತೀ ವರ್ಷವೂ ತಮಿಳುನಾಡಿನ ನೆಲ್ಲಿಯಂಪತಿ ಮತ್ತು ವಾಲ್ಪಾರೈನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೂರಾರು ಹಾರ್ನ್ಬಿಲ್ಗಳು ವಲಸೆಗೆ ಬರುತ್ತವೆ. ನೀಲಾಕಾಶದ ಹಿನ್ನೆಲೆಯಲ್ಲಿ ಹೀಗೆ ಅವು ರೆಕ್ಕೆ ಬಿಚ್ಚಿ ಹಾರುವುದನ್ನು ನೋಡುವುದೇ ಅದ್ಭುತ ಅನುಭವ. ಬಹುವರ್ಣಗಳಲ್ಲಿ ವಿನ್ಯಾಸಗೊಂಡಿರುವ ಅವುಗಳ ಗರಿಗಳಂತೂ ನಯನ ಮನೋಹರ. ಆದರೆ ಈ ವಿಡಿಯೋದಲ್ಲಿ ಮಾತ್ರ ಈ ಚೆಂದುಳ್ಳಿಗಳು ಯಾಕೋ ಎಂತೋ ಅಂತೂ ಕಾದಾಟಕ್ಕಿಳಿದಿವೆ. ಕೊಕ್ಕಿಗೆ ಕೊಕ್ಕು ಕೊಟ್ಟಿ ದಾಳಿ ಮಾಡಿವೆ. ಈತನಕ ಈ ವಿಡಿಯೋ ಅನ್ನು 47,200 ಜನರು ನೋಡಿದ್ದಾರೆ. ಸಾವಿರಕ್ಕು ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ಹಿಮನೀರಿನಲ್ಲಿ ಮಿಂದೆದ್ದು ಕಾಫಿ ಕುಡಿಯುತ್ತಿರುವ ಯುವತಿಯ ವಿಡಿಯೋ ವೈರಲ್
ನೆಲ್ಲಿಯಂಪತಿ ಕೇರಳದಲ್ಲಿದೆ ಎಂದಿದ್ದಾರೆ ಕೆಲವರು. ಕೇರಳ ಮತ್ತು ತಮಿಳುನಾಡಿನ ಗಡಿಯಲ್ಲಿದೆ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಆಕ್ರಮಣಶೀಲತೆಗಿಂತ ಇದು ಕಲಾತ್ಮಕವಾಗಿ ಕಾಣುತ್ತಿದೆ. ಆಕಾಶದಲ್ಲಿ ಇವೆರಡೂ ನರ್ತಿಸುವಂತೆ ತೋರುತ್ತಿದೆ ಎಂದಿದ್ದಾರೆ ಹಲವರು. ಬಹಳ ಅದ್ಭುತವಾಗಿದೆ ಈ ದೃಶ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಕಾದಾಟವೋ ಕಲೆಯೋ ಎರಡಕ್ಕೂ ಲಯವಂತೂ ಬೇಕೇಬೇಕು. ಅದಿಲ್ಲಿ ಸಾಧಿಸಿದೆ.
ಈ ವಿಡಿಯೋ ನೋಡಿದ ನೀವೇನನ್ನುತ್ತೀರಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:55 am, Tue, 3 January 23