Viral Video: ಇದನ್ನು ಆಸ್ಕರ್​ಗೆ ಕಳಿಸಬೇಕಿತ್ತು! ನೆಟ್ಟಿಗರ ಒಕ್ಕೊರಲಿನ ದನಿ

Pre Wedding Shoot: ಹಿತ್ತಲಿನಲ್ಲಿ ಹಾವು ಬಂದಿದೆ. ಗಾಬರಿಗೊಂಡ ಈಕೆ ಹಾವು ಹಿಡಿಯುವವರಿಗೆ ಫೋನ್ ಮಾಡುತ್ತಾಳೆ. ಹಾವು ಹಿಡಿದವನ ಸಾಹಸಕ್ಕೆ ಮರುಳಾಗುತ್ತಾಳೆ. ಮುಂದೇನಾಗುತ್ತದೆ? ಈ ಟ್ವೀಟ್​ ಥ್ರೆಡ್​ ನೋಡಿ.

Viral Video: ಇದನ್ನು ಆಸ್ಕರ್​ಗೆ ಕಳಿಸಬೇಕಿತ್ತು! ನೆಟ್ಟಿಗರ ಒಕ್ಕೊರಲಿನ ದನಿ
Pre Wedding Photoshoot: ಹಾವು ಹಿಡಿಯುತ್ತಿರುವ ಹುಡುಗ ಗಮನಿಸುತ್ತಿರುವ ಹುಡುಗಿ
Edited By:

Updated on: Jun 02, 2023 | 4:59 PM

Marriage : ಹುಟ್ಟಿದ ಮೇಲೆ ಜೊತೆಯಾಗಿ ಬದುಕಲು ಒಂದು ಜೀವವಂತೂ ಬೇಕು ಎನ್ನುವುದು ಅಲಿಖಿತ. ಯಾರ್ಯಾರು ಯಾವ ಕಾರಣಕ್ಕಾಗಿ ತಮ್ಮ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವುದು ಅವರ ಖಾಸಗೀ ವಿಷಯ. ಆದರೆ ಯಾವ ಸಂದರ್ಭಗಳು ಇವರನ್ನು ಪರಸ್ಪರ ಸೆಳೆಯುತ್ತವೆ ಎನ್ನುವುದು ಮಾತ್ರ ಕುತೂಹಲಕರ. ಇದೀಗ ವೈರಲ್ ಆಗಿರುವ ಈ ಟ್ವೀಟ್​ ನೋಡಿ. ಹಾವು ಇವರ ಪ್ರೇಮಕ್ಕೆ, ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಲಿದೆ ಎಂಬರ್ಥದಲ್ಲಿ ಈ ಜೋಡಿಯ ಪ್ರೀ ವೆಡ್ಡಿಂಗ್​ ಶೂಟ್ (Pre Wedding Shoot) ನಡೆದಿದೆ. ಕಿರುಚಿತ್ರದ ಮಾದರಿಯಲ್ಲಿ ಇದರ ಪರಿಕಲ್ಪನೆ ಸಾಗಿದೆ.

ಈ ಟ್ವೀಟ್​ನ ಥ್ರೆಡ್​ನಲ್ಲಿರುವ ಫೋಟೋಗಳನ್ನು ಒಂದೊಂದಾಗಿ ನೋಡಿದಿರಲ್ಲವೆ? ಹಿತ್ತಲಿನಲ್ಲಿ ಹಾವು ಬಂದಿದೆ. ಗಾಬರಿಗೊಂಡ ಈಕೆ ಹಾವು ಹಿಡಿಯುವವರಿಗೆ (Snake Catcher) ಫೋನ್ ಮಾಡುತ್ತಾಳೆ. ಬೈಕ್​ನಲ್ಲಿ ಹಾವು ಹಿಡಿಯುವವರು ಈಕೆಯ ಮನೆಗೆ ಧಾವಿಸುತ್ತಾರೆ. ಅದರಲ್ಲಿ ಒಬ್ಬ ದೊಡ್ಡ ನಾಗರಹಾವನ್ನು ಹಿಡಿಯುತ್ತಾನೆ.  ಅವನ ಧೈರ್ಯ ಸಾಹಸ ಈಕೆಯನ್ನು ಸೆಳೆಯುತ್ತದೆ, ಕ್ರಮೇಣ ಪರಸ್ಪರರಲ್ಲಿ ಆಕರ್ಷಣೆ ಉಂಟಾಗುತ್ತದೆ. ಬೈಕ್​ನಲ್ಲಿ ಹೋಗುವ ಮೊದಲು ಆಕೆಯತ್ತ ಕೈಬೀಸಿದ ಅವ ಫೋನ್ ಮಾಡು ಎಂದು ಸನ್ನೆ ಮಾಡುತ್ತಾನೆ. ಹೀಗೆ ಅವರ ಪ್ರೇಮಕಥೆ ಶುರುವಾಗುತ್ತದೆ. ಕೊನೆಯಲ್ಲಿ ಇಬ್ಬರೂ ಕೈಕೈಹಿಡಿದುಕೊಂಡು ಸಂಗಾತಿಗಳಾಗಲು ನಿರ್ಧರಿಸುತ್ತಾರೆ.   ಹಾವು ಅವರನ್ನು ಹಿಂಬಾಲಿಸುತ್ತದೆ!?

ಇದನ್ನೂ ಓದಿ : Viral Video: ನಿವೃತ್ತಿಯಾಯಿತೆಂದು ನಿನ್ನನ್ನು ತೊರೆಯುವುದು ಅಷ್ಟು ಸುಲಭವೇ?

ಮೇ 27 ರಂದು ಹಂಚಿಕೊಂಡ ಈ ಟ್ವೀಟ್​ ಥ್ರೆಡ್​ ಅನ್ನು ಈತನಕ ಸುಮಾರು 5.6 ಲಕ್ಷ ಜನರು ನೋಡಿದ್ದಾರೆ. ನೆಟ್ಟಿಗರು ಬಗೆಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಇದನ್ನು ಆಸ್ಕರ್​ನ ಶಾರ್ಟ್​ ಮೂವಿ ವಿಭಾಗಕ್ಕೆ ಕಳಿಸಬೇಕಿತ್ತು ಎಂದು ತಮಾಷೆ ಮಾಡಿದ್ದಾರೆ ಒಬ್ಬರು. ಅನೇಕರು ಇದಕ್ಕೆ ಬೆಂಬಲಿಸಿದ್ದಾರೆ. ಟ್ವಿಟರ್​ನಲ್ಲಿ ನಾನೀವತ್ತು ನೋಡಿದ ಅತ್ಯಂತ ಒಳ್ಳೆಯ ವಿಷಯ ಎಂದು ಇನ್ನೊಬ್ಬರು ಹೇಳಿದ್ದಾರೆ. ಎಂಥಾ ಪ್ರೇಮಕಥೆ ಇದು ನಾನಂತೂ ಬಿದ್ದು ಬಿದ್ದು ನಗುತ್ತಿದ್ದೇನೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 4:55 pm, Fri, 2 June 23