ಸಿಲ್ಕಿ ಹೇರ್​ ಸಿಂಹಪ್ಪ ವೈರಲ್ ಆದನು ನೋಡಪ್ಪ

Lion : ಈ ಸಿಂಹ ಇರುವುದು ಹೀಗೇನಾ ಅಥವಾ ಯಾವುದಾದರೂ ವಿಶೇಷ ಸಂದರ್ಭಕ್ಕೆ ಹೇರ್​ ಸ್ಪಾ ಮಾಡಿಸಿಕೊಂಡಿದೆಯೋ? ನೆಟ್ಟಿಗರಲ್ಲಿ ಭಾರೀ ಚರ್ಚೆ. ಫೋಟೋ ಶೂಟ್​ ನಡೀತಿದೆಯೋ ಎಂಬಂತೆ ಪೋಸ್​ ಕೊಡುತ್ತಿರುವುದು ನೋಡಿ.

ಸಿಲ್ಕಿ ಹೇರ್​ ಸಿಂಹಪ್ಪ ವೈರಲ್ ಆದನು ನೋಡಪ್ಪ
ಸಿಲ್ಕಿ ಹೇರ್ ಸಿಂಹಪ್ಪ
Updated By: ಶ್ರೀದೇವಿ ಕಳಸದ

Updated on: Dec 30, 2022 | 1:01 PM

Viral Video : ಮಾರಾಯ್ರೆ ನೀವು ಯಾವ ಶಾಂಪೂ ಹಾಕಿ ಸ್ನಾನ ಮಾಡಿದಿರಿ, ಕಂಡೀಷನರ್ ಯಾವುದು, ಸ್ಮೂದನಿಂಗ್ ಮಾಡಿಸಿದಿರಾ, ಸ್ಟ್ರೇಟನಿಂಗ್ ಮಾಡಿಸಿದಿರಾ, ಯಾವ ಸ್ಪಾಗೆ ಹೋಗಿದ್ದಿರಿ? ಇಂಥ ಹುಕಿ ನಿಮಗೆ ಏಕೆ ಬಂತು, ಮಾಡೆಲಿಂಗ್ ಹೋಗ್ತಿದೀರಾ? ಶೂಟಿಂಗ್ ಹೋಗ್ತಿದೀರಾ? ಇನ್ನು ಮೇಕಪ್​ ಯಾವಾಗ? ಹೀಗೆ ನೆಟ್ಟಿಗರು ಈ ಸಿಂಹಪ್ಪನಿಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಲೇ ಇದ್ಧಾರೆ. ಇದೆಲ್ಲವೂ ಈ ಸಿಂಹಪ್ಪನಿಗೆ ಕೇಳುತ್ತಿದೆಯೇ? ಕೇಳಲಾರದು. ಏಕೆಂದರೆ ಇವನು ಇರುವುದು ಪೂರ್ವ ಆಫ್ರಿಕಾದ ಕೀನ್ಯಾದ ಮಸಾಯ್​ನ ಮಾರಾದಲ್ಲಿ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೆಟ್ಟಿಗರು ಈ ವಿಡಿಯೋ ಅನ್ನು ಮತ್ತೆ ಮತ್ತೆ ನೋಡಿ ರಂಜಿಸುತ್ತಿದ್ದಾರೆ. ಈತನಕ ಇದನ್ನು 9.9 ಮಿಲಿಯನ್ ಜನರು ನೋಡಿದ್ದಾರೆ. 78,000 ಜನರು ಇಷ್ಟಪಟ್ಟಿದ್ದಾರೆ. 11,100 ಜನರು ರೀಟ್ವೀಟ್ ಮಾಡಿದ್ದಾರೆ. ನೂರಾರು ಜನ ಪ್ರತಿಕ್ರಿಯಿಸಿದ್ಧಾರೆ. ಇವನು ಅದೆಷ್ಟು ಸುಂದರವಾಗಿ ಕಾಣುತ್ತಾನೆ ಚೆನ್ನಾಗಿ ಸ್ನಾನ ಮಾಡಿಸಿದಲ್ಲಿ ಎಂದು ಒಬ್ಬರು ಹೇಳಿದ್ದಾರೆ. ಕಾಡಿನಲ್ಲಿರುವ ಎಲ್ಲಾ ಸಿಂಹಗಳಿಗೂ ಹೀಗೇ ಸ್ನಾನ ಮಾಡಿಸಿದರೆ ಹೇಗಿರಬೇಡ! ಎಂದಿದ್ದಾರೆ ಮತ್ತೊಬ್ಬರು. ಅಗಾಧ ಸೌಂದರ್ಯವನ್ನು ಇವನು ಹೊಂದಿದ್ದಾನೆ ಎಂದಿದ್ದಾರೆ ಮಗದೊಬ್ಬರು. ಈ ಸಿಂಹ ಇರುವುದೇ ಹೀಗೆ? ಅಥವಾ ಯಾವುದೋ ವಿಶೇಷ ದಿನಕ್ಕಾಗಿ ಇವನಿಗೆ ಹೇರ್ ಸ್ಪಾ ಮಾಡಲಾಗಿದೆಯೆ ಎಂದು ಕೇಳಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:52 pm, Fri, 30 December 22