Viral Video : ಬೆಂಗಳೂರಿನ FreshHot ನಲ್ಲಿ ಇಡ್ಲಿ ವೆಂಡಿಂಗ್ ಮಶೀನ್ ಚಾಲನೆಗೊಂಡ ಬಗ್ಗೆ ಇತ್ತೀಚೆಗೆ ಓದಿದ್ದೀರಿ. ಎಟಿಎಂ ನಂತೆ ಬೆಂಗಳೂರಿಗರು 24 ತಾಸೂ ಬಿಸಿಬಿಸಿಯಾದ ಇಡ್ಲಿಯನ್ನು ಈ ಮಶೀನ್ ಮೂಲಕ ಈಗಾಗಲೇ ಪಡೆದು ಸವಿಯುತ್ತಿದ್ದಾರೆ ಎನ್ನುವುದನ್ನು ಆನ್ಲೈನ್ ಮೂಲಕ ಗಮನಿಸಿದ ಉದ್ಯಮಿ ಆನಂದ ಮಹೀಂದ್ರಾ, ‘ಬಹಳಷ್ಟು ಜನ ರೋಬೋಟ್ ಅಥವಾ ವೆಂಡಿಂಗ್ ಮಶೀನ್ ಮೂಲಕ ತಿಂಡಿತಿನಿಸು ತಯಾರಿಸುವ ಪ್ರಯತ್ನವನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ಇವೆಲ್ಲವೂ FSSAI ಮಾನದಂಡಗಳನ್ನು ಅನುಸರಿಸಿದರೂ ತಾಜಾತನ ಕಾಯ್ದುಕೊಳ್ಳುವಲ್ಲಿ ಸಮರ್ಪಕವಾಗಿವೆಯೇ? ಬೆಂಗಳೂರಿನ ಸ್ನೇಹಿತರೇ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ, ಮಾಲ್ಗಳಲ್ಲಿ ಇಡ್ಲಿ ವೆಂಡಿಂಗ್ ಮಶೀನ್ ಸ್ಥಾಪನೆಗೊಂಡರೆ ಇದು ಸಾಂಸ್ಕೃತಿಕ ಕೊಡುಕೊಳ್ಳುವಿಕೆಗೆ ಮುಖ್ಯ ಕಾರಣವಾಗಬಹುದಲ್ಲವೆ? ಆದಷ್ಟು ಬೇಗ ಇದನ್ನು ಆ ಸ್ಥಳಗಳಲ್ಲಿ ನೋಡಲು ಇಚ್ಛಿಸುತ್ತೇನೆ’ ಎಂದಿದ್ದಾರೆ.
So many have attempted to create robotic food prep/vending machines. Presume this meets FSSAI standards & the ingredients are refreshed adequately? How is the taste, Bengaluru folks? I’d love to see this pop up in airports/malls globally. Will be a major ‘cultural’ export! pic.twitter.com/C8SjR6HwPK
ಇದನ್ನೂ ಓದಿ— anand mahindra (@anandmahindra) October 16, 2022
ಮೊಬೈಲ್ನಲ್ಲಿ ಮೆನು ಸೆಲೆಕ್ಟ್ ಮಾಡಿಕೊಂಡು, ಆನ್ಲೈನ್ ಹಣ ಪಾವತಿಸಿ, QR ಕೋಡ್ ಮೂಲಕ ಒಂದು ನಿಮಿಷದೊಳಗೆ ಮಶೀನ್ ಮೂಲಕ ಬಿಸಿಬಿಸಿ ಇಡ್ಲಿ ಅಥವಾ ಇನ್ನಿತರೇ ತಿಂಡಿತಿನಿಸುಗಳನ್ನು ಪಡೆಯಬಹುದಾಗಿದೆ. ಆರ್ಡರ್ ಮಾಡಿದ ನಂತರ ತಿಂಡಿ ತಯಾರಾಗುವ ಹಂತವನ್ನೂ ಸ್ಕ್ರೀನ್ ಮೇಲೆ ನೋಡಬಹುದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನರು ಈ ವಿಡಿಯೋ ಹಂಚಿಕೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಇಡ್ಲಿ ವೆಂಡಿಂಗ್ ಮಶೀನ್; ಬೆಂಗಳೂರಿಗರಿಗೆ ಇನ್ನು ‘ಆಲ್ ಟೈಮ್ ಇಡ್ಲಿ’ ಲಭ್ಯ, ವಿಡಿಯೋ ವೈರಲ್
ನೆಟ್ಟಿಗರೊಬ್ಬರು, ‘ಸಾಂಸ್ಕೃತಿಕವಾಗಿ ಅಷ್ಟೇ ಅಲ್ಲ, ವಾಣಿಜ್ಯದ ದೃಷ್ಟಿಕೋನದಿಂದಲೂ ಜಾಗತಿಕವಾಗಿ ವಿಸ್ತರಿಸಲು ಇದು ಒಳ್ಳೆಯ ಉಪಾಯವಾಗಿದೆ. ಸಸ್ಯಾಹಾರಿಗಳಿಗೆ ಇದೊಂದು ವರದಾನವಾಗುತ್ತದೆ.’ ಎಂದಿದ್ದಾರೆ. ‘ಯಂತ್ರದ ಮೂಲಕ ಇಡ್ಲಿ ಎನ್ನುವುದು ಮೂರ್ಖತನದ ಪರಮಾವಧಿ. ಯಾರಾದರೂ ಖುದ್ದಾಗಿ ಊಟ, ತಿಂಡಿ ಬಡಿಸಿದರೆ ಮಾತ್ರ ಅದರ ನಿಜವಾದ ರುಚಿ, ತೃಪ್ತಿ ಅನುಭವಕ್ಕೆ ಬರುತ್ತದೆ ಮತ್ತು ಆರೋಗ್ಯವೂ ಚೆನ್ನಾಗಿರುತ್ತದೆ.’ ಎಂದಿದ್ದಾರೆ ಮತ್ತೊಬ್ಬರು.
ನಿಮಗೇನು ಅನ್ನಿಸುತ್ತದೆ ಈ ವಿಷಯವಾಗಿ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:46 am, Tue, 18 October 22