ಇಲ್ಲಿರುವ ‘8’ರ ನಡುವೆ ಅದೆಷ್ಟು ‘9’ ಅಡಗಿವೆ?; ವಿವೇಕ ಬಿಂದ್ರಾ ಕೇಳುತ್ತಿದ್ದಾರೆ

| Updated By: ಶ್ರೀದೇವಿ ಕಳಸದ

Updated on: Oct 20, 2022 | 4:25 PM

Brain Teaser : ನಿಮ್ಮ ಗೆಳತಿಯ ಮೂಡ್​ ಸರಿ ಇಲ್ಲವೆ? ಗೆಳೆಯ ಕೋಪಿಸಿಕೊಂಡಿದ್ದಾನೆಯೆ? ಮಕ್ಕಳು ಹಟ ಮಾಡುತ್ತಿವೆಯೇ? ಅಜ್ಜಿ ಬೇಸರಿಕೊಂಡಿದ್ದಾರೆಯೆ? ಹಾಗಿದ್ದರೆ ಈ ಬ್ರೇನ್​ ಟೀಸರ್​ ತೋರಿಸಿ 10 ಸೆಕೆಂಡುಗಳಲ್ಲಿ ಉತ್ತರ ಕಂಡುಹಿಡಿಯಲು ಹೇಳಿ.

ಇಲ್ಲಿರುವ ‘8’ರ ನಡುವೆ ಅದೆಷ್ಟು ‘9’ ಅಡಗಿವೆ?; ವಿವೇಕ ಬಿಂದ್ರಾ ಕೇಳುತ್ತಿದ್ದಾರೆ
How many ‘9‘s can you find in this brain teaser
Follow us on

Trending : ಮೋಟಿವೇಷನಲ್​ ಸ್ಪೀಕರ್​ ವಿವೇಕ ಬಿಂದ್ರಾ ನೆಟ್ಟಿಗರಿಗೆ ಸವಾಲನ್ನು ಒಡ್ಡಿದ್ದಾರೆ. ತಮ್ಮ ಟ್ವಿಟರ್​ ಖಾತೆಯಲ್ಲಿ ಈ ಬ್ರೇನ್​ ಟೀಸರ್​ ಅನ್ನು ಪೋಸ್ಟ್ ಮಾಡಿದ ಅವರು, ಇಲ್ಲಿರುವ ‘8’ಗಳಲ್ಲಿ ಎಷ್ಟು ‘9’ ಅಡಗಿವೆ ಎಂದು ಕೇಳಿದ್ದಾರೆ. ಇಷ್ಟೊಂದು ಎಂಟುಗಳ ನಡುವೆ ಅಲ್ಲೆಲ್ಲೋ ಅಡಗಿರುವ ಒಂಬತ್ತನ್ನು ಹುಡುಕುವುದು ಕಷ್ಟವೆ? ಅಂತೂ ಸಾಕಷ್ಟು ಜನ ಕಮೆಂಟ್ ಮಾಡಿ ಉತ್ತರಿಸಿದ್ದಾರೆ. ಈ ಪೋಸ್ಟ್ ಹಂಚಿಕೊಂಡಾಗಿನಿಂದ ಈತನಕ 3,5000ಕ್ಕೂ ಹೆಚ್ಚು ಜನರು ಇದನ್ನು ಇಷ್ಟಪಟ್ಟಿದ್ದಾರೆ. 400ಕ್ಕೂ ಹೆಚ್ಚು ಜನ ಉತ್ತರಿಸಿದ್ದಾರೆ ಮತ್ತು 350ಕ್ಕೂ ಹೆಚ್ಚು ಜನರು ರೀಟ್ವೀಟ್ ಮಾಡಿದ್ದಾರೆ.

ಹತ್ತು ಸೆಕೆಂಡುಗಳಲ್ಲಿ ಮೂರು 9 ಗಳನ್ನು ಗುರುತಿಸಲು ಸಾಧ್ಯವಾಯಿತು ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ನನಗೆ 9 ಕಾಣಿಸುತ್ತಲೇ ಇಲ್ಲ. ಹಾಗಿದ್ದರೆ ನಾನು ಕಣ್ಣಿನ ಪರೀಕ್ಷೆ ಮಾಡಬೇಕೆ? ಎಂದು ತಮಾಷೆ ಮಾಡಿದ್ದಾರೆ ಮತ್ತೊಬ್ಬರು. ಇನ್ನೊಬ್ಬರು ನನಗೆ ನಾಲ್ಕು 9 ಕಂಡವು ಎಂದಿದ್ದಾರೆ.

ಕೆಲಸ ಮಾಡಿ ತಲೆ ಭಾರವಾದಾಗ, ಯೋಚಿಸಿ ಯೋಚಿಸಿ ಮನಸ್ಸು ಪಾತಾಳಕ್ಕಿಳಿದಾಗ ಮತ್ತು ನಿಮ್ಮ ಮನೆಯ ಮಕ್ಕಳು ಬಹಳ ಕಿರಿಕಿರಿ ಮಾಡುತ್ತಿದ್ದಾಗ, ಮನೆಯ ಹಿರಿಯರು ಬೇಸರದಲ್ಲಿದ್ದಾಗ, ನಿಮ್ಮ ಪ್ರೇಮಿ ಮುನಿಸಿಕೊಂಡಿದ್ದಾಗ ಇಂಥ ಬ್ರೇನ್​ ಟೀಸರ್​ಗಳನ್ನು ತೋರಿಸಿ. ನೋಡಿ ತತ್​ಕ್ಷಣವೇ ಅವರ ಮೂಡ್​ ಹೇಗೆ ಶಿಫ್ಟ್​ ಆಗುತ್ತದೆ ಎಂದು.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:22 pm, Thu, 20 October 22