ಕ್ರಿಮಿಯಾ ರಷ್ಯಾ ಸಂಪರ್ಕ ಸೇತುವೆಯ ಮೇಲೆ ಭಾರೀ ಸ್ಫೋಟ

| Updated By: ಶ್ರೀದೇವಿ ಕಳಸದ

Updated on: Oct 08, 2022 | 3:11 PM

Russia : ಇಂದು ಬೆಳಗ್ಗೆ ಕ್ರಿಮಿಯಾ ಮತ್ತು ರಷ್ಯಾ ನಡುವಿನ ಏಕೈಕ ಸೇತುವೆ ಕಾರ್ ಬಾಂಬ್​ ಸ್ಫೋಟಕ್ಕೆ ಒಳಗಾಗಿದ್ದು, ರೈಲಿನಲ್ಲಿ ಸಾಗಿಸುತ್ತಿದ್ದ ಏಳು ತೈಲ ಟ್ಯಾಂಕರ್​ಗಳು ಬೆಂಕಿಗೆ ಆಹುತಿಯಾಗಿವೆ.

ಕ್ರಿಮಿಯಾ ರಷ್ಯಾ ಸಂಪರ್ಕ ಸೇತುವೆಯ ಮೇಲೆ ಭಾರೀ ಸ್ಫೋಟ
Huge Explosion On Only Bridge Linking Crimea To Russia
Follow us on

Viral Video : ರಷ್ಯಾ ಮತ್ತು ಕ್ರಿಮಿಯಾ ಸಂಪರ್ಕ ಸೇತುವೆಯ ಮೇಲೆ ಇಂದು ಬೆಳಗ್ಗೆ 6.07 ಗಂಟೆಗೆ ಕಾರ್ ಬಾಂಬ್ ಸ್ಫೋಟಗೊಂಡ ಪರಿಣಾಮ ರೈಲಿನಲ್ಲಿ ಸಾಗಿಸುತ್ತಿದ್ದ ಏಳು ತೈಲ ಟ್ಯಾಂಕರ್‌ಗಳು ಬೆಂಕಿ ಹೊತ್ತಿ ಉರಿದಿವೆ. ಇದರಿಂದ ಸೇತುವೆಯು ಭಾರೀ ಪ್ರಮಾಣದ ಹಾನಿಗೆ ಒಳಗಾಗಿದೆ. ಈ ಕುಕೃತ್ಯದ  ಕುರಿತು ರಷ್ಯಾ ತಮಿಖಾ ಸಮಿತಿಯು ತನಿಖೆ ಆರಂಭಿಸಿದೆ. ರಷ್ಯಾದ ಸುದ್ದಿ ಸಂಸ್ಥೆಗಳು ಈ ರಾಷ್ಟ್ರೀಯ ವಿರೋಧಿ ಚಟುವಟಿಕೆಯ ಕುರಿತು ವರದಿ ಮಾಡಿವೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ತಮನ್ ದ್ವೀಪಕ್ಕೆ ಹತ್ತಿರದಲ್ಲಿರುವ ಕ್ರಿಮಿಯನ್ ಸೇತುವೆಯ ಬಳಿ ಟ್ರಕ್ ಮೂಲಕ ಬಾಂಬ್ ಸ್ಫೋಟಿಸಲಾಗಿದೆ. ಈ ಪರಿಣಾಮವಾಗಿ ಏಳು ತೈಲ ಟ್ಯಾಂಕರ್​ಗಳು ಬೆಂಕಿಗೆ ಆಹುತಿಯಾಗಿವೆ. ಎರಡು ಲೇನ್‌ಗಳು ಭಾಗಶಃ ಕುಸಿದಿವೆ. 2018 ರಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉದ್ಘಾಟಿಸಿದ್ದ ಈ ಸೇತುವೆ ಇದೀಗ ಸಮುದ್ರದೊಳಗೆ ಭಾಗಶಃ ಕುಸಿದು ಬಿದ್ದಿದೆ. ಸಾಮಾಜಿಕ ಮಾಧ್ಯಮದಲ್ಲಿ ಈ ದೃಶ್ಯದ ವಿಡಿಯೋ ವೈರಲ್ ಆಗುತ್ತಿದೆ.

ರಷ್ಯಾದ ತನಿಖಾ ಸಮಿತಿಯು ಘಟನಾ ಸ್ಥಳಕ್ಕೆ ತನಿಖಾಧಿಕಾರಿಗಳನ್ನು ಕಳುಹಿಸಲಾಗಿದೆ. ಈ ದುರ್ಘಟನೆಗೆ ಕಾರಣ ಮತ್ತು ಇದರಲ್ಲಿ ಭಾಗಿಯಾಗಿರುವ ಅಪರಾಧಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತನಿಖಾಧಿಕಾರಿಗಳು ನಿರತರಾಗಿದ್ದಾರೆ.

2014ರಲ್ಲಿ ಉಕ್ರೇನಿನಿಂದ ಪ್ರಸ್ತುತ ಸೇತುವೆಯನ್ನು ಪುಟಿನ್ ರಷ್ಯಾದ ಸ್ವಾಧೀನಕ್ಕೆ ಒಳಪಡಿಸಿದ್ದರು.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ