Viral Video : ಸುಮ್ಮನೆ ಕುಳಿತಿರುತ್ತೀರಿ. ಇದ್ದಕ್ಕಿದ್ದ ಹಾಗೆ ನಿಮ್ಮ ಬಳಿ ಹಲ್ಲಿಯೋ, ಜೇಡವೋ, ಜಿರಳೆಯೋ ಕಾಣಿಸಿಕೊಂಡರೆ ನಿಮಗೇನೆನ್ನಿಸುತ್ತದೆ? ಕಿರಿಕಿರಿ ಅಥವಾ ಭಯದಿಂದ ಮಾರುದ್ದ ದೂರ ಸರಿಯುತ್ತೀರಿ ತಾನೆ? ಅದೇ ಹಾವು ಕಾಣಿಸಿಕೊಂಡರೆ ಓಡಿಯೇ ಬಿಡುತ್ತೀರಿ. ದೊಡ್ಡ ಗಾತ್ರದ ಹೆಬ್ಬಾವು ಕಂಡರಂತೂ… ಹೇಳುವುದೇ ಬೇಡ. ಇದೀಗ ಉತ್ತರ ಪ್ರದೇಶದ ಲಕ್ನೋದಲ್ಲಿರುವ ಶಾಲಾ ಬಸ್ಸಿನಲ್ಲಿ ಹೆಬ್ಬಾವೊಂದು ನುಸುಳಿದ ವಿಡಿಯೋ ವೈರಲ್ ಆಗಿದೆ. ವಿಡಿಯೋ ನೋಡಿಯೇ ಆತಂಕವಾಗುತ್ತಿದೆ ಇನ್ನು…
उत्तर प्रदेश के #रायबरेली में #स्कूल की एक बस के इंजन में #अजगर फंसा था।
ಇದನ್ನೂ ಓದಿकड़ी मशक़्क़त के बाद #वन विभाग की टीम ने निकाला बाहर।#UttarPradesh #Raebareli #snake #snakes #BOA2022 #India pic.twitter.com/nuKslyOXT4
— Gurmeet Singh, IIS ?? (@Gurmeet_Singhhh) October 16, 2022
‘ಭಾನುವಾರದಂದು ರಾಯಬರೇಲಿಯ ರಯಾನ್ ಇಂಟರ್ನ್ಯಾಷನಲ್ ಸ್ಕೂಲ್ ಬಸ್ಸಿನಲ್ಲಿ ನಡೆದ ಘಟನೆಯಾಗಿದೆ. ಬಸ್ಸಿನಲ್ಲಿ ಈ ಹೆಬ್ಬಾವು ಕಾಣಿಸಿಕೊಂಡಾಗ ಸಹಜವಾಗಿ ಆತಂಕವಾಗಿದೆ. ಅರಣ್ಯ ಇಲಾಖೆಯ ರಕ್ಷಣಾ ತಂಡಕ್ಕೆ ಸುದ್ದಿ ಮುಟ್ಟಿಸಿದ ನಂತರ ಸುಮಾರು ಒಂದು ತಾಸಿನತನಕ ಕಾರ್ಯಾಚರಣೆ ನಡೆಸಲಾಗಿದೆ. ಅರಣ್ಯ ಸಿಬ್ಬಂದಿ ಹೆಬ್ಬಾವನ್ನು ಸುರಕ್ಷಿತವಾಗಿ ಕಾಡಿಗೆ ತಲುಪಿಸಿದೆ. ಯಾವುದೇ ರೀತಿಯ ಅವಘಡ ಸಂಭವಿಸಿಲ್ಲ’ ಎಂದಿದ್ದಾರೆ ಸಿಟಿ ಮ್ಯಾಜಿಸ್ಟ್ರೇಟ್ ಪಲ್ಲವಿ ಮಿಶ್ರಾ.
ಸದ್ಯ ಭಾನುವಾರವಾದ್ದರಿಂದ ಶಾಲೆಗೆ ರಜೆ. ಮಕ್ಕಳು ಬಸ್ಸಿನಲ್ಲಿದ್ದಾಗ ಇದು ಕಾಣಿಸಿಕೊಂಡಿದ್ದರೆ ಏನು ಗತಿ ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ. ಎಂಥಾ ದೊಡ್ಡ ಹಾವು ಇದು, ಎಷ್ಟು ಕಷ್ಟಪಟ್ಟಿರಬೇಕು ಅರಣ್ಯ ಸಿಬ್ಬಂದಿ ಇದನ್ನು ಹಿಡಿಯಲು ಎಂದಿದ್ದಾರೆ ಕೆಲವರು.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:32 am, Mon, 17 October 22