‘ಹ್ಯೂಗೋ ಬಾಸ್​’ನ ಬಚ್ಚಲುಮನೆಯ ಚಪ್ಪಲಿಗೆ ರೂ. 9,000; ‘ಡಿಮಾರ್ಟ್​’ನಲ್ಲಿ ರೂ. 90ಗೆ ಲಭ್ಯ ಎನ್ನುತ್ತಿರುವ ನೆಟ್ಟಿಗರು

Costly Chappals : ಬಚ್ಚಲುಮನೆಗೆ ಉಪಯೋಗಿಸುವ ಈ ಹವಾಯಿ ಚಪ್ಪಲಿಗಳ ಬೆಲೆ ನೋಡಿ ನೆಟ್ಟಿಗರು ಹೌಹಾರಿದ್ದಾರೆ ಜೊತೆಗೆ ಈ ಹವಾಯಿ ಚಪ್ಪಲಿ ಎಂಬಿಎ ಓದೋಕೆ ಅಮೆರಿಕಕ್ಕೆ ಹೋಗಿತ್ತಾ? ಎಂದು ತಮಾಷೆಯನ್ನೂ ಮಾಡಿದ್ದಾರೆ.

‘ಹ್ಯೂಗೋ ಬಾಸ್​’ನ ಬಚ್ಚಲುಮನೆಯ ಚಪ್ಪಲಿಗೆ ರೂ. 9,000; ‘ಡಿಮಾರ್ಟ್​’ನಲ್ಲಿ ರೂ. 90ಗೆ ಲಭ್ಯ ಎನ್ನುತ್ತಿರುವ ನೆಟ್ಟಿಗರು
Hugo Boss Sells Bathroom Chappals For A Whopping Rs 9,000
Updated By: ಶ್ರೀದೇವಿ ಕಳಸದ

Updated on: Oct 18, 2022 | 6:21 PM

Trending : ಊರಿಗೆ ಹೋಗುತ್ತಿದ್ಧಾಗ ಮಾತ್ರ ನಾವು ಚಪ್ಪಲಿ ಧರಿಸುತ್ತಿದ್ದೆವು. ಒಂದೇ ಜೋಡು ಚಪ್ಪಲಿಯನ್ನು ಎಲ್ಲರೂ ಅನಿವಾರ್ಯ ಇದ್ದಾಗ ಹಾಕಿಕೊಳ್ಳುತ್ತಿದ್ದರು. ಹೀಗೆ ನಿಮ್ಮ ಅಜ್ಜ ಅಜ್ಜಿ ಹೇಳಿರುವುದನ್ನು ಕೇಳಿರುತ್ತೀರಿ. ಕ್ರಮೇಣ ಒಂದೇ ಜೊತೆ ಚಪ್ಪಲಿಯನ್ನು ಹತ್ತು ವರ್ಷ ಹಾಕಿಕೊಂಡೆವು ಎನ್ನುವುದನ್ನು ನಿಮ್ಮ ತಂದೆತಾಯಿ ಹೇಳುವುದನ್ನು ಕೇಳಿರುತ್ತೀರಿ. ನನ್ನ ಬಳಿ ಬರೀ ನಾಲ್ಕು ಜೊತೆ ಚಪ್ಪಲಿ ಮಾತ್ರ ಇದೆ ಎಂದು ನಿಮ್ಮ ಮಕ್ಕಳು ಹೇಳುವುದನ್ನು ಆಗಾಗ ಕೇಳಿಸಿಕೊಳ್ಳುತ್ತೀರಿ. ಇನ್ನು ನಿಮ್ಮ ಬಗ್ಗೆ ನಿಮಗೇ ಗೊತ್ತಿರುತ್ತದೆ. ಇದೀಗ ವೈರಲ್ ಆಗುತ್ತಿರುವ ಈ ಪೋಸ್ಟ್​ನಲ್ಲಿ ಹ್ಯೂಗೋ ಬಾಸ್​ (Hugo Boss) ಕಂಪೆನಿಯ ಬಾತ್ರೂಂ ಚಪ್ಪಲಿಯ ಬೆಲೆ 9,000ಕ್ಕೆ ಒಂದೇ ರೂಪಾಯಿ ಕಡಿಮೆ!

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ನೆಟ್ಟಿಗರಂತೂ ನಾನಾ ನಮೂನೆಯಲ್ಲಿ ಪ್ರತಿಕ್ರಿಯಿಸಿ ನಗುತ್ತಿದ್ದಾರೆ. ಸಾಕಷ್ಟು ಮೀಮ್ಸ್​, ಜೋಕ್ಸ್​ ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ‘ಈ ಚಪ್ಪಲಿಗೆ ನೂರೈವತ್ತು ಕೊಡಬಹುದಷ್ಟೇ’ ಎಂದು ಒಬ್ಬರು ಹೇಳಿದ್ದಾರೆ. ‘ಮನೆಬಳಿ ಇರೋ ಸಣ್ಣಚಪ್ಪಲಿ ಅಂಗಡಿಯಲ್ಲಿ ಇಂಥ ಚಪ್ಪಲಿ ನೋಡಿದೀನಿ. ನೂರೈವತ್ತಕ್ಕಿಂತ ಜಾಸ್ತಿ ಕೊಡುವ ಮಾತೇ ಇಲ್ಲ’ ಎಂದಿದ್ಧಾರೆ ಮತ್ತೊಬ್ಬರು. ‘ಅಯ್ಯೋ ಮಾರಾಯಾ ಡಿಮಾರ್ಟ್​ನಲ್ಲಿ 99 ರೂಪಾಯಿಗೆಲ್ಲ ಸಿಗುತ್ತದಲ್ಲೋ’ ಎಂದಿದ್ದಾರೆ ಮಗದೊಬ್ಬರು. ‘ಹವಾಯಿ ಚಪ್ಪಲಿ ಎಂಬಿಎ ಮಾಡೋದಕ್ಕೆ ಅಮೆರಿಕಕ್ಕೆ ಹೋಗಿತ್ತಾ?’ ಎಂದು ತಮಾಷೆ ಮಾಡಿದ್ದಾರೆ ಇನ್ನೂ ಒಬ್ಬರು. ‘ನಾನು ಬಿಲಿಯನೇರ್ ಆದರೂ ಇಷ್ಟು ಹಣ ಕೊಟ್ಟು ಚಪ್ಪಲಿ ಧರಿಸಲಾರೆ’ ಎಂದಿದ್ದಾರೆ ಯಾರೋ ಒಬ್ಬರು.

ಕೆಲದಿನಗಳ ಹಿಂದೆಯಷ್ಟೇ Balenciaga ಕಂಪೆನಿಯು ಜಗತ್ತಿನಲ್ಲಿಯೇ ತುಟ್ಟಿಯಾದ ಬ್ಯಾಗ್​ ಅನ್ನು ಮಾರುಕಟ್ಟೆಗೆ  ಬಿಡುಗಡೆ ಮಾಡಿತ್ತು. ಅದರ ಬೆಲೆ ಕೇವಲ ರೂ. 1,42,569 ಇತ್ತು. ಕಸತುಂಬುವ ಚೀಲದಂತಿದೆ ಎಂದು ನೆಟ್ಟಿಗರು ಪೋಸ್ಟ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಸರೀ ಎಳೆದಾಡಿದ್ದರು.

ಈಗ ಇಷ್ಟು ತುಟ್ಟಿಯ ಬಾತ್ರೂಮು ಚಪ್ಪಲಿಯನ್ನು ಖರೀದಿಸುವ ಆಲೋಚನೆ ಇದೆಯೋ ಹೇಗೆ ನಿಮಗೆ?

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 6:20 pm, Tue, 18 October 22