Video: ಇನ್ನೂ ಮದುವೆಯಾಗಿಲ್ಲ ಎಂದು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ 24 ವರ್ಷದ ಯುವಕ
ಶಾಲಾ-ಕಾಲೇಜು ಪರೀಕ್ಷೆಯಲ್ಲಿ ಫೇಲ್ ಆದ್ರೆ, ಪ್ರೀತಿಸಿದ ಹುಡುಗ ಅಥವಾ ಹುಡುಗಿ ಕೈ ಕೊಟ್ರೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವವರನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, 24 ರ ಹರೆಯದ ಯುವಕನೊಬ್ಬ ಸ್ನೇಹಿತರಿಗೆಲ್ಲ ಮದುವೆಯಾಯ್ತು ಆದ್ರೆ ನನಗೆ ಇನ್ನೂ ಕೂಡಾ ಮದುವೆಯಾಗಿಲ್ಲ, ಮನೆವರಿಗೆ ಮದುವೆ ಮಾಡ್ಬೇಕು ಅನ್ನೋ ಯೋಚನೆ ಕೂಡಾ ಇಲ್ಲ ಎಂದು ಮನನೊಂದು ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಕೆಲವರು ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ದುಡುಕು ನಿರ್ಧಾರವನ್ನು ತೆಗೆದುಕೊಂಡು ತಮ್ಮ ಅಮೂಲ್ಯ ಜೀವನವನ್ನೇ ಹಾಳು ಮಾಡಿ ಬಿಡುತ್ತಾರೆ. ಶಾಲಾ-ಕಾಲೇಜು ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ, ಶಿಕ್ಷಣ ಮುಗಿದ್ರೂ ಕೆಲಸ ಸಿಗದಿದ್ದಕ್ಕೆ, ಲವ್ ಬ್ರೇಕಪ್ ಆಯ್ತು ಎಂಬ ಕ್ಷುಲ್ಲಕ ಕಾರಣಗಳಿಗೆ ಮನನೊಂದು ಮನೆಯವರ ಬಗ್ಗೆಯೂ ಯೋಚನೆ ಮಾಡದೆ, ಆತುರತ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡವರನ್ನು ನೋಡಿರುತ್ತೇವೆ. ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಗೆಳೆಯರಿಗೆಲ್ಲ ಮದುವೆಯಾಯ್ತು ಆದ್ರೆ ನನಗಿನ್ನೂ ಮದುವೆಯಾಗಿಲ್ಲ, ಮನೆಯವರಿಗೆ ಮದುವೆ ಮಾಡುವ ಮನಸ್ಸೇ ಇಲ್ಲ ಎಂದು 24 ರ ಹರೆಯದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಹೈದರಾಬಾದ್‌ನ ನಿರ್ಮಲ್ ಎಂಬಲ್ಲಿ ನಡೆದಿದ್ದು, ಇಲ್ಲಿನ ಭೈಂಸಾ ಪಟ್ಟಣದ ಕುಂಟಾ ಬಡಾವಣೆಯ 24 ವರ್ಷದ ಇಮ್ರಾನ್ ಎಂಬಾತ ಮದುವೆಯಾಗಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೌದು ಗೆಳೆಯರಿಗೆಲ್ಲಾ ಮದುವೆಯಾಯ್ತು, ಆದ್ರೆ ನನಗಿನ್ನೂ ಮದುವೆಯಾಗಿಲ್ಲ, ನನ್ನ ಮನೆಯವರಂತೂ ನನ್ಗೆ ಮದುವೆ ಮಾಡುವ ಮನಸ್ಸು ಕೂಡಾ ಮಾಡ್ತಿಲ್ಲ ಎಂದು ಮನನೊಂದು ಇಲ್ಲಿನ ಗಡ್ಡೆನ್ನ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಂತರ ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
పెళ్లి కావడం లేదని 24 ఏండ్ల యువకుడు ఆత్మహత్య
నిర్మల్ – భైంసా పట్టణంలోని కుంట ఏరియాకు చెందిన ఇమ్రాన్ (24) అనే యువకుడికి పెళ్లి కావడం లేదని మనస్తాపం చెంది స్థానిక గడ్డేన్న వాగు ప్రాజెక్టులో దూకి ఆత్మహత్య చేసుకున్నాడు. pic.twitter.com/nCHfOjTHl4
— Telugu Scribe (@TeluguScribe) August 7, 2024
ಈ ಕುರಿತ ಪೋಸ್ಟ್ ಒಂದನ್ನು TeluguScribe ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮದುವೆಯಾಗಿಲ್ಲ ಎಂದು ಬೇಸರಗೊಂಡು ಗಡ್ಡೆನ್ನಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ 24 ವರ್ಷದ ಯುವಕ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಸ್ಥಳೀಯರು ಕಾಲುವೆಯಲ್ಲಿ ತೇಲುತ್ತಿದ್ದ ಯುವಕನ ಮೃತದೇಹವನ್ನು ಮೇಲಕೆತ್ತುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: 20 ಸಾವಿರ ರೂಪಾಯಿಗಳಿಗೆ ಹೆತ್ತ ಕಂದಮ್ಮನನ್ನೇ ಮಾರಲು ಹೊರಟ ತಾಯಿ, ಕಾರಣ ಏನ್ ಗೊತ್ತಾ?
ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 80 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಲ್ಲಾ 31 ವರ್ಷ ಆದ್ರೂ ನಾನಿನ್ನು ಸಿಂಗಲ್ ಆಗಿದ್ದೇನೆ, ಅದೇನು ಬಂದಿರೋದು ಆತನಿಗೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಒಳ್ಳೆಯ ಕೆಲಸ ಸಾಯಲಿʼ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ