Viral: ನೋ ರೊಮ್ಯಾನ್ಸ್‌! ಇದು ಕ್ಯಾಬ್ ಕಣ್ರೀ ಓಯೋ ರೂಮ್‌ ಅಲ್ಲ… ವೈರಲ್‌ ಆಯ್ತು ಕ್ಯಾಬ್‌ನಲ್ಲಿ ಹಾಕಿದ ಸೂಚನಾ ಫಲಕ

ಸೋಷಿಯಲ್‌ ಮೀಡಿಯಾದಲ್ಲಿ ಹಲವು ರೀತಿಯ ಫೋಟೋ, ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವು ದೃಶ್ಯಗಳು ಗಂಭೀರವಾಗಿದ್ದರೂ ಕೂಡಾ ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ಇದೀಗ ಅಂತಹದ್ದೊಂದು ಪೋಸ್ಟ್‌ ವೈರಲ್‌ ಆಗಿದ್ದು, ಇಲ್ಲೊಬ್ಬ ಕ್ಯಾಬ್‌ ಡ್ರೈವರ್‌ ಪ್ರೇಮಿಗಳ ಹುಚ್ಚಾಟವನ್ನು ತಾಳಲಾರದೆ ಇದು ಓಯೋ ರೂಮ್‌ ಅಲ್ಲ… ದಯವಿಟ್ಟು ಇಲ್ಲಿ ಯಾರು ರೊಮ್ಯಾನ್ಸ್‌ ಮಾಡ್ಬೇಡಿ ಎಂದು ಕಾರಿನಲ್ಲಿ ದೊಡ್ಡದಾಗಿ ಸೂಚನಾ ಫಲಕವನ್ನು ಹಾಕಿದ್ದಾರೆ. ಈ ಪೋಸ್ಟ್‌ ನೋಡಿ ಇವಯ್ಯನಿಗೆ ಪ್ರೇಮಿಗಳು ಎಷ್ಟು ಕಾಟ ಕೊಟ್ಟಿರ್ಬೋದಪ್ಪಾ ದೇವ್ರೆ ಎಂದು ನೆಟ್ಟಿಗರು ಮಾತನಾಡಿಕೊಂಡಿದ್ದಾರೆ.

Viral: ನೋ ರೊಮ್ಯಾನ್ಸ್‌! ಇದು ಕ್ಯಾಬ್ ಕಣ್ರೀ ಓಯೋ ರೂಮ್‌ ಅಲ್ಲ… ವೈರಲ್‌ ಆಯ್ತು ಕ್ಯಾಬ್‌ನಲ್ಲಿ ಹಾಕಿದ ಸೂಚನಾ ಫಲಕ
ವೈರಲ್​​ ಪೋಸ್ಟ್​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 21, 2024 | 4:53 PM

ಪ್ರೀತಿಸಿದವರಿಗೆ ಲೋಕದ ಅರಿವೇ ಇರೋಲ್ಲ ಎನ್ನುತ್ತಾರೆ. ಇದಕ್ಕೆ ಉದಾಹರಣೆಯೆಂಬಂತೆ ಸಾಕಷ್ಟು ಪ್ರೇಮಿಗಳು ಪಾರ್ಕ್‌, ಬಸ್‌, ಟ್ರೈನ್‌ ಸೇರಿದಂತೆ ಎಲ್ಲೆಂದರಲ್ಲಿ ರೊಮ್ಯಾನ್ಸ್‌ ಮಾಡುತ್ತಾ ನಿಂತುಬಿಡುತ್ತಾರೆ. ಕ್ಯಾಬ್‌ಗಳಲ್ಲಿಯೂ ಕೂಡಾ ಕೆಲ ಪ್ರೇಮಿಗಳು ಇಂತಹ ಹುಚ್ಚಾಟಕ್ಕೆ ಕೈ ಹಾಕುತ್ತಾರೆ. ಈ ಹುಚ್ಚು ಪ್ರೇಮಿಗಳ ಕಾಟವನ್ನು ತಾಳಲಾರದೆ ಇಲ್ಲೊಬ್ಬ ಕ್ಯಾಬ್‌ ಡ್ರೈವರ್‌ ಇದು ಕ್ಯಾಬ್‌ ಕಣ್ರೀ… ಓಯೋ ಅಲ್ಲ; ದಯವಿಟ್ಟು ಇಲ್ಲಿ ರೊಮ್ಯಾನ್ಸ್‌ ಮಾಡ್ಬೇಡಿ ಅಂತ ತನ್ನ ಕಾರಿನಲ್ಲಿ ಸೂಚನಾ ಫಲಕವನ್ನು ನೇತು ಹಾಕಿ ವಾರ್ನಿಂಗ್‌ ಕೊಟ್ಟಿದ್ದಾರೆ. ಈ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಬಹುಶಃ ಕ್ಯಾಬ್‌ ಡ್ರೈವರ್‌ ನಮ್ಮಂತೆ ಸಿಂಗಲ್‌ ಇರ್ಬೇಕು ಅದಕ್ಕೆ ಈ ರೀತಿ ಸೂಚನಾ ಫಲಕ ಹಾಕಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

ಹೈದರಾಬಾದ್‌ನ ಕ್ಯಾಬ್‌ ಡ್ರೈವರ್‌ ಒಬ್ಬರು ಕ್ಯಾಬ್‌ನಲ್ಲಿ ಪ್ರೇಮಿಗಳು ಮಾಡುವ ಕಿತಾಪತಿಗಳನ್ನು ನೋಡಲಾರದೆ ಇದು ಕ್ಯಾಬ್‌ ಕಣ್ರೀ, ಓಯೋ ರೂಮ್‌ ಅಲ್ಲ ದಯವಿಟ್ಟು ಇಲ್ಲಿ ರೊಮ್ಯಾನ್ಸ್‌ ಮಾಡ್ಬೇಡಿ ಎಂದು ತಮ್ಮ ಕಾರಿನಲ್ಲಿ ದೊಡ್ಡದಾಗಿ ಸೂಚನಾ ಫಲಕವನ್ನು ಹಾಕಿಸಿಕೊಂಡಿದ್ದಾರೆ. ಈ ಕುರಿತ ಫೋಟೋವನ್ನು HiHyderabad ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ಫೋಟೋದಲ್ಲಿ ʼನೋ ರೊಮ್ಯಾನ್ಸ್‌, ಇದು ಕ್ಯಾಬ್‌ ಹೊರತು ಓಯೋ ರೂಮ್‌ ಅಥವಾ ಯಾವುದೇ ಪ್ರೈವೆಟ್‌ ಸ್ಥಳವಲ್ಲ. ದಯವಿಟ್ಟು ಇಲ್ಲಿ ಶಾಂತ ರೀತಿಯಲ್ಲಿ ವರ್ತಿಸಿ ಎಂದು ಎಚ್ಚರಿಕೆಯ ಸಂದೇಶವನ್ನು ಬರೆದಿರುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಇದಪ್ಪಾ ಸಾಧನೆ ಅಂದ್ರೆ… MBBS ಸೀಟ್‌ ಪಡೆದು ಭವಿಷ್ಯದ ವೈದ್ಯರಾಗಲು ಹೊರಟ ನಾಲ್ವರು ಸಹೋದರಿಯರು

ವೈರಲ್​​ ಪೋಸ್ಟ್​​​ ಇಲ್ಲಿದೆ ನೋಡಿ:

ಅಕ್ಟೋಬರ್‌ 20 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 81 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದು ಓಯೋ ರೂಮ್‌ನ ಫ್ರೀ ಪ್ರಮೋಷನ್‌ʼ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪಾಪ ಆತ ಪ್ರೇಮಿಗಳ ಕಾಟ ತಡೆಯಲಾರದೆ ಈ ವಾರ್ನಿಂಗ್‌ ಕೊಟ್ಟಿದ್ದಾನೆʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ