Viral Post: ಚಿಕನ್‌ ಮಂಚೂರಿಯನ್‌ ಬದಲು ಗ್ರಾಹರಿಗೆ ಚಿಕನ್‌ 65 ಕೊಟ್ಟು ಪ್ಲೀಸ್‌ ಇದನ್ನೇ ತಿನ್ನಿ ಎಂದ ಝೊಮ್ಯಾಟೊ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 17, 2024 | 3:50 PM

ಫುಡ್‌ ಡೆಲಿವರಿ ಕಂಪೆನಿಗಳ ಕೆಲವು ಸಣ್ಣಪುಟ್ಟ ಎಡವಟ್ಟುಗಳ ಸುದ್ದಿಗಳು ಆಗಾಗ್ಗೆ ಕೇಳಿಬರುತ್ತಿರುತ್ತವೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಝೊಮ್ಯಾಟೋ ಡೆಲಿವರಿ ಏಜೆಂಟ್‌ ಗ್ರಾಹಕರೊಬ್ಬರಿಗೆ ಅವರು ಆರ್ಡರ್‌ ಮಾಡಿದ ಚಿಕನ್‌ ಮಂಚೂರಿಯನ್‌ ಕೊಡುವ ಬದಲು ʼಚಿಕನ್‌ 65ʼ ಅನ್ನು ಡೆಲಿವರಿ ಮಾಡಿ, ಪ್ಲೀಸ್‌ ಇದನ್ನೇ ತಿನ್ನಿ ಎಂದು ಕೇಳಿಕೊಂಡಿದ್ದಾರೆ. ಕಸ್ಟಮರ್‌ ಹಾಗೂ ಡೆಲಿವರಿ ಏಜೆಂಟ್‌ ನಡುವಿನ ಈ ಸಂಭಾಷಣೆಯ ಸ್ಕ್ರೀನ್‌ಶಾಟ್‌ ಫೋಟೋ ಇದೀಗ ವೈರಲ್‌ ಆಗುತ್ತಿದೆ.

Viral Post: ಚಿಕನ್‌ ಮಂಚೂರಿಯನ್‌ ಬದಲು ಗ್ರಾಹರಿಗೆ ಚಿಕನ್‌ 65 ಕೊಟ್ಟು ಪ್ಲೀಸ್‌ ಇದನ್ನೇ ತಿನ್ನಿ ಎಂದ ಝೊಮ್ಯಾಟೊ
Follow us on

ಝೊಮ್ಯಾಟೋ, ಸ್ವಿಗ್ಗಿ ಇತ್ಯಾದಿ ಫುಡ್‌ ಡೆಲಿವರಿ ಕಂಪೆನಿಗಳು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳ ಸುದ್ದಿಗಳು ಆಗಾಗ್ಗೆ ವೈರಲ್‌ ಆಗುತ್ತಿರುತ್ತವೆ. ಈ ಹಿಂದೆ ಝೊಮ್ಯಾಟೋ ಗ್ರಾಹಕರೊಬ್ಬರಿಗೆ ವೆಜ್‌ ಊಟದ ಬದಲು ನಾನ್‌ ವೆಜ್‌ ಊಟ ಕೊಟ್ಟು ಎಡವಟ್ಟು ಮಾಡಿಕೊಂಡಿತ್ತು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಚಿಕನ್‌ ಮಂಚೂರಿಯನ್‌ ಬದಲು ಚಿಕನ್‌ 65 ಕೊಟ್ಟು ಪ್ಲೀಸ್‌ ಇದನ್ನೇ ತಿನ್ನಿ ಎಂದು ಝೊಮ್ಯಾಟೋ ಡೆಲಿವರಿ ಏಜೆಂಟ್‌ ಗ್ರಾಹಕರೊಬ್ಬರ ಬಳಿ ಕೇಳಿಕೊಂಡಿದ್ದಾನೆ. ಇವರ ಈ ಸಂಭಾಷಣೆಯ ಸ್ಕ್ರೀನ್‌ ಶಾಟ್‌ ಫೋಟೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಈ ಘಟನೆ ಹೈದರಬಾದ್‌ನಲ್ಲಿ ನಡೆದಿದ್ದು, ಯುವತಿಯೊಬ್ಬಳು ಝೊಮ್ಯಾಟೋದಲ್ಲಿ ಚಿಕನ್‌ ಮಂಚೂರಿಯನ್‌ ಆರ್ಡರ್‌ ಮಾಡಿದ್ದು, ಆದ್ರೆ ಡೆಲಿವರಿ ಏಜೆಂಟ್‌ ಆಕೆಗೆ ತಪ್ಪಾಗಿ 65 ತಂದುಕೊಟ್ಟಿದ್ದಾರೆ. ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಅನನ್ಯ ಎಂಬ ಯುವತಿ ಚಿಕನ್‌ ಮಂಚೂರಿಯನ್‌ ಅನ್ನು ಆರ್ಡರ್‌ ಮಾಡಿದ್ದಳು. ಆದ್ರೆ ಖೊಮ್ಯಾಟೋ ಡೆಲಿವರಿ ಏಜೆಂಟ್‌ ಆಕೆಗೆ ತಪ್ಪಾಗಿ 65 ತಂದುಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ದಯವಿಟ್ಟು ಇದನ್ನೇ ತಿನ್ನಿ, ನೀವು ಖಂಡಿತವಾಗಿಯೂ ಈ ಡಿಶ್‌ ಅನ್ನು ತುಂಬಾ ಇಷ್ಟಪಡುತ್ತೀರಿ ಎಂದು ಕೂಡಾ ಹೇಳಿದ್ದಾರೆ. ಇವರಿಬ್ಬರ ನಡುವಿನ ಸಂಭಾಷಣೆಯ ಸ್ಕ್ರೀನ್‌ ಶಾಟ್‌ ಫೋಟೋವನ್ನು ಅನನ್ಯ (ananyapotatoe) ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.

ವೈರಲ್‌ ಆಗುತ್ತಿರುವ ಫೋಟೋದಲ್ಲಿ ನಾನು ಚಿಕನ್‌ ಮಂಚೂರಿಯನ್‌ ಆರ್ಡರ್‌ ಮಾಡಿದ್ದು, 65 ಅಲ್ಲ ಎಂದು ಯುವತಿ ಡೆಲಿವರಿ ಏಜೆಂಟ್‌ಗೆ ಮೆಸೆಜ್‌ ಮಾಡಿರುವ ದೃಶ್ಯವನ್ನು ಕಾಣಬಹುದು. ಅದಕ್ಕೆ ಉತ್ತರಿಸಿದ ಡೆಲಿವರಿ ಏಜೆಂಟ್‌, ನಾನು ಈ ಬಗ್ಗೆ ರೆಸ್ಟೋರೆಂಟಿನಲ್ಲಿ ಪರಿಶೀಲಿಸುತ್ತೇನೆ. ಈಗ ದಯವಿಟ್ಟು ಅದನ್ನು ತಿನ್ನಿ. ನೀವು ಖಂಡಿತವಾಗಿಯೂ ಆ ಡಿಶ್‌ ಅನ್ನು ಇಷ್ಟಪಡುತ್ತೀರಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ದೇವರಂತೆ ಬಂದು ಹಾವಿನ ಪ್ರಾಣ ಉಳಿಸಿದ ಯುವಕ; ವಿಡಿಯೋ ವೈರಲ್‌

ಅಕ್ಟೋಬರ್‌ 14 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 6 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವರು ಮಾಡೋ ಎಡವಟ್ಟಿಗೆ ನಾನು ಇವಾಗ ಝೊಮ್ಯಾಟೋದಲ್ಲಿ ಫುಡ್‌ ಆರ್ಡರ್‌ ಮಾಡೋದನ್ನೇ ಬಿಟ್ಟು ಬಿಟ್ಟಿದ್ದೇನೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼ4 ವರ್ಷಗಳ ಹಿಂದೆ ಬರ್ಗರ್‌ ಆರ್ಡರ್‌ ಮಾಡಿದಾಗ ನನಗೆ ಬಟರ್‌ ಚಿಕನ್‌ ಡೆಲಿವರಿ ಮಾಡಿದ್ರು. ನಾನು ಚಿಕನ್‌ ಕೂಡಾ ತಿಂದೆ, ಹಣ ಕೂಡಾ ವಾಪಸ್‌ ಪಡೆದುಕೊಂಡೆʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಪೋಸ್ಟ್‌ಗೆ ಉತ್ತರಿಸಿದ ಝೊಮ್ಯಾಟೋ ಯುವತಿಗೆ ಕ್ಷಮೆಯನ್ನು ಕೇಳಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ