ಹೇಳಿ ಕೇಳಿ ಇದು ಡಿಜಿಟಲ್ ಯುಗ. ಈ ಯುಗದಲ್ಲಿ ಸೋಷಿಯಲ್ ಮೀಡಿಯಾ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಇಲ್ಲಿ ದಿಢೀರ್ ಖ್ಯಾತಿಯನ್ನು ಪಡೆಯಬೇಕೆಂದು ಯುವ ಜನತೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ರೀಲ್ಸ್ ವಿಡಿಯೋಗಳನ್ನು ಮಾಡುತ್ತಿರುತ್ತಾರೆ. ಇನ್ನೂ ರೀಲ್ಸ್ ಹುಚ್ಚಿನಿಂದ ಪ್ರಾಣವನ್ನು ಕಳೆದುಕೊಂಡವರು ಹಲವರಿದ್ದಾರೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡಾ ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದು, ರಸ್ತೆ ಮಧ್ಯೆ ಚಲಿಸುತ್ತಿರುವ ಬಸ್ಸಿನ ಕೆಳಗೆ ಮಲಗಿ ರೀಲ್ಸ್ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಯುವಕನ ದುಸ್ಸಾಹಸಕ್ಕೆ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.
ಈ ವಿಡಿಯೋವನ್ನು @tweet_aneri ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಹೈದರಬಾದಿನ ರಸ್ತೆಯೊಂದರಲ್ಲಿ ಚಲಿಸುತ್ತಿರುವ ಬಸ್ಸಿನ ಕೆಳಗೆ ಮಲಗಿ ಅಪಾಯಕಾರಿ ಸಾಹಸ ಮಾಡಲು ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
In a bid to make #reel, a youngster risked his life by doing dangerous stunt by suddenly laying on road in front of a running bus in #Hyderabad. The stunt video is now going viral on #SocialMedia, triggering outrage among netizens pic.twitter.com/5bD2XQuEAT
— Aneri Shah Yakkati (@tweet_aneri) June 21, 2024
ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋದಲ್ಲಿ ಹೈದರಾಬಾದ್ನ ಯೂಸುಫ್ಗುಡ್ ನಗರದ ಮುಖ್ಯ ರಸ್ತೆಯಲ್ಲಿ ವೇಗವಾಗಿ ಬಸ್ ಬರುತ್ತಿದ್ದ ವೇಳೆ ಯುವಕನೊಬ್ಬ ಇದ್ದಕ್ಕಿದ್ದಂತೆ ಬಂದು ಚಲಿಸುತ್ತಿರುವ ಬಸ್ಸಿನ ಕೆಳಗೆ ಮಲಗಿ, ಬಸ್ ಹೋದ ನಂತರ ರಸ್ತೆಯಿಂದ ಎದ್ದು ಹೋಗುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿತ್ತು. ಸತ್ಯಾ ಸತ್ಯತೆಯನ್ನು ಪರಿಶೀಲಿಸಿದಾಗ ಇದು ನೈಜ್ಯ ಘಟನೆಯಲ್ಲ, ಬದಲಿಗೆ VFX ಮತ್ತು ಎಡಿಟಿಂಗ್ ತಂತ್ರಜ್ಞಾನ ಬಳಸಿ ಈ ವಿಡಿಯೋ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜೂನ್ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕು ವೈರಲ್ ಆಗುತ್ತಿದ್ದಂತೆ, ಇದಕ್ಕೆ ಪ್ರತಿಕ್ರಿಯಿಸಿದ ತೆಲಂಗಾಣ ರಾಜ್ಯ ರಸ್ತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿಸಿ ಸಜ್ಜನರ್ ಇದು VFX ಮತ್ತು ಎಡಿಟಿಂಗ್ ತಂತ್ರಜ್ಞಾನ ಬಳಸಿ ತಯಾರಿಸಲಾದ ವಿಡಿಯೋ ಆಗಿದ್ದು, ಲೈಕ್ಸ್ ಮತ್ತು ಕಾಮೆಂಟ್ಸ್ ಪಡೆಯಲು ಕೆಲವರು ಈ ರೀತಿ ಹುಚ್ಚಾಟ ಮಾಡುತ್ತಾರೆ. ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ