Air Ticket : ವಿಮಾನಪ್ರಯಾಣವೆಂದರೆ ಅದು ಎಂದಿಗೂ ತುಟ್ಟಿಯೇ. ಯಾವುದೋ ಕಾರಣಕ್ಕೆ ಟಿಕೆಟ್ ಕ್ಯಾನ್ಸೆಲ್ ಮಾಡಬೇಕೆಂದು ನಿಮಗೆ ಅನ್ನಿಸಿದರೆ, ಮರುಪಾವತಿಯ ಬಗ್ಗೆ ಆಸೆಯನ್ನೇ ಬಿಡಬೇಕಾಗುತ್ತದೆ. ಹಾಗಾಗಿ ಈ ಸೌಲಭ್ಯ ಕೆಲವರಿಗಷ್ಟೇ. ಇದೀಗ ವೈರಲ್ ಆಗುತ್ತಿರುವ ಈ ಟ್ವೀಟ್ ಗಮನಿಸಿ. ಐಎಎಸ್ ಅಧಿಕಾರಿಯೊಬ್ಬರು ತಮ್ಮ ವಿಮಾನಯಾನದ ಟಿಕೆಟ್ ಅನ್ನು ಕ್ಯಾನ್ಸೆಲ್ ಮಾಡಿದ್ದಾರೆ. ಆ ಟಿಕೆಟ್ನ ಮೂಲಬೆಲೆ ಸುಮಾರು ರೂ. 14,000. ಆದರೆ ವಿಮಾನಸಂಸ್ಥೆಯು ಅವರಿಗೆ ಮರುಪಾವತಿ ಮಾಡಿದ್ದು ರೂ. 20! ಈ ವಿಷಯವನ್ನು ಐಎಎಸ್ ಅಧಿಕಾರಿ ಸಾಮಾಜಿಕ ಜಾಲತಾಣಿಗಳ ಮುಂದೆ ಸಾಕ್ಷಿಸಮೇತ ಬಿಚ್ಚಿಟ್ಟಿದ್ದಾರೆ.
Pls suggest some good investment plans for my refund. pic.twitter.com/lcUEMVQBnq
ಇದನ್ನೂ ಓದಿ— Rahul Kumar (@Rahulkumar_IAS) July 10, 2023
ರೂ. 13,820 ಮೊತ್ತದ ಟಿಕೆಟ್ ರದ್ದುಗೊಳಿಸಿದ್ದಕ್ಕೆ ರೂ. 20 ಮರುಪಾವತಿ ಎಂದರೆ ಯಾರಿಗೂ ಬೇಸರವಾಗುವ ಸಂಗತಿಯೇ. ಐಎಎಸ್ ಆಫೀಸರ್ ರಾಹುಲ್ ಕುಮಾರ್, “ಉತ್ತಮವಾದ ಇನ್ವೆಸ್ಟ್ಮೆಂಟ್ ಪ್ಲ್ಯಾನ್ಸ್ ಇದ್ದರೆ ತಿಳಿಸಿ, ಮರುಪಾವತಿಯಾದ ಹಣವನ್ನು ತೊಡಗಿಸಬೇಕಿದೆ” ಎಂದು ತಮಾಷೆಯ ಒಕ್ಕಣೆ ಬರೆದು ಮರುಪಾವತಿಸಿದ ಬಿಲ್ನ ಸ್ಕ್ರೀನ್ ಶಾಟ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : Viral: ಕಿರುಚುತ್ತಿರುವ ಮಹಿಳೆಯನ್ನು ಪತ್ತೆ ಹಚ್ಚಲು 3 ಪೊಲೀಸ್ ವ್ಯಾನ್ಗಳು ಬಂದವು, ಆದರೆ…
ನೆಟ್ಟಿಗರು ಅಧಿಕಾರಿಯ ಹಾಸ್ಯಪ್ರವೃತ್ತಿ ಮತ್ತು ಬುದ್ಧಿವಂತಿಕೆಯನ್ನು ಶ್ಲಾಘಿಸುತ್ತಿದ್ದಾರೆ ಒಬ್ಬರು. ನೀವು Yes Bank ನಲ್ಲಿ ಒಂದು ಶೇರ್, Vodafone ನಲ್ಲಿ ಎರಡು ಶೇರ್ಗಳನ್ನು ಕೊಳ್ಳಬಹುದು ಸರ್ ಎಂದಿದ್ದಾರೆ ಇನ್ನೊಬ್ಬರು. ಹಾಗೆ ನೋಡಿದರೆ ವಿಮಾನಸಂಸ್ಥೆಗಳಿಗಿಂತ ರೈಲುಗಳೇ ಉತ್ತಮ. ಟಿಕೆಟ್ ಕ್ಯಾನ್ಸೆಲ್ ಮಾಡಿದಾಗ ಮರುಪಾವತಿಸುತ್ತವೆ ಎಂದಿದ್ದಾರೆ ಮತ್ತೂ ಒಬ್ಬರು.
ಇದನ್ನೂ ಓದಿ : Viral Video: ಬೆಂಗಳೂರು ಅನ್ನೋ ತಾಯಿ ಯಾರನ್ನೂ ಬರೀಗೈಲೆ ಕಳಸೂದಿಲ್ಲ
ಟಿಕೆಟ್ ಕ್ಯಾನ್ಸೆಲ್ ಮಾಡಿ ನಾವೂ ಸಾಕಷ್ಟು ಹಣ ಕಳೆದುಕೊಂಡಿದ್ದೇವೆ. ಆದರೆ ಹೀಗೆ ಎರಡಂಕೆಯಲ್ಲಿ ಅಲ್ಲ ಎಂದು ಸ್ಕ್ರೀನ್ ಶಾಟ್ ಹಾಕಿದ್ದಾರೆ ಕೆಲವರು. ನೆಟ್ಟಿಗರು ಯಾವೆಲ್ಲ ವಿಮಾನ ಸಂಸ್ಥೆಗಳನ್ನು ಟ್ಯಾಗ್ ಮಾಡಿದ್ದಾರೋ ಆ ಎಲ್ಲ ಸಂಸ್ಥೆಗಳು ಜನರಿಗೆ ಪ್ರತಿಕ್ರಿಯಿಸಿವೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:23 am, Thu, 13 July 23