ಶ್ರೀ ರಾಮನ ಅಸ್ತಿತ್ವ ಪ್ರಶ್ನಿಸಿದ್ದ ಮಾಜಿ ಸಿಎಂನ ಊರಿನಲ್ಲಿ ಪತ್ತೆಯಾಯಿತು ಶ್ರೀರಾಮನ ವಿಗ್ರಹ

ಪಂಚಲೋಹದಿಂದ ತಯಾರಿಸಲಾದ ಅಮೂಲ್ಯ ಮೂರ್ತಿಯು ಸುಮಾರು 2 ಅಡಿ ಎತ್ತರವಿದೆ. ಮೂರ್ತಿ ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಹೂವಿನ ಹಾರ ಫಲಪುಷ್ಪವನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಬಳಿಕ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಶ್ರೀ ರಾಮನ ಅಸ್ತಿತ್ವ ಪ್ರಶ್ನಿಸಿದ್ದ ಮಾಜಿ ಸಿಎಂನ ಊರಿನಲ್ಲಿ ಪತ್ತೆಯಾಯಿತು ಶ್ರೀರಾಮನ ವಿಗ್ರಹ

Updated on: Mar 28, 2024 | 6:11 PM

ತಮಿಳುನಾಡು: ತಿರುವಾರೂರಿನಲ್ಲಿ ಉತ್ಖನನದ ಸಮಯದಲ್ಲಿ ಪತ್ತೆಯಾದ ಶತಮಾನಗಳಷ್ಟು ಹಳೆಯದಾದ ಶ್ರೀ ರಾಮನ ವಿಗ್ರಹಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶ್ರೀರಾಮನನ್ನು ಹಲವು ಬಾರಿ ಅಪಹಾಸ್ಯ ಮಾಡಿದ್ದ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ತವರು ಜಿಲ್ಲೆ ತಿರುವಾರೂರಿನಲ್ಲಿ ಇದೀಗ ರಾಮನ ವಿಗ್ರಹ ಪತ್ತೆಯಾಗಿರುವುದು ಗಮನಾರ್ಹ.  ತಿರುವಾರೂರಿನ ಹೂವಿನ ಅಂಗಡಿ ಮಾಲೀಕ ಮಾರಿಮುತ್ತು ಅವರು ತಮ್ಮ ಮನೆಗೆ ಅಡಿಪಾಯವನ್ನು ಅಗೆಯುವ ವೇಳೆ ಶ್ರೀರಾಮನ ಈ ಪುರಾತನ ಮೂರ್ತಿಯ ಪತ್ತೆಯಾಗಿದ್ದು, ಸ್ಥಳೀಯ ಜನರಿಗೆ ಅಚ್ಚರಿಯುಂಟು ಮಾಡಿದೆ.

ಪಂಚಲೋಹ ಎಂದು ಕರೆಯಲ್ಪಡುವ 5-ಲೋಹದ ಮಿಶ್ರ ಲೋಹದಿಂದ ರಚಿಸಲಾದ ಅಮೂಲ್ಯ ಮೂರ್ತಿಯು ಸುಮಾರು 2 ಅಡಿ ಎತ್ತರವಿದೆ. ಮೂರ್ತಿ ಪತ್ತೆಯಾಗುತ್ತಿದ್ದಂತೆ ಸ್ಥಳೀಯರು ಹೂವಿನ ಹಾರ ಫಲಪುಷ್ಪವನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ. ಬಳಿಕ ಸರ್ಕಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಈ ಫೋಟೋದಲ್ಲಿ ನಿಮಗೆ ಮೊದಲು ಕಾಣಿಸಿದ್ದು ಏನು? ನಿಮ್ಮ ವ್ಯಕ್ತಿತ್ವ ತಿಳಿಯಿರಿ

ತಹಶೀಲ್ದಾರ್ ದೇವೇಂದ್ರನ್ ಅವರೊಂದಿಗೆ ಗ್ರಾ.ಪಂ ಆಡಳಿತಾಧಿಕಾರಿ ರಾಜಕುಮಾರ್ ಸ್ಥಳಕ್ಕೆ ಆಗಮಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂರ್ತಿಯನ್ನು ವಶಪಡಿಸಿಕೊಂಡು ತಹಶೀಲ್ದಾರ್ ಕಚೇರಿಗೆ ಸಾಗಿಸಲು ವ್ಯವಸ್ಥೆ ಮಾಡಲಾಯಿತು. ‘ಪುರಾತತ್ವಶಾಸ್ತ್ರಜ್ಞರ ಪರೀಕ್ಷೆಯ ನಂತರವೇ ಪ್ರತಿಮೆಯ ನಿಜವಾದ ಸ್ವರೂಪ ಮತ್ತು ಮೌಲ್ಯವನ್ನು ಕಂಡುಹಿಡಿಯಬಹುದು’ ಎಂದು ದೇವೇಂದ್ರನ್ ಹೇಳಿರುವುದು ವರದಿಯಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Akshatha Vorkady

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us