Kolkata: ಸಾರ್ವಜನಿಕ ಗಣಪತಿಗಳು ಚಮತ್ಕಾರ ಪ್ರದರ್ಶನ ಮಾಡದಿದ್ದರೆ ಹೇಗೆ? ಮನೆಮಂದಿ ಮಕ್ಕಳನ್ನು ಕರೆದುಕೊಂಡು ದೂರ ಪ್ರಯಾಣಿಸಿದ್ದಕ್ಕೆ ಏನಾದರೂ ಬೆರಗು, ಪುಳಕ, ಖುಷಿ ಅನುಭವವನ್ನು ಆ ಗಣಪ ಕೊಡಲೇಬೇಕು. ಇಲ್ಲವಾದಲ್ಲಿ ಕರೆದುಕೊಂಡು ಹೋದವರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವುದು ಗ್ಯಾರಂಟಿ! ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಕೊಲ್ಕತ್ತೆಯ ಉಲ್ಟಾಡಾಂಗನ (Ultadang) ನಾಗರಕಲ್ಲು ಮಾರ್ಕೆಟ್ಟಿನಲ್ಲಿ ಪ್ರತಿಷ್ಠಾಪಿಸಿರುವ ಈ ಗಣಪ, ಭಕ್ತಾದಿಗಳು ಪಾದ ಮುಟ್ಟುತ್ತಿದ್ದಂತೆ ಎದ್ದುನಿಂತು ಆಶೀರ್ವದಿಸುತ್ತಾನೆ. ನೆಟ್ಟಿಗರು ಈ ಸೋಜಿಗವನ್ನು ಬೆರಗಿನಿಂದ ನೋಡುತ್ತಿದ್ದಾರೆ.
ಇದನ್ನೂ ಓದಿ : Viral Video: ಜವಾನ್ ಜಮಾನಾ: ವೆಂಟಿಲೇಟರ್ನೊಂದಿಗೆ ಶಾರುಖ್ಗೋಸ್ಕರ ಥಿಯೇಟರಿಗೆ ಬಂದ ದಿವ್ಯಾಂಗ ವ್ಯಕ್ತಿ
‘ಈ ದೃಶ್ಯವನ್ನು ನೋಡಿ ನನಗೆ ಮೊದಲು ಅಚ್ಚರಿಯಾಯಿತು. ಭಕ್ತಿಯಿಂದ ಬಂದು ನಮಸ್ಕರಿಸಿದೆ. ನಂತರ ಪಾದಗಳನ್ನು ಮುಟ್ಟಿದೆ ಗಣಪ ಎದ್ದು ನಿಂತು ಆಶೀರ್ವದಿಸಿದ’ ಎಂದಿದ್ದಾರೆ ಪ್ರತ್ಯಕ್ಷದರ್ಶಿಯೊಬ್ಬರು. ಈ ಚಮತ್ಕಾರಿಕ ಗಣಪನ ದರ್ಶನಕ್ಕೆ ಜನಸಾಗರ ಹರಿದುಬರುತ್ತಿದೆ.
‘ಪ್ರತೀ ವರ್ಷ ಹೊಸ ರೀತಿಯಲ್ಲಿ ಗಣಪನನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುತ್ತೇವೆ. ಒಂದು ರಾತ್ರಿ ಮಲಗಿರುವಾಗ ಈ ರೀತಿ ಗಣಪತಿಯನ್ನು ಚಮತ್ಕಾರಿಕವಾಗಿ ರೂಪಿಸಬೇಕು ಎಂಬ ಆಲೋಚನೆ ಮನಸಿಗೆ ಬಂದಿತು.ಇಲ್ಲಿ ಜಗನ್ನಾಥ ಪುರಿ ಶೈಲಿಯಲ್ಲಿ ಮಂಟಪವನ್ನು ತಯಾರುಮಾಡಲಾಗಿದೆ’ ಎಂದಿದ್ದಾರೆ ಪೂಜಾ ಸಮಿತಿಯ ಸದಸ್ಯರೊಬ್ಬರು.
ಇದನ್ನೂ ಓದಿ : Viral Video: ಮೂರು ಕಣ್ಣಿನ ಮುಗಲು ಬಣ್ಣದ ಮುದ್ದು ಮಾದಯ್ಯ; ಚೈತ್ರಾ ಆಚಾರ್ ಹಾಡು ವೈರಲ್
27 ವರ್ಷಗಳ ಹಿಂದೆ ಗಣಪ ಹಾಲು ಕುಡಿದ ಸುದ್ದಿ ದೇಶಾದ್ಯಂತ ಬೆರಗು ಮೂಡಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಮೂರ್ತಿಯಂತೆ ಸುಮ್ಮನೇ ಕುಳಿತುಕೊಳ್ಳುವುದನ್ನು ಬಿಟ್ಟು ಈ ಗಣಪ, ಪಾದ ಮುಟ್ಟಿದ ಪ್ರತಿಯೊಬ್ಬರಿಗೂ ಆಶೀರ್ವದಿಸುವ ರೀತಿ ನಿಜಕ್ಕೂ ಆಪ್ತ ಮತ್ತು ಸಂವೇದನಾಶೀಲ ಎನ್ನಿಸಿದೆ. ಈ ಗಣಪತಿಯ ಚಮತ್ಕಾರ ನೋಡಲು ಜನಸಾಗರವು ಹರಿದುಬರುತ್ತಿದೆ.
ಇದನ್ನೂ ಓದಿ : Viral Video: ಬೀದಿಪಾಲಾಗಿದ್ದ 81 ವರ್ಷದ ಬರ್ಮಾದ ಮರ್ಲಿನ್ ಚೆನ್ನೈನಲ್ಲಿ ಮತ್ತೀಗ ಇಂಗ್ಲಿಷ್ ಟೀಚರ್
ಕೊರೊನಾ ನಂತರ ಒಂದೊಂದೇ ಹಬ್ಬಗಳು ಮತ್ತೆ ಮೊದಲಿನಂತೆ ರಂಗು ಪಡೆದುಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ದುಃಖ ನೋವಿನಿಂದ ಮಡುಗಟ್ಟಿದ ಮುಖಗಳಲ್ಲಿ ಲವಲವಿಕೆ ಕಾಣುತ್ತಿದೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:53 pm, Wed, 20 September 23