Viral : ಹುಲಿಗಳು ಪಿಕ್ನಿಕ್ ಹೋದ ಒಂದು ದಿನ

| Updated By: ಶ್ರೀದೇವಿ ಕಳಸದ

Updated on: Aug 13, 2022 | 1:36 PM

Tiger Video : ಸುಮಾರು 44,000 ನೆಟ್ಟಿಗರು ಈ ವಿಡಿಯೋ ಆನಂದಿಸಿದ್ದಾರೆ. ಈ ಬಿಸಿಲುಹೊತ್ತಿನಲ್ಲಿ ನೋಡಿ ನಿಮ್ಮ ಕಣ್ಣುಗಳೂ ತಂಪಾಗಬಹುದು.

Viral : ಹುಲಿಗಳು ಪಿಕ್ನಿಕ್ ಹೋದ ಒಂದು ದಿನ
ಫ್ಯಾಮಿಲಿ ಔಟಿಂಗ್
Follow us on

Tiger : ಎಲ್ಲೆಡೆ ಬೀಳುತ್ತಿರುವ ಮಳೆ. ತುಂಬಿ ತುಳುಕುತ್ತಿರುವ ನದಿ ಕೆರೆ ಸರೋವರಗಳು. ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳ ವಿಹಾರಕ್ಕೆ ಹೇಳಿಮಾಡಿಸಿದಂಥ ವಾತಾವರಣ. ಐಎಫ್​ಎಸ್ ಸುಸಾಂತ ನಂದಾ ಮತ್ತೊಂದು ಚೆಂದದ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ಈ ವಿಡಿಯೋ ಸುಮಾರು 44,000 ವೀಕ್ಷಣೆ ಪಡೆದಿದ್ದು 1.7 ಲೈಕ್ಸ್​ ಪಡೆದಿದೆ. ಹುಲಿಗಳ ಕುಟುಂಬವೊಂದು ಕೆರೆಯಲ್ಲಿ ಕುಳಿತು ವಿರಮಿಸುವ ಈ ದೃಶ್ಯ ಮತ್ತೆ ಮತ್ತೆ ನೋಡುವಂತಿದೆ. ಕಾಡಿನ ಮೌನವನ್ನು ಆನಂದಿಸುತ್ತ ಮನಸ್ಸನ್ನು ಉಲ್ಲಸಿತಗೊಳಿಸಿಕೊಳ್ಳುತ್ತಿರುಬಹುದು. ನೀವೂ ನೋಡಿ

Our tiger reserves are source of water to billions of Indian’s as many major river originates from them.
Success of tiger conservation in India is key to our water & food security.
Here a family of the big cat enjoying the onset of monsoons ??
(As received from a colleague) pic.twitter.com/cnIk5A8ud2

— Susanta Nanda IFS (@susantananda3) August 9, 2022

ಇದನ್ನೂ ಓದಿ
TV9ನಲ್ಲಿ ಪ್ರಕಟವಾದ ಸುದ್ದಿ ನೋಡಿ ಬೆಕ್ಕನ್ನು ಮಾಲೀಕರಿಗೆ ಒಪ್ಪಿಸಿದ ಯುವಕ; ಆತ ಹೇಳಿದ್ದೇನು ಗೊತ್ತಾ?
Viral: ಜಮೀನಿಗೆ ಹೋಗಿ ಭಯಗೊಂಡ ರೈತ; ಅಷ್ಟಕ್ಕೂ ಜಮೀನಿನಲ್ಲಿ ಇದ್ದದ್ದು ಏನು? ನೀವೇ ನೋಡಿ
Trending : ಒಂದು ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪುರುಸೊತ್ತಿಲ್ಲ ಅಲ್ಲವೆ?
Viral News: ಅಪ್ಪುಗೆಯ ಮೂಲಕವೇ ಪ್ರತಿ ಗಂಟೆಗೆ 7 ಸಾವಿರ ರೂ ಸಂಪಾದಿಸುತ್ತಾನೆ..!

‘ಹುಲಿ ಸಂರಕ್ಷಣಾ ಪ್ರದೇಶಗಳು ಭಾರತೀಯರಿಗೆ ನೀರಿನ ಮೂಲಗಳು. ಈ ಪ್ರದೇಶಗಳಿಂದಲೇ ಅನೇಕ ನದಿಗಳು ಹುಟ್ಟಿಕೊಂಡು ಹರಿದಿವೆ. ಭಾರತದಲ್ಲಿ ನೀರು ಮತ್ತು ಆಹಾರ ಭದ್ರತೆ ಸಮೃದ್ಧವಾಗಿರುವುದಕ್ಕೆ ಕಾರಣ ಹುಲಿಗಳ ಯಶಸ್ವಿ ಸಂರಕ್ಷಣೆ. ಇಲ್ಲಿ ನೋಡಿ ಈ ಹುಲಿಕುಟುಂಬವು ಮಳೆಗಾಲವನ್ನು ಹೇಗೆ ಆನಂದಿಸುತ್ತಿದೆ ನೋಡಿ’ ಎಂದು ಸುಸಾಂತ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಪ್ರತಿಕ್ರಿಯಿಸಿದ ಒಬ್ಬರು, ‘ಕುಟುಂಬದೊಂದಿಗೆ ಪೂಲ್ ಪಾರ್ಟಿ ಮಾಡುತ್ತಿವೆ’ ಎಂದು ತಮಾಷೆ ಮಾಡಿದ್ದಾರೆ. ಅನೇಕರು ಈ ದೃಶ್ಯವನ್ನು ಮೆಚ್ಚಿದ್ಧಾರೆ.

ಮತ್ತಷ್ಟು ಇಂಥ ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ 

Published On - 1:33 pm, Sat, 13 August 22