Viral : ಬೀದಿಯಲ್ಲಿ ಈ ಕುದುರೆ ಕುಸಿದು ಬಿದ್ದ ಆ ಕ್ಷಣ…
Horse Viral Video : ನ್ಯೂಯಾರ್ಕ್‌ನ ಜನನಿಬಿಡ ರಸ್ತೆಯ ಮಧ್ಯದಲ್ಲಿ ಕುದುರೆಯೊಂದು ಕುಸಿದು ಬಿದ್ದ ಆತಂಕಕಾರೀ ವಿಡಿಯೋ ವೈರಲ್ ಆಗಿದೆ.
Viral : ನ್ಯೂಯಾರ್ಕ್ ನಗರದ ಜನನಿಬಿಡ ರಸ್ತೆಯಲ್ಲಿ ಥಟ್ಟನೆ ಎರಗಿದ ಈ ಸಂಕಟಮಯ ದೃಶ್ಯ ಯಾರ ಮನಸ್ಸನ್ನೂ ಹಿಂಡುತ್ತದೆ. NYPDಯ ಗಸ್ತು ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪ್ರಾಣಿಯನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಎಂದಿನಂತೆ ಸಾಗುತ್ತಿರುವ ಈ ಕುದುರೆ ರಸ್ತೆಮಧ್ಯೆ ಕುಸಿದು ಬೀಳು ಕಾರಣ ಏನು ಎನ್ನುವ ಪ್ರಶ್ನೆ ಉಂಟಾಗಿದೆ. ಅದಕ್ಕಿಂತ ಮೊದಲು ಮಾಲಿಕನಿಗೆ ಗಾಬರಿಯಾಗಿ ಪರಿಪರಿಯಾಗಿ ಎಬ್ಬಿಸಲು ನೋಡಿದ್ದಾನೆ. ತಕ್ಷಣವೇ ನ್ಯೂಯಾರ್ಕ್ ಪೊಲೀಸ್ ಇಲಾಖೆಗೆ ಕರೆ ಹೋಗಿದೆ. ಒಂಬತ್ತನೇ ಅವೆನ್ಯೂ ಮತ್ತು ಮ್ಯಾನ್ಹಟನ್ನ 45ನೇ ಬೀದಿಯ ಬಳಿ ಅವರು ತಕ್ಷಣವೇ ಬಂದು ತಲುಪಿದ್ದಾರೆ. ನಂತರ ನೀರು ಎರಚಿ ಅದನ್ನು ಪುನಾ ಎದ್ದು ನಿಲ್ಲುವಂತೆ ಮಾಡಿದ್ದಾರೆ.
ಕುದುರೆಯ ಮಾಲಿಕ ಅದನ್ನೆಬ್ಬಿಸಲು ಪ್ರಯತ್ನಿಸುವ ಈ ದೃಶ್ಯ ನೋಡುವುದು ಸ್ವಲ್ಪ ಕಷ್ಟವೆನ್ನಿಸುತ್ತದೆ. ಬೇಗ ಎದ್ದರೆ ಸಾಕು ಎಂಬ ಹಾರೈಕೆ ನಮಗರಿವಿಲ್ಲದೆಯೇ ಹೊಮ್ಮುತ್ತದೆ. ನಂತರ ಪಶುವೈದ್ಯಕೀಯ ಆರೈಕೆಗೆಂದು ಸಮೀಪದ ಲಾಯಕ್ಕೆ ಕರೆದುಕೊಂಡ ಹೋಗಲಾಗುತ್ತದೆ. ತಾಪಮಾನ, ಲಾಲಾರಸದ ಬಣ್ಣ ಸುಸ್ಥಿತಿಯಲ್ಲಿಯೇ ಇರುವುದು ತಿಳಿದುಬರುತ್ತದೆ. ಆದರೂ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗುತ್ತದೆ. ಈ ಕುದುರೆಗೆ ರೈಡರ್ ಎಕ್ವೈನ್ ಪ್ರೊಟೊಜೋಲ್ ಮೈಲೋಎನ್ಸೆಫಾಲಿಟಿಸ್ ಎಂಬ ರೋಗವಿರುವುದು ಪತ್ತೆಯಾಗುತ್ತದೆ. ಇದೊಂದು ನರಸಂಬಂಧಿ ಸಮಸ್ಯೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಕುದುರೆ ಆರಾಮಾಗಿ ಹುಲ್ಲು ತಿಂದುಕೊಂಡು ವಿಶ್ರಾಂತಿ ಪಡೆಯುತ್ತಿದೆ.
ಇಂಥ ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ