Viral Video: ಸೇಂಟ್ ಮಾಲೋದ ಈ ಸಮುದ್ರ ತೀರ ಮತ್ತರದ ಅಲೆಗಳ ರುದ್ರವೈಭವ
Saint Malo : ಈ ಹಳೆಯ ನಗರ, ಇಲ್ಲಿರುವ ಕಟ್ಟಡಗಳು, ಸಮುದ್ರ ತೀರ... ಕಟ್ಟಡದೆತ್ತಕ್ಕೆ ಹಾರುವ ಈ ಅಲೆಗಳು... ಈ ಭಯಂಕರ ದೃಶ್ಯವೈಭವ ನೋಡಲು ಪ್ರವಾಸಿಗರ ದಂಡು ಜಮಾಯಿಸುತ್ತಿದೆ.
Viral : ಸಾಕಷ್ಟು ಜನರು ಸಮುದ್ರ ತೀರದಲ್ಲೊಂದು ಮನೆಯಿರಬೇಕು. ಹಗಲೂರಾತ್ರಿ ಸಮುದ್ರವನ್ನು ನೋಡುತ್ತಲೇ ಇರಬೇಕು ಎಂದು ಕನಸು ಕಾಣುತ್ತಾರೆ. ಆದರೆ ಸಮುದ್ರದ ಆಳೆತ್ತರದ ಅಲೆಗಳು ನಿಮ್ಮ ಮನೆಯನ್ನು ಸ್ಪರ್ಶಿಸುವಂತಿದ್ದರೆ ನೀವು ಅಲ್ಲಿ ನಿರ್ಭಯವಾಗಿ ನಿಶ್ಚಿಂತೆಯಿಂದ ವಾಸಿಸಲು ಸಾಧ್ಯವೆ? ಫ್ರಾನ್ಸ್ನ ಬಂದರುನಗರ ಸೇಂಟ್ ಮಾಲೋಗೆ ಈಗ ಪ್ರವಾಸಿಗರ ದಂಡು ಭೇಟಿ ನೀಡುತ್ತಿದೆ. ಕಾರಣ, ಇದು ಬ್ರಿಟಾನಿ ಪ್ರದೇಶದಲ್ಲಿ ಮಧ್ಯಕಾಲೀನ ಯುಗದಲ್ಲಿ ರೂಪುಗೊಂಡ ಸುಂದರವಾದ ನಗರವಾಗಿದೆ. ಅದ್ಭುತ ಕಡಲತೀರ, ಕಾಲುವೆಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಈ ವಿಡಿಯೋದಲ್ಲಿ ಗಮನಿಸಿ, ಈ ಬೃಹದಾಕಾರದ ಅಲೆಗಳು ಆಕರ್ಷಕ ಕಟ್ಟಡವನ್ನು ತಾಕಿ ತಾಕಿ ಶಾಂತವಾಗುವುದನ್ನು ಭಯಾನಕವೂ ಸುಂದರವೂ ಇಲ್ಲಿ ಒಟ್ಟಿಗೇ ಮೇಳೈಸುತ್ತದೆ. ಅಲೆಗಳ ಈ ಏರಿಳಿತವನ್ನು ನೋಡುವುದೇ ರೋಮಾಂಚಕಾರಿ ಅನುಭವ. ಈ ದೃಶ್ಯವೈಭವ ನೋಡಲೆಂದೇ ಯುರೋಪಿನಾದ್ಯಂತ ಪ್ರವಾಸಿಗರು ಜಮಾಯಿಸುತ್ತಾರೆ.
View this post on Instagram
ಈ ಇನ್ಸ್ಟಾಗ್ರಾಂ ವಿಡಿಯೋ 30.4 ಮಿಲಿಯನ್ ವೀಕ್ಷಣೆ ಪಡೆದಿದೆ. 1.12 ಲೈಕ್ಸ್ ಹೊಂದಿದೆ. ಮಿರಾಕಲ್ ಆಫ್ ಸೌಂಡ್ ಹಾಡಿನ ಹಿನ್ನೆಲೆಯ ಈ ವಿಡಿಯೋ ವೀರ, ಬೀಭತ್ಸ ರಸದೊಂದಿಗೆ ಆಹ್ಲಾದವನ್ನೂ ಕೊಡುತ್ತದೆ. ಸಾಕಷ್ಟು ಜನರು, ಇದು ಭಯಾನಕವಾಗಿ ಎಂದೂ ಪ್ರತಿಕ್ರಿಯಿಸಿದ್ದಾರೆ.
ಮತ್ತಷ್ಟು ಇಂಥ ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 11:20 am, Sat, 13 August 22