ತನ್ನನ್ನು ತಡವಿಕೊಂಡ ವ್ಯಕ್ತಿಯನ್ನು ತಿವಿದು, ಭಯಾನಕವಾಗಿ ತುಳಿದು ಪರಾರಿಯಾಗುವ ಗೂಳಿಯ ವಿಡಿಯೋ ವೈರಲ್
ವಿಡಿಯೋದಲ್ಲಿ ಕಪ್ಪು ಟಿ-ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬ ಗೂಳಿ ಪಕ್ಕ ನಿಂತು ಅದರ ಕೊಂಬುಗಳ ಮೇಲೆ ತನ್ನ ಕೈಯನ್ನೆತ್ತುತ್ತಾನೆ. ಗೂಳಿಯು ಇದ್ದಕ್ಕಿದ್ದಂತೆ ನೆಗೆದು ಅವನನ್ನು ನೆಲಕ್ಕೆ ಕೆಡವಿ ಅಲ್ಲಿಂದ ಪರಾರಿಯಾಗುವ ಮುನ್ನ ಅವನ ಮುಖ ಮತ್ತು ತೊಡೆಯನ್ನು ಬಲವಾಗಿ ತುಳಿಯುತ್ತದೆ.
ಈ ಘಟನೆ ಅಸಲಿಗೆ ನಡೆದಿದ್ದು ಎಲ್ಲಿ ಅನ್ನೋದು ಗೊತ್ತಾಗಿಲ್ಲ ಮಾರಾಯ್ರೇ, ಆದರೆ ದೃಶ್ಯಾವಳಿ ಮಾತ್ರ ಭಯಾನಕವಾಗಿದೆ. ವಿಡಿಯೋದಲ್ಲಿ ಬಲಿಷ್ಠವಾಗಿರುವ ಗೂಳಿಯೊಂದು ಬೀದಿಯಲ್ಲಿ ಒಬ್ಬ ವ್ಯಕ್ತಿಯನ್ನು ತಿವಿದು ನೆಲಕ್ಕೆ ಕೆಡವಿ ನೋಡುಗರ ಮೈಯಲ್ಲಿ ನಡುಕ ಹುಟ್ಟುವಂತೆ ತುಳಿದು ಪರಾರಿಯಾಗುತ್ತದೆ. ಪ್ರಾಣಿ ಹಕ್ಕುಗಳನ್ನು ಉಗ್ರವಾಗಿ ಪ್ರತಿಪಾದಿಸುವ ಮತ್ತು ಅವುಗಳಿಗಾಗಿ ಹೋರಾಡುವ ಬ್ರಿಟಿಷ್ ಕಮೆಡಿಯನ್ ಮತ್ತು ನಟ ರಿಕ್ಕಿ ಗರ್ವೈಸ್ ಅವರು ಸದರಿ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ಕಪ್ಪು ಟಿ-ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬ ಗೂಳಿ ಪಕ್ಕ ನಿಂತು ಅದರ ಕೊಂಬುಗಳ ಮೇಲೆ ತನ್ನ ಕೈಯನ್ನೆತ್ತುತ್ತಾನೆ. ಗೂಳಿಯು ಇದ್ದಕ್ಕಿದ್ದಂತೆ ನೆಗೆದು ಅವನನ್ನು ನೆಲಕ್ಕೆ ಕೆಡವಿ ಅಲ್ಲಿಂದ ಪರಾರಿಯಾಗುವ ಮುನ್ನ ಅವನ ಮುಖ ಮತ್ತು ತೊಡೆಯನ್ನು ಬಲವಾಗಿ ತುಳಿಯುತ್ತದೆ.
Boom! pic.twitter.com/bNDaHsfwow
— Ricky Gervais (@rickygervais) August 28, 2022
ಕೇವಲ ಒಂದು ದಿನದ ಹಿಂದೆ ಶೇರ್ ಆಗಿರುವ ವಿಡಿಯೋಗೆ ಗರ್ವೈಸ್ ಅವರು ‘ಬೂಮ್’ ಅಂತ ಶಿರ್ಷಿಕೆ ನೀಡಿದ್ದಾರೆ. ಇದನ್ನು ಈಗಾಗಲೇ ಮೂವತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು ಸುಮಾರು 70,000 ಜನ ಲೈಕ್ ಮಾಡಿದ್ದಾರೆ.
ಒಬ್ಬ ನೆಟ್ಟಿಗ, ‘ಹೋರಿಯೊಂದನ್ನು ತಡವಿಕೊಂಡು ಅದರಿಂದ ಅಕ್ರಮಣಕ್ಕೊಳಗಾಗುವ ಸಂದರ್ಭಗಳು ಬಹಳ ವಿರಳ,’ ಎಂದು ರಿಯಾಕ್ಟ್ ಮಾಡಿದ್ದಾರೆ. ಮತ್ತೊಬ್ಬರು, ‘ಈ ವಿಡಿಯೋ ನಮಗೊಂದು ಪಾಠವನ್ನು ಕಲಿಸುತ್ತದೆ. ಮಾನವರು ಪ್ರಾಣಿಗಳ ಹಕ್ಕುಗಳನ್ನು ಗೌರವಿಸಬೇಕು. ಹಾಗೆ ಮಾಡದೆ ಹೋದರೆ ಇಂಥ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ,’ ಎಂದಿದ್ದಾರೆ.
‘ಬೇರೆಯವರಿಗೆ ಹಿಂಸಿಸುವ ಪ್ರಯತ್ನದಲ್ಲಿ ಖುದ್ದ್ದು ಹಿಂಸೆಗೊಳಗಾಗುವ ಜನರನ್ನು ನೋಡುವಾಗ ಸಹಾನುಭೂತಿ ಹುಟ್ಟುವುದಿಲ್ಲ,’ ಎಂದು ಮೂರನೇಯವರು ಹೇಳಿದ್ದಾರೆ. ‘ಜಾಗತಿಕವಾಗಿ ಮಾನ್ಯವಾಗಿರುವ ನಿಯಮವೇನೆಂದರೆ, ನಿಮಗಿಂತ ಬಲಿಷ್ಠರಾಗಿರುವವರನ್ನು ಯಾವ ಕಾರಣಕ್ಕೂ ತಡವಿಕೊಳ್ಳಬಾರದು,’ ಎಂದು ನಾಲ್ಕನೇ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
ಏತನ್ಮಧ್ಯೆ, ಇದೇ ತೆರನಾದ ಮತ್ತೊಂದು ಘಟನೆಯಲ್ಲಿ, ಗೂಳಿಯಿಂದ ಗಾಳಿಯಲ್ಲಿ ಎಸೆಯಲ್ಪಟ್ಟ ವೃದ್ಧರೊಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ಈ ಭಯಾನಕ ದೃಶ್ಯಾವಳಿ ಸಿಸಿಟಿವಿಯೊಂದರಲ್ಲಿ ಸೆರೆಯಾಗಿತ್ತು. ವೀಡಿಯೋದಲ್ಲಿ, ಆ ವ್ಯಕ್ತಿ ರಸ್ತೆಯನ್ನು ದಾಟುತ್ತಿರುವುದನ್ನು ನೋಡಿದ ಗೂಳಿಯೊಂದು ಹಿಂದಿನಿಂದ ಓಡಿಬಂದು ಅವರ ಮೇಲೆ ಮಾಡಿ ಆಕ್ರಮಣ ನಡೆಸಿತ್ತು.
ಈ ಘಟನೆಯು ಆಗಸ್ಟ್ ತಿಂಗಳ ಆರಂಭದಲ್ಲಿ ಹರಿಯಾಣದ ಫರೀದಾಬಾದನಲ್ಲಿ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡಿದ್ದ ಆ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.