Trending : ಪರಾರಿಯಾಗಲೆತ್ನಿಸುತ್ತಿದ್ದ ವರನನ್ನು ಹಿಡಿದೆಳೆದುಕೊಂಡು ಬಂದು ಮದುವೆಯಾದ ವಧು

| Updated By: ಶ್ರೀದೇವಿ ಕಳಸದ

Updated on: Sep 01, 2022 | 2:27 PM

Marriage : ಬೈಕ್​ ಮತ್ತು ರೂ. 50,000 ವರದಕ್ಷಿಣೆ ರೂಪದಲ್ಲಿ ಪಡೆದು, ಮದುವೆಯಾಗದೆ ಓಡಿ ಹೊರಟಿದ್ದ ವರನನ್ನು ಬೆನ್ನಟ್ಟಿ ವಾಪಾಸು ಕರೆದುಕೊಂಡು ಬಂದಿದ್ದಾಳೆ ಬಿಹಾರದ ಈ ವಧು.

Trending : ಪರಾರಿಯಾಗಲೆತ್ನಿಸುತ್ತಿದ್ದ ವರನನ್ನು ಹಿಡಿದೆಳೆದುಕೊಂಡು ಬಂದು ಮದುವೆಯಾದ ವಧು
ಅಂತೂ ಮದುವೆಯಾದರು
Follow us on

Trending : ವರ ತನ್ನನ್ನು ಮದುವೆಯಾಗಲು ನಿರಾಕರಿಸಿ ಪಲಾಯನ ಮಾಡಿದಾಗ ವಧು ರಸ್ತೆಗುಂಟ ಅವನನ್ನು ಹಿಂಬಾಲಿಸುತ್ತ ಓಡಾಡಿದ ವಿಡಿಯೋ ವೈರಲ್ ಆಗಿದೆ. ‘ಮೇರಿ ಶಾದೀ ಕರ್ವಾವೋ’ ವಿಡಿಯೋದಲ್ಲಿ ವಧು ವರನನ್ನು ಬೇಡಿಕೊಳ್ಳುತ್ತ ಅವನ ಹಿಂದಿಂದೆ ಓಡಾಡುವ ದೃಶ್ಯ ಮನ ಕಲಕುತ್ತದೆ. ಈ ಘಟನೆಯು ಬಿಹಾರದ ನವಾದಾದಲ್ಲಿರುವ ಭಗತ್ ಸಿಂಗ್ ಚೌಕ್‌ನಲ್ಲಿ ಸಂಭವಿಸಿದೆ. ವಧುವಿನ ಕುಟುಂಬ ಮೂರು ತಿಂಗಳ ಹಿಂದೆ ಈ ಮದುವೆಯನ್ನು ನಿಗದಿ ಮಾಡಿತ್ತು ಎನ್ನುವುದು ವರದಿಗಳಿಂದ ತಿಳಿದುಬಂದಿದೆ. ಟೈಮ್ಸ್ ನೌ ವರದಿಯ ಪ್ರಕಾರ, ಈ ಯುವತಿ ಮಾಹುಲಿ ಗ್ರಾಮದವಳಾಗಿದ್ದಾಳೆ. ವರ ಮೆಹ್ಕರ್​ ಗ್ರಾಮದವನು.

ಭಾವೀ ಅಳಿಯನಿಗೆ ವರದಕ್ಷಿಣೆ ರೂಪದಲ್ಲಿ ರೂ. 50,000 ಮತ್ತು ಮೋಟಾರ್ ಸೈಕಲ್ ಕೊಡಲಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ. ವರದಕ್ಷಿಣೆ ಇಸಿದುಕೊಂಡ ನಂತರ ಮದುವೆ ಬೇಡವೆಂದು ಓಡಿಹೋಗುತ್ತಿದ್ದ ವರನನ್ನು ಮಾರ್ಕೆಟ್​ನಲ್ಲಿ ಓಡಾಡಿ ಹಿಡಿಯಲು ಪ್ರಯತ್ನಿಸಿದ್ದಾಳೆ. ಈ ಸುದ್ದಿ ಪೊಲೀಸರಿಗೂ ಗೊತ್ತಾಗಿದೆ. ನಂತರ ಅವಳೇ ಅವನನ್ನು ವಾಪಾಸು ಕರೆತಂದಿದ್ದಾಳೆ. ಆಗ ಪೊಲೀಸರು ಎರಡೂ ಕಡೆಯ ಕುಟುಂಬದವರನ್ನು ಠಾಣೆಗೆ ಕರೆದು ಸಲಹೆ ನೀಡಿದ ಮೇಲೆ ದೇವಸ್ಥಾನದಲ್ಲಿ ಮದುವೆ ನಡೆದಿದೆ. ಅಂತೂ ಈ ಯುವಕ-ಯುವತಿ ದಾಂಪತ್ಯ ಜೀವನಕ್ಕೆ ಹೀಗೆಲ್ಲ ಕಾಲಿಟ್ಟಿದ್ದಾರೆ.

ಇದನ್ನೂ ಓದಿ
Viral Video : ತನ್ನ ಹುಡುಗನಿಗಾಗಿ ಪಂಜಾಬಿ ಕಲಿತು ಮಾತನಾಡಿದ್ದಾಳೆ ಈ ಕೆನಡಿಯನ್ ಯುವತಿ
Viral Video : ‘ಮಸಾಕಾ ಕಿಡ್ಸ್​ ಆಫ್ರಿಕಾನಾ’ದ ಮಕ್ಕಳು ಈ ಸಲ ಜಸ್ಟಿನ್​ ಬೈಬರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ
Viral Video: ಆಕಾಶಕ್ಕೆ ಈ ಬಣ್ಣದ ಕುಂಚಿಗೆ ಕಟ್ಟಿದರಾರೋ? ಚೀನಾದಲ್ಲಿ ಮೂಡಿದ ಕಾಮನಬಿಲ್ಲು
Viral Video : ನಿರೀಕ್ಷೆ ಇಲ್ಲದೆ ಪ್ರೀತಿಸುವುದಷ್ಟೇ ಗೊತ್ತು ಈ ಜೀವಗಳಿಗೆ

 

ಈ ಮದುವೆಗಳೆಂದರೆ ಯಾಕಿಷ್ಟು ಅವಾಂತರ? ಇನ್ನು ಮದುವೆಯ ನಂತರ? ಯಾರು ಕಂಡವರು!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:24 pm, Thu, 1 September 22